More

    ಪಾಕ್​ನಲ್ಲಿ ಒಂದು ಮೊಟ್ಟೆಗೆ 30 ರೂ, ಒಂದು ಕೆ.ಜಿ ಚಿಕನ್​ಗೆ 300 ರೂ! ಗಗನಕ್ಕೇರಿತು ನಿತ್ಯ ಬಳಕೆ ವಸ್ತುಗಳ ದರ!

    ಇಸ್ಲಾಮಾಬಾದ್​: ಪಾಕಿಸ್ತಾನವು ಆರ್ಥಿಕ ಸಂಕಷ್ಟವನ್ನು ಯಾವಾಗಲೂ ಎದುರಿಸುವ ದೇಶ ಎನಿಸಿಕೊಂಡಿದೆ. ಅದರಲ್ಲೂ ಪ್ರಧಾನಿ ಇಮ್ರಾನ್​ ಖಾನ್​ ಅವರ ಆಡಳಿತ ಆರಂಭವಾದ ನಂತರ ಸಂಕಷ್ಟ ಇನ್ನೂ ಹೆಚ್ಚಿತೆಂದು ಹೇಳುತ್ತಾರೆ ತಿಳಿದವರು. ದೇಶದಲ್ಲಿನ ಆರ್ಥಿಕ ಪರಿಸ್ಥಿತಿ ಯಾವ ಮಟ್ಟಿಗಿದೆಯೆಂದರೆ ಒಂದು ಮೊಟ್ಟೆಗೆ ಬರೋಬ್ಬರಿ 30 ರೂಪಾಯಿ ತೆರಬೇಕಾಗಿದೆ.

    ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ನಿಜವಾಗಿಯೂ ಗೆದ್ದೋರು ನಾವೇ! ಭರವಸೆ ಮತ್ತು ಪ್ರಜಾಪ್ರಭುತ್ವ ಗೆದ್ದಿದೆ ಎಂದ ಬಿಜೆಪಿ

    ಪಾಕಿಸ್ತಾನದ ಬಹುತೇಕ ರಾಜ್ಯಗಳಲ್ಲಿ ಮೊಟ್ಟೆ, ಶುಂಠಿಯ ದರ ಗಗನಕ್ಕೇರಿದೆ. ಡಜಜ್​ ಲೆಕ್ಕದಲ್ಲಿ ಮೊಟ್ಟೆ ಕೊಳ್ಳುವುದಾದರೆ 12 ಮೊಟ್ಟೆಗೆ 240 ರೂಪಾಯಿ ಬಿಲ್​ ಮಾಡಲಾಗುತ್ತಿದೆ. ಒಂದೇ ಮೊಟ್ಟೆ ಕೊಳ್ಳಬೇಕೆಂದರೆ 30 ರೂಪಾಯಿ ತೆರಬೇಕಾಗಿದೆ. ಶುಂಠಿಯ ದರ ಕೆಜಿಗೆ ಒಂದು ಸಾವಿರಕ್ಕೂ ಅಧಿಕವಾಗಿದೆ. ಚಳಿಗಾಲದಲ್ಲಿ ಮೊಟ್ಟೆ ಮತ್ತು ಶುಂಠಿ ಬಳಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದರ ಗಗನಕ್ಕೇರಿರುವುದಾಗಿ ತಿಳಿಸಲಾಗಿದೆ. ಚಿಕನ್​ ದರದಲ್ಲೂ ಭಾರಿ ಏರಿಕೆ ಕಂಡಿದ್ದು, ಒಂದು ಕೆಜಿ ಚಿಕನ್​ ದರ 300 ರೂಪಾಯಿಯಷ್ಟಾಗಿದೆ ಎನ್ನಲಾಗಿದೆ.

    ಇದನ್ನೂ ಓದಿ: ಕರ್ಫ್ಯೂ ವೇಳೆ ಬಾರ್, ಪಬ್ ಮುಚ್ಚದಿದ್ದರೆ ಅಬಕಾರಿ ಪರವಾನಗಿ ರದ್ದು; ಸಚಿವರ ಖಡಕ್​ ಎಚ್ಚರಿಕೆ

    ಕೇವಲ ಮೊಟ್ಟೆ ಮತ್ತು ಶುಂಠಿ ಮಾತ್ರವಲ್ಲ, ನಿತ್ಯ ಬಳಕೆಯ ಅನೇಕ ವಸ್ತುಗಳ ದರ ಹೆಚ್ಚಾಗಿದೆ. ಸಕ್ಕರೆ ಕೆಜಿಗೆ 100 ರೂಪಾಯಿಗೂ ಹೆಚ್ಚಾಗಿದೆ. ಗೋಧಿ ದರ ಕೆಜಿಗೆ 60 ರೂಪಾಯಿಯಾಗಿದೆ. ಗೋಧಿ ಹಿಟ್ಟಿನ ದರ ಇನ್ನಷ್ಟು ಹೆಚ್ಚಿದೆ ಎನ್ನಲಾಗಿದೆ. ದೇಶದಲ್ಲಿ ಶೇ. 25 ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಅವರೆಲ್ಲರೂ ದಿನಕ್ಕೆ ಎರಡು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)

    ಡಾನ್ಸ್​ ಮಾಡಲು ವಧುವನ್ನು ಎಳೆದ ವರನ ಸ್ನೇಹಿತರು- ಮುಂದೆ ಆಗಬಾರದ್ದೆಲ್ಲಾ ಆಗೋಯ್ತು!

    2ನೇ ಪತ್ನಿ ಜತೆ ಪ್ರಸ್ತಕ್ಕೆ ಮುಂದಾಗಿದ್ದವನಿಗೆ ಮೊದಲನೇ ಹೆಂಡತಿ ಕೊಟ್ಟಳು ಬಿಗ್​ ಶಾಕ್​..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts