More

    ಮೂಗ್ತಿಹಳ್ಳಿ ಪಿಎಸಿಎಸ್‌ಗೆ ಆನಂದ್ ಅಧ್ಯಕ್ಷ

    ಚಿಕ್ಕಮಗಳೂರು: ಮೂಗ್ತಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮೂರನೇ ಬಾರಿ ಅಧ್ಯಕ್ಷರಾಗಿ ಸಿ.ಆನಂದ್ ಹಾಗೂ ಎರಡನೇ ಬಾರಿ ಉಪಾಧ್ಯಕ್ಷರಾಗಿ ಎಂ.ಎಸ್.ಗುರುಮೂರ್ತಿ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

    ಸಂಘದ ಕಚೇರಿಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆನಂದ್ ಹಾಗೂ ಗುರುಮೂರ್ತಿ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಚುನಾವಣಾಧಿಕಾರಿಯಾಗಿ ಸಂಧ್ಯಾರಾಣಿ ಕಾರ್ಯನಿರ್ವಹಿಸಿದರು.
    ಡಿಸಿಸಿ ಬ್ಯಾಂಕ್ ನಿರ್ದೇಶಕ ಮುಗುಳುವಳ್ಳಿ ನಿರಂಜನ್ ಮಾತನಾಡಿ, ಸಂಘದಲ್ಲಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜತೆಗೆ ರಾಜಕೀಯವನ್ನು ಬೆರೆಸದೆ ಮುನ್ನೆಡೆದರೆ ಸಂಘವು ಅಭಿವೃದ್ಧಿಯತ್ತ ಸಾಗುತ್ತದೆ. ಜತೆಗೆ ರೈತರಿಗೆ ಹೆಚ್ಚಿನ ಅನುಕೂಲ ಒದಗಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
    ಸಂಘದ ಸಿಬ್ಬಂದಿ ಹಲವು ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವುದು ಖುಷಿಯ ಸಂಗತಿ. ಹೀಗಾಗಿ ಸಂಘದ ಪದಾಧಿಕಾರಿಗಳು ಎಲ್ಲರ ಸಹಕಾರ ಪಡೆಯಬೇಕು. ನಿಗದಿತ ಸಮಯಕ್ಕೆ ಸಾಲ ವಿತರಿಸುವ ಜತೆಗೆ ಮರುಪಾವತಿಗೆ ಮುಂದಾದರೆ ಸಂಘವು ಆರ್ಥಿಕವಾಗಿ ಸದೃಢವಾಗಲು ಸಾದ್ಯ ಎಂದರು.
    ನೂತನ ಅಧ್ಯಕ್ಷ ಸಿ.ಆನಂದ್ ಮಾತನಾಡಿ, ಸಂಘ ಸ್ಥಾಪನೆಗೊಂಡು ದಶಮಾನೋತ್ಸವದ ಹೊಸ್ತಿಲಲ್ಲಿದೆ. ಆರಂಭದ ದಿನಗಳಲ್ಲಿ ಹಲವಾರು ಗ್ರಾಮಗಳಿಗೆ ಪದಾಧಿಕಾರಿಗಳ ತಂಡವು ಭೇಟಿ ನೀಡಿ ಸದಸ್ಯತ್ವ ಪಡೆದುಕೊಳ್ಳಲು ಮನವಿ ಮಾಡಿಕೊಂಡಿತ್ತು. ಇದೀಗ ಸುಮಾರು 1630 ಸದಸ್ಯರನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.
    ನೂತನ ಕಟ್ಟಡ ನಿರ್ಮಿಸುವಾಗ ಮೂಗ್ತಿಹಳ್ಳಿ ವ್ಯಾಪ್ತಿಯ ಹಲವಾರು ದಾನಿಗಳು ಸಹಕಾರ ನೀಡಿದ್ದಾರೆ. ಜತೆಗೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ, ಶ್ರಮದಿಂದ ಸ್ವಂತ ಕಟ್ಟಡ ಹೊಂದಲು ಸಾಧ್ಯವಾಗಿದೆ. ಕಟ್ಟಡ ಪೂರ್ಣಗೊಂಡ ಬಳಿಕ ಮೂರನೇ ಅಂತಸ್ತಿನಲ್ಲಿ ರೈತರಿಗೆ ಸಣ್ಣಪುಟ್ಟ ಸಮಾರಂಭ ನಡೆಸಲು ರಿಯಾಯಿತಿ ದರದಲ್ಲಿ ಬಾಡಿಗೆಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
    ಸಹಕಾರ ರತ್ನ ಪುರಸ್ಕೃತ ಬಸವರಾಜಪ್ಪ, ಗ್ರಾಪಂ ಅಧ್ಯಕ್ಷ ಉಮೇಶ್, ಉಪಾಧ್ಯಕ್ಷೆ ಅಂಬಿಕಾ, ಸಹಕಾರ ಸಂಘದ ಸಹಾಯಕ ನಿಬಂಧಕ ರಾಮಣ್ಣ ಗೌಡ ಪಾಟೀಲ್, ಸಂಘದ ಉಪಾಧ್ಯಕ್ಷ ಎಂ.ಎಸ್.ಗುರುಮೂರ್ತಿ, ಸಿಇಒ ಎಚ್.ಎಂ.ರಾಜೇಶ್, ನಿರ್ದೇಶಕರಾದ ಬಿ.ಕುಮಾರೇಗೌಡ, ಎಸ್.ಟಿ.ಚಂದ್ರೇಗೌಡ, ಎಂ.ಎಂ.ಮನುಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts