

ಬೆಂಗಳೂರು: ಎರಡು ವಾರಗಳ ಹಿಂದಷ್ಟೇ ಬಿಡುಗಡೆಯಾಗಿತ್ತು ನವೀನ್ ಶಂಕರ್ ಅಭಿನಯದ 'ಧರಣಿ ಮಂಡಲ ಮಧ್ಯದೊಳಗೆ' ಚಿತ್ರ. ಈಗ ಈ ತಂಡದ ಬಹಳಷ್ಟು ಕಲಾವಿದರು ಮತ್ತು ತಂತ್ರಜ್ನರು ಸೇರಿಕೊಂಡು ಇನ್ನೊಂದು ಹೊಸ ಚಿತ್ರವನ್ನು ಪ್ರಾರಂಭಿಸಿದ್ದಾರೆ. ಹೆಸರು 'ಕೆಏ 15'.
ಇದನ್ನೂ ಓದಿ: ಬಾಲಾಜಿ ಫೋಟೋ ಸ್ಟುಡಿಯೋದಿಂದ ‘ಪುಗಸಟ್ಟೆ’ ಹಾಡು ಬಂತು …
'ಕೆಎ 15' ಕಥೆ ಏನು ಎಂದು ಚಿತ್ರತಂಡ ಬಾಯಿಬಿಟ್ಟಿಲ್ಲ. ಕಾರಣ ಚಿತ್ರ ಇನ್ನಷ್ಟೇ ಶುರುವಾಗಬೇಕಿದೆ. ಸದ್ಯಕ್ಕೆ ಶೀರ್ಷಿಕೆ ಅನಾವರಣ ಮತ್ತು ಸ್ಕ್ರಿಪ್ಟ್ ಪೂಜೆ ಮುಗಿದಿದೆ. ಇನ್ನೂ ಚಿತ್ರ ಶುರುವಾಗುವುದಕ್ಕೆ ಮತ್ತು ಮುಗಿಯುವುದಕ್ಕೆ ಸಾಕಷ್ಟು ಸಮಯ ಇರುವುದರಿಂದ, ಹಂತಹಂತವಾಗಿ ಚಿತ್ರದ ಬಗ್ಗೆ ವಿವರಗಳನ್ನು ನೀಡುವುದಕ್ಕೆ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
'ಕೆಎ 15' ಎಂಬುದು ಸಾಗರದ ಆರ್ಟಓ ರಿಜಿಸ್ಟ್ರೇಶನ್ ಆಗಿದ್ದು, ಸಾಗರದ ಸುತ್ತಮುತ್ತ ನಡೆಯುವ ಕಥೆ ಇದಾಗಿರಬಹುದು ಎಂದು ಊಹಿಸಲಾಗಿದೆ. ಇನ್ನು, ಈ ಶೀರ್ಷಿಕೆ ಅಪೂರ್ಣ ಎಂದು ಹೇಳಲಾಗುತ್ತಿದ್ದು, ಪೂರ್ತಿ ಶೀರ್ಷಿಕೆಯನ್ನು ಇನ್ನೊಮ್ಮೆ ಬಿಡುಗಡೆ ಮಾಡಲಾಗುತ್ತದಂತೆ. ಬಹುಶಃ ಕೆಎ ಎಂಬುದು ಚಿತ್ರದ ಇಬ್ಬರು ನಾಯಕರ ಹೆಸರುಗಳಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ‘ಜಸ್ಟ್ ಪಾಸ್’ ಆದವರಿಗೇ ಒಂದು ಪ್ರತ್ಯೇಕ ಕಾಲೇಜ್ …
'ಕೆಎ 15' ಚಿತ್ರಕ್ಕೆ ಕೀರ್ತನ್ ಪೂಜಾರಿ ಛಾಯಾಗ್ರಹಣ, ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚಿನ್ನೋಜಿ ರಾವ್ ಅವರ ಸಂಗೀತವಿದೆ.