More

    ಅಂತರಂಗ: ಸಂಸಾರವೆಂಬ ಹಗೆ…

    ಹುಟ್ಟಿದ ಮೇಲೆ ಸಾವು ನಿಶ್ಚಿತ. ಇದನ್ನು ಯಾರು ಯಾವ ಪ್ರಮಾಣ ಕೊಟ್ಟು ಮಾರ್ಪಡಿಸುವುದಕ್ಕೂ ಸಾಧ್ಯವಿಲ್ಲ. ಸಾವು ಕಾಲಾಂತರದಿಂದ ಹುಟ್ಟಿದ ಪ್ರಾಣಿಗಳ ಪ್ರಾಣವನ್ನು ನುಂಗುತ್ತಲೇ ಬಂದಿದೆ.

    ಸಂಸಾರವೆಂಬ ಹಗೆಯಯ್ಯ, ತಂದೆ,

    ಎನ್ನ ವಂಶವಂಶ ತಪ್ಪದೆ ಅರಸಿಕೊಂಡು ಬರುತ್ತಿದೆಯಯ್ಯ

    ಎನ್ನುವನರಸಿಯರಸಿ ಹಿಡಿದು ಕೊಲ್ಲುತ್ತಿದೆಯಯ್ಯ

    ನಿಮ್ಮ ಮರೆವೊಕ್ಕೆ ಕಾಯಯ್ಯ

    ಎನ್ನ ಬಿನ್ನಪವನವಧಾರು, ಚೆನ್ನಮಲ್ಲಿಕಾರ್ಜುನಯ್ಯ

    ಅಂತರಂಗ: ಸಂಸಾರವೆಂಬ ಹಗೆ...ಎಂದು ಅಕ್ಕಮಹಾದೇವಿ ಬೇಡಿಕೊಂಡಿದ್ದಾಳೆ. ನಾವು ಈ ಸಾವನ್ನು ತಪ್ಪಿಸಿಕೊಂಡು ಬಾಳಲು ಸಾಧ್ಯವೇ? ಸಾವು ಬರಬಾರದೆಂಬುದು ಎಲ್ಲರ ಅಭೀಪ್ಸೆ. ಆದರೆ ಹುಟ್ಟು-ಸಾವು ಯಾರ ಕೈಯೊಳಗೂ ಇಲ್ಲ. ಆದರೆ ಹುಟ್ಟು-ಸಾವಿನ ಮಧ್ಯೆ ಇರುವ ಅವಧಿ ಮಾತ್ರ ನಮ್ಮ ಕೈಯಲ್ಲಿದೆ. ಈ ಸಮಯವನ್ನು ವಿಷಯಪ್ರಪಂಚದತ್ತ ಬಹಿಮುಖವಾಗಿ ಹರಿಯಗೊಡದೆ ಪರಮಾತ್ಮನತ್ತ ಹರಿಸಬೇಕಾಗಿದೆ. ಮಾನವರ ವಿಷಯಪ್ರಪಂಚದ ಕೊರತೆ ತುಂಬುವುದಿಲ್ಲ. ಕುಬೇರನ ಭಂಡಾರವನ್ನೇ ಎದುರಿಗೆ ತಂದಿಟ್ಟರೂ ದಾಹ ಆರುವುದಿಲ್ಲ. ಅಲ್ಲಮರ ವಚನ ಕೇಳಿ.

    ತನುವಿನ ಕೊರತೆಗೆ ಸುಳಿಸುಳಿದು / ಮನದ ಕೊರತೆಗೆ ನೆನೆನೆನೆದು

    ಭಾವದ ಕೊರತೆಗೆ ತಿಳಿತಿಳಿದು / ಶಬ್ದದ ಕೊರತೆಗೆ ಉಲಿಉಲಿದು

    ಗುಹೇಶ್ವರನೆಂಬ ಲಿಂಗ ಮನದಲ್ಲಿ ನೆಲೆಗೊಳ್ಳದಾಗಿ

    ಮಾನವಕೋಟಿಯ ತನು ಆ ಒಡೆಯನ ಕೊರತೆಯಿಂದ ಸುಳಿಯಬೇಕು. ಮನವು ಮಹಾದೇವನ ಕೊರತೆಯಿಂದ ನೆನೆಯಬೇಕು. ಭಾವವು ಪರಮಾತ್ಮನ ಅಸ್ತಿತ್ವದ ಅರಿವನ್ನು ತುಂಬಿಕೊಳ್ಳಬೇಕು. ವಿಷಯಪ್ರಪಂಚವನ್ನು ತುಂಬಿಸಿ ಸುಖದ ಉಸಿರು ಬಿಡುವುದು ಯಾರಿಗೂ ಸಾಧ್ಯವಿಲ್ಲ. ಈ ಪ್ರಪಂಚ ಕೊರತೆಯ ಆಗರ. ಹುಟ್ಟು-ಸಾವುಗಳ ನಡುವೆ ದೇಹ, ರೂಪ, ಕ್ರಿಯಾಚೈತನ್ಯ. ಕೆಲಕಾಲ ತೋರಿ ಆಡಿ ಕೊನೆಗೆ ಈ ದೇಹವನ್ನು ಪಂಚಮಹಾಭೂತಗಳಿಗೆ ಅರ್ಪಿಸಿ ಮಾಯವಾಗುವ ಈ ಮಾನವನ ನಿಜವಾದ ಕರ್ತವ್ಯವೇನು? ಈ ಮಹಾ ಸಮಸ್ಯೆಗಳನ್ನು ಬಿಡಿಸಿಕೊಂಡು ಬದುಕಲು ಕಲಿಸುವವರು ಸಂತರು-ಶರಣರು. ಅವರ ಮಾರ್ಗದಲ್ಲಿ ಮುನ್ನಡೆಯೋಣ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts