More

    ಚಳವಳಿಗೆ ಅನಕೃ ಪ್ರೇರಕ ಶಕ್ತಿ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಕನ್ನಡದ ಕಟ್ಟಾಳು, ಅಪ್ರತಿಮ ಹೋರಾಟಗಾರರಾಗಿದ್ದ ಅನಕೃ ಅವರು ನಾಡು ನುಡಿ ಚಳವಳಿಗೆ ಪ್ರೇರಕ ಶಕ್ತಿಯಾಗಿದ್ದರು ಎಂದು ನಿವೃತ್ತ ಗ್ರಂಥಪಾಲಕ ಬಿ. ಎಸ್. ಮಾಳವಾಡ ಹೇಳಿದರು.

    ನಗರದಲ್ಲಿ ವೀರ ಪುಲಿಕೇಶಿ ಕನ್ನಡ ಬಳಗ ಆಯೋಜಿಸಿದ್ದ ಅನಕೃ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡವು ಬದುಕಿನ ಭಾಷೆಯಾಗಬೇಕು, ಕನ್ನಡದಿಂದಲೇ ನಾವೆಲ್ಲರು ಎಂಬ ಭಾವ ನಮ್ಮದಾದಾಗ ಮಾತ್ರ ಕನ್ನಡವು ನಾಡಿನ ಸಾರ್ವಭೌಮ ಭಾಷೆಯಾಗಿ ಉಳಿಯುತ್ತದೆ ಎಂದು ಅನಕೃ ಅವರು ಹೇಳುತ್ತಿದ್ದರು. ಹಾಗಾಗಿ ಕನ್ನಡದ ಬಗ್ಗೆ ನಾವೆಲ್ಲರೂ ಅಭಿಮಾನವಿಟ್ಟುಕೊಂಡು ಅದನ್ನು ಉಳಿಸಿ ಬೆಳೆಸುವ ಕೆಲಸ ಮಾಡೋಣ ಎಂದರು.

    ಬಳಗದ ಅಧ್ಯಕ್ಷ ವೆಂಕಟೇಶ ಮರೇಗುದ್ದಿ ಮಾತನಾಡಿ, ಅನಕೃ ಅವರು 24 ನಾಟಕ, 10 ಕಥಾಸಂಕಲನ, 32 ವಿಮರ್ಶೆ, ಪ್ರಬಂಧ ಸೇರಿ 111 ಕಾದಂಬರಿ ಬರೆದು, ಕಾದಂಬರಿ ಸಾರ್ವಭೌಮರೆಂದು ಖ್ಯಾತರಾಗಿದ್ದರು. ಅವರು ರಚಿಸಿದ ಕೃತಿಗಳು ನಿತ್ಯ ನೂತನವಾಗಿವೆ. ಕರ್ನಾಟಕ ಸರ್ಕಾರವು ಅವರ ಸಮಗ್ರ ಸಾಹಿತ್ಯವನ್ನು ಪ್ರಕಟಿಸಿ ಕನ್ನಡಿಗರ ಅಭಿಲಾಷೆಯನ್ನು ಪೂರೈಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

    ಜಗನ್ನಾಥ ಅಗಸಿಮನಿ, ರವೀಂದ್ರ ಹೊಂಬಳ ಮಾತನಾಡಿದರು. ಎಂ. ಮಯೂರ, ಆರ್. ವಿಭಾ, ಗೀತಾ ಮರೇಗುದ್ದಿ, ನಾಗರಾಜ ಪತ್ತಾರ, ವಾಣಿ ಸುರೇಶ, ಅನಕೃ ಅಭಿಮಾನಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts