More

    ಕಾಯ್ದೆಗಳ ತಿದ್ದುಪಡಿ ವಿರುದ್ಧ ಬಳ್ಳಾರಿಯಲ್ಲಿ ಧರಣಿ, ಎತ್ತಿನ ಬಂಡಿ ಜಾಥಾ, ಹೆದ್ದಾರಿ ತಡೆ: ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

    ಬಳ್ಳಾರಿ: ಭೂ ಸುಧಾರಣೆ, ಎಪಿಎಂಸಿ ಸೇರಿ ವಿವಿಧ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಕಿಸಾನ್ ಸಂರ್ಷ ಸಮನ್ವಯ ಸಮಿತಿ ಕರೆ ನೀಡಿದ್ದ ಬಂದ್‌ಗೆ ಸೋಮವಾರ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

    ರೈತರ ಹೋರಾಟಕ್ಕೆ ಕಾರ್ಮಿಕ, ಕನ್ನಡ ಪರ, ದಲಿತ ಹಾಗೂ ಇತರ ಸಂಟನೆಗಳು, ಕಾಂಗ್ರೆಸ್‌ನಿಂದ ಬೆಂಬಲ ವ್ಯಕ್ತವಾಯಿತು. ನಗರದಲ್ಲಿ ಬೆಳಗ್ಗೆ ಪ್ರತಿಭಟನೆ ಆರಂಭಿಸಲಾಯಿತು. ಗಡಿಗಿ ಚನ್ನಪ್ಪ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಲಾಯಿತು. ಕರವೇ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಕೆಲ ಕಾಲ ರಸ್ತೆ ಸಂಚಾರ ತಡೆ ನಡೆಸಿದರು. ಇದರಿಂದಾಗಿ ಲಾರಿಗಳ ಸಂಚಾರದಲ್ಲಿ ವ್ಯತ್ಯಯವಾಯಿತು.

    ನಗರದ ಪ್ರಮುಖ ರಸ್ತೆಗಳಲ್ಲಿ ಅಂಗಡಿಗಳು ಮುಚ್ಚಿದ್ದವು. ಆದರೆ, ಹೋಟೆಲ್, ಪೆಟ್ರೋಲ್ ಬಂಕ್ ತೆರೆದಿದ್ದವು. ಬೆಳಗ್ಗೆ ಬೇರೆ ಕಡೆಯಿಂದ ಬಸ್‌ಗಳು ನಗರ ಪ್ರವೇಶಿಸಿದವು. ಆದರೆ, ನಗರದಿಂದ ಬಸ್‌ಗಳು ಸಂಚರಿಸಲಿಲ್ಲ. ನಿಲ್ದಾಣಗಳಲ್ಲಿ ಬೆರಳೆಣಿಕೆ ಪ್ರಯಾಣಿಕರಿದ್ದು ತೊಂದರೆ ಅನುಭವಿಸಿದರು. ಆಟೋಗಳ ಸಂಚಾರ ಅಬಾಧಿತವಾಗಿತ್ತು. ಎಲ್ಲ ರಸ್ತೆಗಳಲ್ಲಿ ವಾಹನಗಳ ಸಂಚಾರ ಸಾವಾನ್ಯವಾಗಿತ್ತು. ಗಡಿಗಿ ಚನ್ನಪ್ಪ ವೃತ್ತದಲ್ಲಿ ಧರಣಿ ಹಮ್ಮಿಕೊಂಡಿದ್ದರೂ ವಾಹನಗಳ ಸಂಚಾರಕ್ಕೆ ಪೊಲೀಸರು ಅವಕಾಶ ಕಲ್ಪಿಸಿದ್ದರು.

    ಸ್ವಾಮೀಜಿಯಿಂದ ಮೋದಿ ಗುಣಗಾನ
    ಬಂದ್ ಬೆಂಬಲಿಸಿದ್ದ ಜನಸೈನ್ಯ ಸಂಟನೆಯಿಂದ ಪ್ರತಿಭಟನಾಕಾರರಿಗೆ ವಾಸ್ಕ್ ವಿತರಿಸಲಾಯಿತು. ಜನಸೈನ್ಯ ಸಂಟನೆ ಪರವಾಗಿ ವಾಸ್ಕ್ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ವಾತನಾಡಿದ ಕಲ್ಯಾಣಸ್ವಾಮಿ ಮಠದ ಕಲ್ಯಾಣ ಸ್ವಾಮೀಜಿ, ಪ್ರಧಾನಿ ನರೇಂದ್ರ ಮೋದಿಯ ಗುಣಗಾನ ವಾಡಿದರು. ಕೇಂದ್ರ ಸರ್ಕಾರ ರೈತ ಪರ ಕಾಯ್ದೆ ಜಾರಿಗೊಳಿಸಿದೆ. ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲವಾಗಲಿದ್ದು, ದಲ್ಲಾಳಿಗಳಿಗೆ ಸಮಸ್ಯೆಯಾಗಲಿದೆ. ಈ ಬಗ್ಗೆ ವಾಹಿತಿ ಇಲ್ಲದೆ ಬಂದ್ ಆಚರಿಸಲಾಗುತ್ತಿದೆ. ರೈತರ ಸಮಸ್ಯೆಗಳಿಗೆ ನಾನು ಸ್ಪಂದಿಸುತ್ತೇನೆ. ಆದರೆ, ಬಂದ್ ಬೆಂಬಲಿಸಿಲ್ಲ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts