More

    ದೇಶದ ಪ್ರಗತಿಗೆ ಶಿಕ್ಷಣವೇ ಮುಖ್ಯಕಾರಣ: ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆ

    ಮಂಡ್ಯ: ವಿದ್ಯಾರ್ಥಿಗಳು ಜೀವನದಲ್ಲಿ ಉನ್ನಮಟ್ಟದ ಸಾಧನೆ ಮಾಡಲು ಶಿಕ್ಷಣ ಪ್ರಬಲವಾದ ಅಸ್ತ್ರ ಎಂದು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.
    ನಗರದ ಹೊರವಲಯದ ಅನಿಕೇತನ ಸ್ಕೂಲ್ ಆಫ್ ಎಜುಕೇಷನ್ ಹಾಗೂ ಅನಿಕೇತನ ಪಿಯು ಕಾಲೇಜು ವತಿಯಿಂದ ಸ್ಕೂಲ್‌ನಲ್ಲಿ ಆಯೋಜಿಸಿದ್ದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಜಾಗತಿಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ನಾವಿದ್ದೇವೆ. ಪ್ರತಿಯೊಬ್ಬರೂ ಶಿಕ್ಷಣವನ್ನು ಕಲಿತು ವಿದ್ಯಾವಂತರಾಗಬೇಕು. ಅವಕಾಶಗಳು ಮುಕ್ತವಾಗಿ ತೆರೆದುಕೊಂಡಿವೆ. ಅವುಗಳನ್ನು ಬಳಸಿಕೊಂಡು ಸಾಧನೆಯತ್ತ ಮುನ್ನಡೆಯಬೇಕು. ಉತ್ತಮವಾದ ವಿದ್ಯಾಭ್ಯಾಸಕ್ಕೆ ಬೇಕಾದ ಸೌಲಭ್ಯಗಳನ್ನು ಎಲ್ಲ ಸರ್ಕಾರಗಳು ನೀಡುತ್ತಾ ಬಂದಿವೆ. ವಿದ್ಯಾರ್ಥಿಗಳು ಅವೆಲ್ಲವನ್ನೂ ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
    ಭಾರತ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ. ಇಲ್ಲಿ ಏನನ್ನಾದರೂ ಸಾಧಿಸಬೇಕಾದರೆ ನಮ್ಮಲ್ಲಿರುವ ಏಕೈಕ ಅಸ್ತ್ರವೆಂದರೆ ಶಿಕ್ಷಣ. ಮಕ್ಕಳಿಗೆ ಬೇರಾವುದೇ ಆಸ್ತಿ ಮಾಡುವುದು ಬೇಡ. ಶಿಕ್ಷಣವನ್ನು ಆಸ್ತಿಯನ್ನಾಗಿ ನೀಡಿದರೆ ಅದು ಅವರ ಬಾಳನ್ನು ಬೆಳಗುತ್ತದೆ. ಇಂದು ನಮ್ಮ ದೇಶ ಪ್ರಗತಿಯತ್ತ ಸಾಗುತ್ತಿದೆ ಎಂದಾದರೆ ಅದು ಶಿಕ್ಷಣದಿಂದ ಮಾತ್ರ ಎಂದು ಹೇಳಿದರು
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹಿಂದೆ ಗುಣಮಟ್ಟದ ಶಿಕ್ಷಣ ಸಿಗುತ್ತಿರಲಿಲ್ಲ. ಅವರೆಲ್ಲರೂ ಶಿಕ್ಷಣದಲ್ಲಿ ಹಿಂದುಳಿದಿದ್ದರು. ಪ್ರಸ್ತುತ ಹಳ್ಳಿಗಾಡಿನಲ್ಲೂ ವಿದ್ಯಾಸಂಸ್ಥೆಗಳು ಸ್ಥಾಪನೆಗೊಂಡು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಗ್ರಾಮಾಂತರ ಪ್ರದೇಶದಲ್ಲೂ ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಶಿಷ್ಟವಾದ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪೋಷಿಸುವುದು ಶಿಕ್ಷಕರು ಮತ್ತು ಪಾಲಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
    ಗ್ರಾಮೀಣ ಭಾಗದಲ್ಲಿ ಒಂದು ಸಂಸ್ಥೆಯನ್ನು ತೆರೆದು ಹಳ್ಳಿಗಾಡಿನ ಮಕ್ಕಳಿಗೆ ನಗರದಲ್ಲಿ ದೊರೆಯುವ ಶಿಕ್ಷಣವನ್ನು ಸಿಗುವಂತೆ ಮಾಡಿರುವುದು ಅಭಿನಂದನೀಯ. ಮಕ್ಕಳಿಗೆ ಶಿಕ್ಷಣ ಕೊಡುವುದಕ್ಕಿಂತ ಪುಣ್ಯದ ಕೆಲಸ ಬೇರೊಂದಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯೂ ವಿದ್ಯಾವಂತರಾಗಿ ದೇಶಕ್ಕೆ ಕೊಡುಗೆ ನೀಡುವಂತೆ ಆಶಿಸಿದರು.
    ಡಿಡಿಪಿಯು ಸಿ.ಉಮೇಶ್, ಡಾ.ಎಸ್.ಚುಂಚೇಗೌಡ, ಕೆ.ಎಂ.ಜಗದೀಶ್, ಎಚ್.ಎಸ್.ವಿಜಯಗೌಡ, ಡಾ.ರಾಮಲಿಂಗಯ್ಯ, ಕೆ.ಸಿ.ಜಯರಾಂ, ಕೆ.ಎಸ್.ಬಸವರಾಜು, ಚಂದ್ರಶೇಖರ್ ಇತರರಿದ್ದರು
    ದಶಮಾನೋತ್ಸವದ ಅಂಗವಾಗಿ ಚರ್ಮರೋಗ ತಜ್ಞ ಡಾ.ಎಸ್.ಸಿ.ಶಂಕರೇಗೌಡ, ಸಮಾಜಸೇವಕ ಎಂ.ಯೋಗೇಶ್, ಕನ್ನಿಕಾ ನವೋದಯ ತರಬೇತಿ ಕೇಂದ್ರದ ಸಂಸ್ಥಾಪಕಿ ಎಚ್.ಆರ್.ಕನ್ನಿಕಾ ಅವರನ್ನು ಅಭಿನಂದಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts