More

    ಮಾಲಗಿತ್ತಿಯಲ್ಲಿ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಸುತ್ತಲಿನ ಗ್ರಾಮಗಳ ಜನರು

    ಹನುಮಸಾಗರ: ಎರಡ್ಮೂರು ತಿಂಗಳಿಂದ ಹನುಮನಾಳ ಹೋಬಳಿ ವ್ಯಾಪ್ತಿಯ ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಸೋಮವಾರ ಬೆಳಗಿನ ಜಾವ ಮಾಲಗಿತ್ತಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಇಟ್ಟಿದ್ದ ಬೋನಿಗೆ ಬಿದ್ದಿದೆ.

    ವಾರಿಕಲ್, ಮಿಟ್ಟಲಕೋಡ, ಗುಡದ್ದದೇವಲಾಪುರ, ಗಡಚಿಂತಿ ಸೇರಿ ಕೆಲ ಗ್ರಾಮಗಳಲ್ಲಿ ಎರಡ್ಮೂರು ತಿಂಗಳಲ್ಲಿ ನಾಯಿ, ಹಸು ತಿಂದು ಹಾಕುತ್ತಿದ್ದ ಚಿರತೆ 20ಕ್ಕೂ ಹೆಚ್ಚು ಹಳ್ಳಿಗಳ ಜನರಲ್ಲಿ ಭಯ ಹುಟ್ಟಿಸಿತ್ತು. ಅದರಲ್ಲೂ ಮಾಲಗಿತ್ತಿ, ಗಡಚಿಂತಿ, ನಾಗೇಂದ್ರಗಡ ಸುತ್ತ್ತಲಿನ ಜನರು ಕಂಗೆಟ್ಟಿದ್ದರು. ಇದರಿಂದ ದನಗಾಹಿ, ಕುರಿಗಾಹಿಗಳು ಅರಣ್ಯ ಪ್ರದೇಶದಲ್ಲಿ ಕುರಿ, ದನ ಮೇಯಿಸುವುದಕ್ಕೆ, ರೈತರು ಒಬ್ಬರೇ ಜಮೀನುಗಳಿಗೆ ಹೋಗಲು ಹಿಂಜರಿಯುತ್ತಿದ್ದರು. ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆ ಕಳೆದ ಶನಿವಾರ ನಾಗೇಂದ್ರಗಡ, ಗಡಚಿಂತಿ, ಮಾಲಗಿತ್ತಿ ಗುಡ್ಡದಲ್ಲಿ ಬೋನು ಅಳವಡಿಸಲಾಗಿತ್ತು. ಸೋಮವಾರ ಮಾಲಗಿತ್ತಿ ಅರಣ್ಯ ಪ್ರದೇಶದಲ್ಲಿ ನಾಯಿಯನ್ನು ಬೆನ್ನಟ್ಟಿ ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಇದರಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

    ಚಿರತೆ ಸೆರೆಗೆ ಬೋನು ಅಳವಡಿಸಿದ್ದ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಚೈತ್ರಾ ಮೆಣಸಿನಕಾಯಿ , ಉಪ ವಲಯ ಅರಣ್ಯಾಧಿಕಾರಿ ಲಾಲ್ ಸಾಬ್ ಸೂಳಿಬಾವಿ, ಅರಣ್ಯ ರಕ್ಷಕರಾದ ಕಳಕಪ್ಪ ಬ್ಯಾಳಿ, ಶಂಕರಗೌಡ ಅಕ್ಕೇರೆ ಹಾಗೂ ಸಿಬ್ಬಂದಿ ಮಾಯಪ್ಪ, ಶೇಖಪ್ಪ, ದೇವಪ್ಪ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts