More

    ಗೌರಿ-ಗಣೇಶ ಹಬ್ಬದ ಪ್ರಯುಕ್ತ ಕನ್ನಡಿಗರಿಗೆ ಇನ್ನೊಂದು ಓಟಿಟಿ

    ಅಮೇಜಾನ್​ ಪ್ರೈಮ್​, ನೆಟ್​ಫ್ಲಿಕ್ಸ್​ ಅಲ್ಲದೆ ಈಗಾಗಲೇ ಸಾಕಷ್ಟು ಓವರ್​ ದಿ ಟಾಪ್​ (ಓಟಿಟಿ)ಗಳಲ್ಲಿ ಕನ್ನಡ ಚಿತ್ರಗಳು ಮತ್ತು ವೆಬ್​ಸೀರೀಸ್​ಗಳು ಸ್ಟ್ರೀಮಿಂಗ್​ ಆಗುತ್ತಿವೆ. ಇದಲ್ಲದೆ ಕನ್ನಡ ಮತ್ತು ಕನ್ನಡಿಗರಿಗಾಗಿಯೇ ಎಕ್ಸ್​ಕ್ಲೂಸಿವ್​ ಆಗಿ ಓನ್ಲಿ ಕನ್ನಡ ಮತ್ತು ಪ್ರಾಗುಣಿ ಎಂಬ ಓಟಿಟಿಗಳು ಕಾರ್ಯನಿರ್ವಹಿಸುತ್ತಿವೆ.

    ಈ ಮಧ್ಯೆ, ಫಿಲ್ಮ್​ ಶಾಪ್​ ಎಂಬ ಇನ್ನೊಂದು ಹೊಸ ಓಟಿಟಿ ಇಂದಿನಿಂದ ಪ್ರಾರಂಭವಾಗಿದೆ. ಗೌರಿ-ಗಣೇಶ ಹಬ್ಬದ ಪ್ರಯುಕ್ತ ಇಂದಿನಿಂದ ಈ ಓಟಿಟಿ ಶುರುವಾಗಿದ್ದು, ಗೂಗಲ್​ ಪ್ಲೇಸ್ಟೋರ್​ನಲ್ಲಿ ಈ ಆಪ್​ ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ.

    ಇದನ್ನೂ ಓದಿ: ಲೊಕೇಶನ್​ ಹುಡುಕುವವರಿಗೆ ಹೀಗೊಂದು ಪುಸ್ತಕ!

    ಅಂದಹಾಗೆ, ಈ ಓಟಿಟಿ ಶುರು ಮಾಡಿರುವುದು ನಟ-ನಿರ್ದೇಶಕ-ನಿರ್ಮಾಪಕ ಬಿ.ಆರ್. ಕೇಶವ್​. ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಚಿತ್ರಗಳನ್ನು ನಿರ್ದೇಶಿಸಿರುವ ಅವರು, ಈ ಓಟಿಟಿ ಶುರು ಮಾಡಿದ್ದಾರೆ.

    ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡುವ ಅವರು, ‘ಈಗ ಎಲ್ಲಾ ಕಡೆ ಓಟಿಟಿಯದ್ದೇ ಸುದ್ದಿ. ನನ್ನ ಹತ್ತಿರವೂ ಓಟಿಟಿಗೆ ಹೊಂದುವಂತಹ 10 ಸಿನಿಮಾಗಳು, ನಾಲ್ಕು ವೆಬ್​ಸೀರೀಸ್​ಗಳು ಇದ್ದವು. ಈಗ ಮೊದಲ ಹಂತವಾಗಿ ಎರಡು ಸಿನಿಮಾಗಳು ಮತ್ತು ಎರಡು ವೆಬ್​ ಸೀರೀಸ್​ ಮುಂದಿಟ್ಟುಕೊಂಡು ಈ ಓಟಿಟಿ ಶುರು ಮಾಡಿದ್ದೇನೆ’ ಎನ್ನುತ್ತಾರೆ.

    ಇದನ್ನೂ ಓದಿ: ಶಾರೂಖ್​ – ಹಿರಾನಿ ಸಿನಿಮಾ ಯಾವಾಗ? ಉತ್ತರ ಇಲ್ಲಿದೆ ನೋಡಿ …

    ಸದ್ಯಕ್ಕೆ ‘ಸಂರಕ್ಷಣೆ’ ಮತ್ತು ‘ಮಾಸ್ಕ್​’ ಎಂಬ ಎರಡು ಚಿತ್ರಗಳು ಈ ಓಟಿಟಿಯಲ್ಲಿ ಲಭ್ಯವಿದೆ. ಇನ್ನು ‘ಕರುನಾಡು’ ಮತ್ತು ‘ಅಮೇರಿಕ ಅಮೇರಿಕ’ ಎಂಬ ಟ್ರಾವಲ್​ ಶೋಗಳು ಸಹ ಸಿಗುತ್ತಿವೆ. ಈ ಚಿತ್ರಗಳು ಮತ್ತು ಸರಣಿಗಳನ್ನು ಚಂದಾದಾರರು ಮಾತ್ರ ನೋಡಬಹುದು.

    ಮುಂದಿನ ದಿನಗಳಲ್ಲಿ ಹಲವು ಸಿನಿಮಾ ಮತ್ತು ಕಾರ್ಯಕ್ರಮಗಳು ಈ ಓಟಿಟಿಯಲ್ಲಿ ಸಿಗಲಿದೆಯಂತೆ. ಸದ್ಯಕ್ಕೆ ಬಿ.ಆರ್​. ಕೇಶವ್​ ಅವರು ತಮ್ಮ ನಿರ್ಮಾಣದ ಸಿನಿಮಾ ಮತ್ತು ಕಾರ್ಯಕ್ರಮಗಳನ್ನು ಮಾತ್ರ ಈ ಓಟಿಟಿಯಲ್ಲಿ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಬೇರೆಯವರು ನಿರ್ಮಿಸಿ-ನಿರ್ದೇಶಿಸದ ಕಾರ್ಯಕ್ರಮಗಳಿಗೂ ಅವಕಾಶ ನೀಡಲಾಗುವುದಂತೆ.

    ನಂಗೊಂದು ಸಿನಿಮಾ ಮಾಡಿಕೊಡಿ ಸಾರ್​ … ಉಪ್ಪಿಗೆ ಶ್ರೀಮುರಳಿ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts