More

    ಯೆಸ್​ ಬ್ಯಾಂಕ್​ ಪ್ರಕರಣದಲ್ಲಿ ಉದ್ಯಮಿ ಅನಿಲ್​ ಅಂಬಾನಿಗೆ ಸಂಕಷ್ಟ: ವಿಚಾರಣೆಗೆ ಬರುವಂತೆ ಇಡಿ ಸಮನ್ಸ್​

    ನವದೆಹಲಿ: ಯೆಸ್​ ಬ್ಯಾಂಕ್​ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಉದ್ಯಮಿ ಅನಿಲ್​ ಅಂಬಾನಿ ಹೆಸರು ಕೇಳಿಬಂದಿದ್ದು, ವಿಚಾರಣೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ಸೋಮವಾರ ಸಮನ್ಸ್​ ನೀಡಿದೆ.

    ಮುಂಬೈನಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲು ಅಂಬಾನಿಗೆ ಸೂಚಿಸಲಾಗಿದೆ. ಯೆಸ್​ ಬ್ಯಾಂಕ್​ನಿಂದ ಪಡೆದ ಸಾಲದ ಮೇಲೆ ವಿಚಾರಣೆ ನಡೆಯಲಿದೆ. ಇದರ ನಡುವೆ ಅಂಬಾನಿ ಆರೋಗ್ಯ ಪರಿಸ್ಥಿತಿಯ ಕಾರಣ ನೀಡಿ ವಿಚಾರಣೆಗೆ ಹಾಜರಾಗಲು ಸಮಯ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇದೇ ವಾರದಲ್ಲಿ ರಿಲಯನ್ಸ್​ ಗ್ರೂಪ್​ನ ಇತರೆ ಅಧಿಕಾರಿಗಳನ್ನು ವಿಚಾರಣೆಗೆ ಇಡಿ ಕರೆಯಲಿದೆ ಎಂದು ಹೇಳಲಾಗುತ್ತಿದೆ. ಸಾಲದ ಸುಳಿಯಲ್ಲಿ ಸಿಲುಕಿ ಆರ್ಥಿಕವಾಗಿ ದಿವಾಳಿಯಾಗಿರುವ ಯೆಸ್​ ಬ್ಯಾಂಕ್​ ಅನ್ನು ಭಾರತೀಯ ರಿಸರ್ವ್​ ಬ್ಯಾಂಕ್​ ಸೂಪರ್​ ಸೀಡ್​ ಆಗಿ ಮಾಡಿ, ನಗದು ವಿತ್​ಡ್ರಾ ಮಿತಿಯನ್ನು 50 ಸಾವಿರಕ್ಕೆ ನಿಗದಿಪಡಿಸಿದೆ. ಇತ್ತ ಗ್ರಾಹಕರೂ ಕೂಡ ಕಂಗಾಲಾಗಿದ್ದು, ತಮ್ಮ ಹಣ ಹಿಂಪಡೆಯಲು ಸಾಕಷ್ಟು ಶ್ರಮ ಪಡುತ್ತಿದ್ದಾರೆ. ಖುಷಿಯ ವಿಚಾರವೆಂದರೆ ಕೇಂದ್ರ ಸರ್ಕಾರ ಗ್ರಾಹಕರ ಬೆನ್ನಿಗೆ ನಿಂತಿದ್ದು, ಯೆಸ್​ ಬ್ಯಾಂಕ್​ ಪುನಶ್ಚೇತನಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ದೇಶದ ಬಹು ದೊಡ್ಡ ಬ್ಯಾಂಕ್​ ಎಸ್​ಬಿಐ ಹಾಗೂ ಐಸಿಐಸಿಐ ಬ್ಯಾಂಕ್​ ಯೆಸ್​ ಬ್ಯಾಂಕ್​ನಲ್ಲಿ ಹೂಡಿಕೆ ಮಾಡಿದ್ದು ಯೆಸ್​ ಬ್ಯಾಂಕ್​ ಮೊದಲಿನ ಸ್ಥಿತಿಗೆ ತರುವ ಪ್ರಯತ್ನಗಳು ನಡೆಯುತ್ತಿದೆ..

    ಇನ್ನೊಂದೆಡೆ ಸಿಬಿಐ ಕೂಡ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ. ಯೆಸ್​ ಬ್ಯಾಂಕ್​ ಸಂಸ್ಥಾಪಕ ರಾಣಾ ಕಪೂರ್​ ಮತ್ತು ಆತನ ಪತ್ನಿ ಬಿಂದು ಕಪೂರ್​ ದೆಹಲಿ ಮುಖ್ಯ ಪ್ರದೇಶದಲ್ಲಿ ಆಸ್ತಿ ಖರೀದಿಸಿರುವುದಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್​)

    ಹೆಲ್ಪ್​ಲೈನ್​ಗಳಿಗೆ ಕರೆ ಮಾಡುವ ಮುನ್ನ ಹುಷಾರ್​! ಪಾರಿವಾಳವನ್ನು ರಕ್ಷಿಸಲು ಹೋಗಿ ಒಂದು ಲಕ್ಷ ರೂಪಾಯಿ ಕಳೆದುಕೊಂಡ

    ಐಸಿಸ್​ ಸೇರಲು ದೇಶ ತೊರೆದಿದ್ದ ಕೇರಳ ಮಹಿಳೆಯರಿಬ್ಬರಿಗೆ ಆಫ್ಘಾನ್​ನಲ್ಲಿ ನರಕ ದರ್ಶನ: ತವರಿಗೆ ಮರಳುವ ಬಯಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts