More

    25 ವರ್ಷದ ಯುವತಿಯ ಬಾಯಿಯಲ್ಲಿ ಬೆಳೆಯುತ್ತವೆ ಕಣ್ಣುರೆಪ್ಪೆಯಲ್ಲಿ ಇರುವಂತಹ ಕೂದಲು…ಚಿಕಿತ್ಸೆ ನಿಲ್ಲಿಸಿದರೆ ಹೆಚ್ಚಾಗುವ ಸಮಸ್ಯೆ

    ಈಕೆ ಇಟಲಿಯ 25 ವರ್ಷದ ಯುವತಿ. ತನ್ನ 15ನೇ ವರ್ಷದಿಂದ ಒಂದು ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ವೈದ್ಯರು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಎಂದು ಹೇಳಿದ್ದಾರೆ.

    ಅಷ್ಟಕ್ಕೂ ಆಕೆಗೆ ಸಮಸ್ಯೆಯೇನು ಎಂದು ಕೇಳಿದರೆ ನಮಗೂ ಅಚ್ಚರಿಯಾಗುವುದು ಸಹಜ.
    ಈ ಯುವತಿಗೆ ಬಾಯಿಯೊಳಗೆ ಒಸಡುಗಳಲ್ಲಿ ಅಂದರೆ ಹಲ್ಲುಗಳ ಮಧ್ಯೆ ರೆಪ್ಪೆಯಂತಹ ಕೂದಲು ಬೆಳೆಯುತ್ತಿದೆ. ಇದೊಂದು ಅಪರೂಪದ ಸಿಂಡ್ರೋಮ್​. ಇಲ್ಲಿಯವರೆಗೆ ಇಂತಹ ಒಟ್ಟು ಐದು ಪ್ರಕರಣಗಳು ವರದಿಯಾಗಿವೆ.

    ಇದನ್ನು ನೋಡಿ ಮೊದಲು ವೈದ್ಯರೂ ಅಚ್ಚರಿ ವ್ಯಕ್ತಪಡಿಸಿದ್ದರು. ಯುವತಿಯ ಒಸಡಿನ ಅಂಗಾಂಶದ ಮಾದರಿಯನ್ನು ವೈದ್ಯರು ಮೈಕ್ರೋಸ್ಕೋಪ್​ನಲ್ಲಿ ನೋಡಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಬಳಿಕ ಆಕೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟೋಸ್ಟೆರಾನ್ ಇರುವುದು ಪತ್ತೆಯಾಗಿದೆ. ಇದೊಂದು ಅಸಹಜ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

    ಯುವತಿ ಮೊದಲು ಚಿಕಿತ್ಸೆ ತೆಗೆದುಕೊಂಡ ಬಳಿಕ ಕೂದಲು ಬೆಳೆಯುವುದು ಸ್ವಲ್ಪ ದಿನದ ಮಟ್ಟಿಗೆ ನಿಂತಿತ್ತು. ಆದರೆ ಆ ಚಿಕಿತ್ಸೆಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ ನಂತರ ಮತ್ತೆ ಬಾಯಿಯಲ್ಲಿ ಕೂದಲುಗಳು ಬೆಳೆಯುವ ಪ್ರಮಾಣ ಹೆಚ್ಚಾಯಿತು ಎಂದು ವರದಿಯಾಗಿದೆ.

    ಇಟಲಿಯ ಕ್ಯಾಂಪಾನಿಯಾ ಲುಯಿಗಿ ವ್ಯಾನ್‌ವಿಟೆಲ್ಲಿ ವಿಶ್ವವಿದ್ಯಾಲಯದ ವೈದ್ಯರು ಯುವತಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
    ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಮಹಿಳೆಯರಲ್ಲಿ ಸಾಮಾನ್ಯವಾದರೂ ಹೀಗೆ ಟೆಸ್ಟೋಸ್ಟೆರಾನ್ ಅಧಿಕ ಪ್ರಮಾಣದಲ್ಲಿದ್ದು ಬಾಯಿಯಲ್ಲಿ ಕೂದಲು ಬೆಳೆಯುವುದು ತುಂಬ ಅಪರೂಪದ ಪ್ರಕರಣ ಎನ್ನಲಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts