More

    ಪ್ರಭಾಸ್, ದೀಪಿಕಾ ಚಿತ್ರಕ್ಕೆ ಅಮಿತಾಬ್​ ಪಡೆಯುತ್ತಿರುವ ಸಂಭಾವನೆ ಎಷ್ಟಿರಬಹುದು?

    ಹೈದರಾಬಾದ್: ನಟ ಪ್ರಭಾಸ್​, ಅಮಿತಾಬ್​ ಮತ್ತು ದೀಪಿಕಾ ಪಡುಕೋಣೆ ಒಂದೇ ಸಿನಿಮಾದಲ್ಲಿ ಜತೆಯಾಗುವ ಸುದ್ದಿ ಜುಲೈನಲ್ಲಿಯೇ ಹೊರಬಿದ್ದಿದೆ. ವೈಜಯಂತಿ ಸಿನಿಮಾಸ್ ಸಂಸ್ಥೆ ನಿರ್ಮಾಣ ಮಾಡುವುತ್ತಿರುವ ಈ ಬಹುಕೋಟಿ ವೆಚ್ಚದ ಚಿತ್ರದಲ್ಲಿ ಸ್ಟಾರ್ ಕಲಾವಿದರದ್ದೇ ಪಾರಮ್ಯ. ಹಾಗಾದರೆ, ಈ ಚಿತ್ರದಲ್ಲಿ ನಟಿಸುವವರ ಸಂಭಾವನೆಯಾದರೂ ಎಷ್ಟಿರಬಹುದು? ಹೀಗೊಂದು ಸಹಜ ಪ್ರಶ್ನೆ ಕಾಡದೆ ಇರದು.

    ಇದನ್ನೂ ಓದಿ: ಜನವರಿಯಿಂದ ಮದಕರಿ ನಾಯಕ

    ಅದರಂತೆ ಇದೀಗ ಹಿರಿಯ ನಟ ಬಾಲಿವುಡ್ ಬಿಗ್​ಬಿ ಅಮಿತಾಬ್​ ಬಚ್ಚನ್​ ಸಂಭಾವನೆ ವಿಚಾರ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ಬರೋಬ್ಬರಿ 21 ಕೋಟಿ ರೂ ಪಡೆಯುತ್ತಿದ್ದಾರಂತೆ ಅಮಿತಾಬ್​. ಹೌದು, ಸದ್ಯದ ಮಟ್ಟಿಗೆ ಈ ಮೊತ್ತವೇ ಅಚ್ಚರಿ ಮೂಡಿಸಿದ್ದು, ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಸಂಭಾವನೆ ಸೇರಿದರೆ 100 ಕೋಟಿ ಮೊತ್ತವನ್ನು ಈ ಮೂವರಿಗೆ ನೀಡಿದೆ ತಂಡ.

    ನಾಗ್​ ಅಶ್ವಿನ್​ ನಿರ್ದೇಶನದ ಈ ಚಿತ್ರಕ್ಕೆ ದೀಪಿಕಾ ಬರೋಬ್ಬರಿ 30 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಟಾಲಿವುಡ್​ನಲ್ಲಿ ಈ ಸುದ್ದಿ ಹರಿದಾಡುತ್ತಿದ್ದಂತೆ, ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದರು. ಆದರೆ, ಈ ಬಗ್ಗೆ ಚಿತ್ರತಂಡ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇನ್ನು ಕೆಲವರು ಇಂಥಹ ತಲಬುಡವಿಲ್ಲದ ಸುದ್ದಿಗಳನ್ನು ನಂಬಬೇಡಿ ಅಂತಲೂ ಹೇಳಿಕೊಂಡಿದ್ದಾರೆ. ಏನೇ ಆಗಲಿ, ದೀಪಿಕಾ ಸ್ಟಾರ್​ಗಿರಿಗೆ ಇಷ್ಟೊಂದು ಮೊತ್ತ ಕೊಡಬಹುದು ಎಂಬ ಮಾತುಗಳೂ ಚರ್ಚೆಯಲ್ಲಿವೆ.

    ಇದನ್ನೂ ಓದಿ: ಚಿತ್ರಮಂದಿರ ಮತ್ತೆ ಖಾಲಿಖಾಲಿ! ಈ ವಾರ ಕೇವಲ ಒಂದೇ ಸಿನಿಮಾ ಬಿಡುಗಡೆ

    ಅಂದಹಾಗೆ ಈ ಬಿಗ್​ ಸಿನಿಮಾವನ್ನು ವೈಜಯಂತಿ ಸಿನಿಮಾಸ್ ಸಂಸ್ಥೆ ನಿರ್ಮಾಣ ಮಾಡಲಿದ್ದು, ದಕ್ಷಿಣ ಭಾರತದ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಯಲ್ಲಿ ಇದೂ ಒಂದಾಗಿದೆ. ಇದೇ ಸಂಸ್ಥೆ 50ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಆ ಸಂಭ್ರಮಕ್ಕೆ ಈ ಸಿನಿಮಾ ಘೋಷಣೆ ಮಾಡಿದ್ದು, ದೀಪಿಕಾ ಅವರನ್ನು ಕರೆತಂದಿದೆ. ಮಹಾನಟಿ ಸಿನಿಮಾ ನಿರ್ದೇಶನ ಮಾಡಿದ್ದ ನಿದೇಶಕ ನಾಗ್​ ಅಶ್ವಿನ್​ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. (ಏಜೆನ್ಸೀಸ್​)

    ‘ಕೈ’ ಬಿಟ್ಟಿದ್ದ ಬಾಲಿವುಡ್ ನಟಿ ಊರ್ಮಿಳಾ, ಶಿವ ಸೇನೆಗೆ ಸೇರ್ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts