More

    ನಾಲ್ಕೂವರೆ ತಾಸಲ್ಲಿ ಮಂಗಳೂರಿಂದ ಬೆಂಗ್ಳೂರಿಗೆ ಮಗುವನ್ನು ಕರೆತಂದ ಆಂಬುಲೆನ್ಸ್

    ಬೆಂಗಳೂರು/ಮಂಗಳೂರು: ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ 44 ದಿನದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಐಸಿಯು ಆಂಬುಲೆನ್ಸ್​ನಲ್ಲಿ ಕೇವಲ ನಾಲ್ಕೂವರೆ ಗಂಟೆಯಲ್ಲಿ ಕರೆತರಲಾಯಿತು. ಆದರೆ ಅತೀ ವೇಗವಾಗಿ ಆಂಬುಲೆನ್ಸ್ ಚಲಿಸಿದ್ದು, ಅಕಸ್ಮಾತ್ ಅಪಘಾತಕ್ಕೀಡಾಗಿದ್ದರೆ ಸಾವು-ನೋವು ಸಂಭವಿಸುತ್ತಿತ್ತು ಎಂಬ ಮಾತು ಕೇಳಿಬರುತ್ತಿದೆ.

    ನಗರ-ಪಟ್ಟಣ ವ್ಯಾಪ್ತಿಯಲ್ಲಿ ಝೀರೋ ಟ್ರಾಫಿಕ್​ನ ವ್ಯವಸ್ಥೆ ಇತ್ತಾದರೂ ಉಳಿದಡೆ ಎಂದಿನಂತಿತ್ತು. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಮಗುವಿಗೆ ಕೆಲವು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಧ್ಯಾಹ್ನ 12.05ಕ್ಕೆ ಈ ಆಸ್ಪತ್ರೆಯಿಂದ ಹೊರಟ ಆಂಬುಲೆನ್ಸ್ ಕಲ್ಲಡ್ಕ, ಉಪ್ಪಿನಂಗಡಿ, ನೆಲ್ಯಾಡಿ, ಸಕಲೇಶಪುರ, ಹಾಸನ, ನೆಲಮಂಗಲ ಮಾರ್ಗವಾಗಿ ಸಂಜೆ 4.30ಕ್ಕೆ ಜಯದೇವ ಆಸ್ಪತ್ರೆಗೆ ತಲುಪಿದೆ. ವೈದ್ಯರು ಮಗುವಿಗೆ ಚಿಕಿತ್ಸೆ ಮುಂದುವರಿಸಿದ್ದಾರೆ.

    ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದರು. ಸಾರ್ವಜನಿಕರು ಸಹಕಾರ ನೀಡಿದರು. ಎಲ್ಲಿಯೂ ತೊಂದರೆಯಾಗಿಲ್ಲ ಎಂದು ಆಂಬುಲೆನ್ಸ್ ಚಾಲಕ ಹನೀಫ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts