More

    ಪಾಂಡವಪುರದಲ್ಲಿ ಅಮೃತ್ 2.0 ಯೋಜನೆಗೆ ಚಾಲನೆ

    ಪಾಂಡವಪುರ: ಕೇಂದ್ರ ಸರ್ಕಾರದ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಪಟ್ಟಣಕ್ಕೆ ನೀರು ಸರಬರಾಜು ಕಲ್ಪಿಸುವ ಕಾಮಗಾರಿಗೆ ಸಂಸದೆ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಬುಧವಾರ ಭೂಮಿಪೂಜೆ ನೆರವೇರಿಸಿದರು.

    ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕೇಂದ್ರ ಸರ್ಕಾರದ ಶೇ.50ರಷ್ಟು ಅನುದಾನ ರಾಜ್ಯದ ಪಾಲಿನ ಶೇ.40 ಹಾಗೂ ಸ್ಥಳೀಯ ಸಂಸ್ಥೆ ಶೇ.10 ರಷ್ಟು ಅನುದಾನವನ್ನು ಅಮೃತ್ ಯೋಜನೆಗೆ ವಿನಿಯೋಗಿಸಲಾಗುತ್ತಿದೆ. ಈ ಮಹತ್ವದ ಯೋಜನೆ ಪ್ರತಿ ಮನೆಗೆ ಶುದ್ಧ ಕಾವೇರಿ ನೀರನ್ನು ಒದಗಿಸಲಿದೆ ಎಂದರು.

    ಪ್ರತಿಯೊಬ್ಬರೂ ಸಹಕಾರ ನೀಡಿದರೆ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ. ಅಮೃತ್ ಯೋಜನೆ ಕಾರಣಕ್ಕೆ ರಸ್ತೆ ವಿಸ್ತರಣೆ ಸೇರಿದಂತೆ ಇತರ ಕಾಮಗಾರಿಗಳಿಗೆ ತಡೆಯಾಗಿತ್ತು. ಈ ಯೋಜನೆಗಾಗಿ ರಸ್ತೆ ಅಗೆಯಬೇಕಿರುವ ಕಾರಣ ಮೊದಲು ಈ ಕಾಮಗಾರಿ ಪೂರ್ಣಗೊಳಿಸಿ ಆನಂತರದಲ್ಲಿ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಕಾಮಗಾರಿಯಿಂದ ಪಟ್ಟಣದ ನಿವಾಸಿಗಳಿಗೆ ತೊಂದರೆಯಾಗಬಹದು. ಅದನ್ನು ಅನುಸರಿಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದರು.

    ಪುರಸಭೆ ಮುಖ್ಯಾಧಿಕಾರಿ ವೀಣಾ, ಇಂಜಿನಿಯರ್ ಚೌಡಪ್ಪ, ಒಳ ಚರಂಡಿ ಮಂಡಳಿ ಇಎಎ ಬಾಬಾಸಾಬ್ ನಡಾಬ್, ಪುರಸಭೆ ಸದಸ್ಯರಾದ ಪಾರ್ಥಸಾರಥಿ, ಜಯಲಕ್ಷ್ಮಮ್ಮ, ಉಮಾಶಂಕರ, ತಾಲೂಕು ರೈತಸಂಘ ಮಾಜಿ ಅಧ್ಯಕ್ಷ ಚಿಕ್ಕಾಡೆ ಹರೀಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts