More

    ಜಟ್ಟಿ ವಿಸ್ತರಣೆಗೆ ಕಾರ್ಯಯೋಜನೆ, ಸಚಿವ ಅಂಗಾರ ಭರವಸೆ

    ಮಂಗಳೂರು: ದೀರ್ಘಕಾಲದಿಂದ ಬಾಕಿ ಉಳಿದಿರುವ ತೃತೀಯ ಹಂತದ ಮಂಗಳೂರು ಮೀನುಗಾರಿಕೆ ಜಟ್ಟಿ ವಿಸ್ತರಣೆ ವಿವಿಧ ಹಂತಗಳಲ್ಲಿ ಪೂರ್ಣಗೊಳಿಸಲು ಕಾರ್ಯಯೋಜನೆ ರೂಪಿಸಲಾಗುವುದು ಎಂದು ಮೀನುಗಾರಿಕಾ ಸಚಿವ ಅಂಗಾರ ತಿಳಿಸಿದ್ದಾರೆ.

    ದಕ್ಷಿಣ ಕನ್ನಡ ಮೀನುಗಾರಿಕೆ ಇಲಾಖೆ ಮಂಗಳವಾರ ಆಯೋಜಿಸಿದ ಎ್ಎ್ಪಿಒ(ಫಿಶ್ ಫಾರ್ಮರ್ಸ್‌ ಪ್ರೊಡ್ಯೂಸರ್ಸ್‌ ಆರ್ಗನೈಸೇಶನ್) ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಬಂದರಿನಲ್ಲಿ ಅಗತ್ಯ ಶಾಶ್ವತ ಕ್ರಮಗಳ ಜತೆಗೆ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು. ವ್ಯವಸ್ಥಿತವಾಗಿ ಬಂದರು ರಚನೆ ನಿಟ್ಟಿನಲ್ಲಿ ಗಮನ ಹರಿಸಲಾಗುವುದು ಎಂದರು. 2020-21ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ನಾನಾ ಯೋಜನೆಗಳ ಸೌಲಭ್ಯಗಳನ್ನು ಸಚಿವರು ಫಲಾನುಭವಿಗಳಿಗೆ ವಿತರಿಸಿದರು.

    ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಡಿ.ವೇದವ್ಯಾಸ ಕಾಮತ್, ಕರಾವಳಿಯ ಮೀನುಗಾರರು ಮೀನುಗಾರಿಕೆ ನಡೆಸುವ ಸಂದರ್ಭ ಎದುರಿಸುತ್ತಿರುವ ಸಮಸ್ಯೆಗೆ ತಾಂತ್ರಿಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಅಗತ್ಯವಿದೆ ಎಂದರು.

    ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ಮಾತನಾಡಿ, ತೃತೀಯ ಹಂತದ ಜೆಟ್ಟಿ ನಿರ್ಮಾಣದ ಕಾಮಗಾರಿ 2010ರಲ್ಲಿ ಆರಂಭವಾದರೂ ಹಸಿರು ಪೀಠದ ಸಮಸ್ಯೆಯಿಂದ ಬಾಕಿ ಉಳಿದಿದೆ ಎಂದರು.
    ಇಲಾಖೆ ಸಿಬ್ಬಂದಿ ಗಿರೀಶ್ ಹಾಗೂ ಯೋಗೀಶ್ ಎ್ಎ್ಪಿಒ ಮಾಹಿತಿ ಶಿಬಿರ ನಡೆಸಿಕೊಟ್ಟರು. ಶಾಸಕ ಡಾ.ಭರತ್ ಶೆಟ್ಟಿ, ಪಾಲಿಕೆ ಸದಸ್ಯ ಅಬ್ದುಲ್ ಲತ್ೀ, ಮೀನುಗಾರಿಕಾ ಇಲಾಖೆ ನಿರ್ದೇಶಕ ಎ.ರಾಮಾಚಾರಿ, ಕೆಎ್ಡಿಸಿ ವ್ಯವಸ್ಥಾಪಕ ನಿರ್ದೇಶಕ ದೊಡ್ಡಮನಿ, ಪರ್ಸಿನ್ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಶಶಿಕುಮಾರ್ ಬೆಂಗ್ರೆ, ಹಸಿ ಮೀನುಗಾರರ ಸಂಘದ ಇಸ್ಮಾಯಿಲ್, ಸೀುಡ್ ಬೈಯರ್ಸ್‌ನ ಭಾಷಾ, ಮಂಗಳೂರು ಯಾಂತ್ರೀಕೃತ ಮೀನುಗಾರ ಸಹಕಾರ ಸಂಘದ ಉಪಾಧ್ಯಕ್ಷ ಬಾಬು ಸಾಲ್ಯಾನ್, ಮೋಹನ್ ಬೆಂಗ್ರೆ, ಅಲಿ ಹಸನ್ ಮೊದಲಾದವರು ಉಪಸ್ಥಿತರಿದ್ದರು. ದ.ಕ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ಪಿ.ಪಾಶ್ವನಾಥ್ ಸ್ವಾಗತಿಸಿದರು. ಗಿರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂದರು ಇಲಾಖೆ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ ವಂದಿಸಿದರು.

    ಮೀನು ಸಾಕಣೆ ಕೇಂದ್ರ ಆಧುನೀಕರಣ: ಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ಹೊಸ ಜಲಕೃಷಿ ತಂತ್ರಜ್ಞಾನಗಳ ಆವಿಷ್ಕಾರ ಉದ್ದೇಶದಿಂದ 7.90 ಕೋಟಿ ರೂ. ವೆಚ್ಚದಲ್ಲಿ ಮೀನು ಸಾಕಾಣಿಕಾ ಕೇಂದ್ರದ ಆಧುನೀಕರಣ ಕೈಗೆತ್ತಿಕೊಳ್ಳಲಾಗಿದೆ ಎಂದು ಸಚಿವ ಅಂಗಾರ ಹೇಳಿದರು. ಮೀನು ಕೃಷಿ ಮಾಡುವವರಿಗೆ ಗುಣಮಟ್ಟದ ಮೀನು ಮರಿ ಉತ್ಪಾದನೆ ಹಾಗೂ ವಿತರಣೆಗೆ ವರ್ಧಕ ಸೌಲಭ್ಯಗಳನ್ನು ಒದಗಿಸುವುದು, ಸಂಶೋಧನಾ ಸೌಲಭ್ಯಗಳನ್ನು ವೃದ್ಧಿ ಮತ್ತು ಮೀನುಗಾರಿಕಾ ವೃತ್ತಿಪರ ಅಧಿಕಾರಿಗಳು ಮತ್ತು ಸಂಶೋಧಕರಿಗೆ ಸ್ಮಾರ್ಟ್ ಮೀನುಗಾರಿಕೆ ತಂತ್ರಜ್ಞಾನ ನೀಡುವುದು ಉದ್ದೇಶ. ಅಸ್ತಿತ್ವದಲ್ಲಿರುವ ಕೊಳಗಳು, ಟ್ಯಾಂಕ್‌ಗಳ ದುರಸ್ತಿ ಮತ್ತು ನವೀಕರಣ, ಎಲ್ಲ ಪರಿಕರಗಳೊಂದಿಗೆ ಬಾವಿ ನೀರಿನ ಸಂಪನ್ಮೂಲಗಳ ಸೃಷ್ಟಿ ಮೊದಲಾದ ಕಾರ್ಯವನ್ನು ಈ ಯೋಜನೆಯಡಿ ಮಾಡಲಾಗುವುದು. 2022 ಮಾರ್ಚ್‌ಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts