More

    ಅಮಿತ್​ ಷಾ, ಜೆ.ಪಿ. ನಡ್ಡಾ ಭೇಟಿಗೆ ಪ್ರಯತ್ನ: ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿಕೆ

    ಬೆಂಗಳೂರು: ಹೈದರಾಬಾದ್​ನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲರೂ ಇರುತ್ತಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ‌ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಸಾಂದರ್ಭಿಕವಾಗಿ ಭೇಟಿ ಮಾಡಲು ಪ್ರಯತ್ನಿಸುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

    ಹೈದರಾಬಾದ್ ಗೆ ತೆರಳುವ ಮುನ್ನ ಆರ್.ಟಿ.ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ವರಿಷ್ಠರ ಭೇಟಿ ವೇಳೆ ರಾಜ್ಯಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಚರ್ಚಿಸಲು ಯೋಚಿಸಿರುವೆ ಎಂದರು.

    ಮಾತುಕತೆ ಉತ್ತಮ
    ಪೌರ ಕಾರ್ಮಿಕರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಉತ್ತಮ ಮಾತುಕತೆಗಳಾಗಿವೆ. ಮಾನವೀಯತೆ, ಸಹಾನುಭೂತಿ ನೆಲೆಯಲ್ಲಿ ಪೌರ ಕಾರ್ಮಿಕರ ಸಂರಕ್ಷಣೆ, ಆರೋಗ್ಯ ಸವಲತ್ತು ಇನ್ನಿತರ ವಿಚಾರಗಳನ್ನು ಚರ್ಚಿಸಿದ್ದು, ಪೌರ ಕಾರ್ಮಿಕರ ಕೋರಿಕೆಯಂತೆ ಸಭೆಯ ನಡಾವಳಿಗಳನ್ನು ಇಂದು ತಲುಪಿಸಲಾಗುವುದು.

    ಸೇವೆ ಕಾಯಂಗೊಳಿಸಲು ತಾತ್ವಿಕ ಒಪ್ಪಿಗೆ ನೀಡಿದ್ದು, ಕಾನೂನು ಹಾಗೂ ತಾಂತ್ರಿಕವಾಗಿ ತೊಡಕು ಉಂಟಾಗದಂತೆ ನೋಡಿಕೊಳ್ಳಲು ಜಂಟಿ ಸಮಿತಿ ರಚಿಸಲಾಗುವುದು. ಈ ಸಮಿತಿ ಮೂರು ತಿಂಗಳಲ್ಲಿ ವರದಿ ಸಲ್ಲಿಸಲಿದ್ದು, ನಂತರ ಅಗತ್ಯ ಕ್ರಮವಹಿಸಲಾಗುವುದು‌. ಪೌರ ಕಾರ್ಮಿಕರ ನೇಮಕಕ್ಕೆ ಪ್ರತ್ಯೇಕ ನೀತಿ, ಅವರ ಮಕ್ಕಳ ಶಿಕ್ಷಣಕ್ಕೆ ನೆರವು ಮುಂತಾದ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದರು.

    40 ರೂಪಾಯಿ ಕೊಟ್ಟು ಚಿಕಿತ್ಸೆ ಪಡೆದುಕೊಂಡ ಧೋನಿ! ಎಲ್ಲೂ ವಾಸಿಯಾಗದ ನೋವು ಹಳ್ಳಿ ವೈದ್ಯನಿಂದ ಮಾಯ

    ಲಸಿಕೆ ಹಾಕಿದ್ರು ರೇಬೀಸ್​ನಿಂದ ಯುವತಿ ಗುಣವಾಗಲಿಲ್ಲ ಯಾಕೆ? ತನಿಖೆಯಲ್ಲಿ ಭಯಾನಕ ಸಂಗತಿ ಬಯಲು

    ಈಜಿಪ್ಟ್, ಮಾಲ್ಡೀವ್ಸ್, ದುಬೈ ಸುತ್ತಾಡಿ ನೇಪಾಳದಲ್ಲಿ ಅಡಗಿದ್ದ ಮೋಸ್ಟ್​ ವಾಂಟೆಡ್ ವಂಚಕ ಮುಂಬೈನಲ್ಲಿ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts