More

    ಸೋಲೋ ರೈಡರ್ ಅಮೃತಾ ಜೋಶಿಗೆ ವಿಶ್ವ ಕೊಂಕಣಿ ಕೇಂದ್ರದಿಂದ ವಿಶೇಷ ವಿದ್ಯಾರ್ಥಿವೇತನ

    ಮಂಗಳೂರು: ಕೊಂಕಣಿ ಭಾಷೆ, ಸಂಸ್ಕೃತಿ ಮತ್ತು ಜನರನ್ನು ಉತ್ತೇಜಿಸುವ ಲಾಭರಹಿತ ಸಂಸ್ಥೆಯಾದ ವಿಶ್ವ ಕೊಂಕಣಿ ಕೇಂದ್ರವು ಏಷ್ಯಾದ ಅತ್ಯಂತ ಕಿರಿಯ ಸೋಲೋ ರೈಡರ್ ಅಮೃತಾ ಜೋಶಿ ಅವರಿಗೆ ಮೋಟಾರ್ ಸ್ಪೋರ್ಟ್‌ನಲ್ಲಿ ಉನ್ನತ ತರಬೇತಿ ನೀಡುವ ಉದ್ದೇಶಕ್ಕೆ 3.6 ಲಕ್ಷ ರೂ.ಗಳ ವಿಶ್ವ ಕೊಂಕಣಿ ವಿಶೇಷ ವಿದ್ಯಾರ್ಥಿವೇತನ ಪ್ರಶಸ್ತಿ ನೀಡಿ ಗೌರವಿಸಿದೆ.

    ಸೋಲೋ ರೈಡರ್ ಅಮೃತಾ ಜೋಶಿ ಡರ್ಟ್ ರ‌್ಯಾಲಿ ಮತ್ತು ಸರ್ಕ್ಯೂಟ್ ರೇಸಿಂಗ್‌ನ ಒಂದು ವರ್ಷದ ಸುಧಾರಿತ ತರಬೇತಿ ಪಡೆಯಲು ವಿಶ್ವ ಕೊಂಕಣಿ ವಿಶೇಷ ವಿದ್ಯಾರ್ಥಿವೇತನ ಪ್ರಶಸ್ತಿ ನೀಡಲಾಗಿದೆ. ಕೇರಳದ ಕುಂಬ್ಲೆ ಮೂಲದ ಕೊಂಕಣಿ ಕುಟುಂಬಕ್ಕೆ ಸೇರಿದ ಅಮೃತಾ ಜೋಶಿ ಇತ್ತೀಚೆಗೆ ಭಾರತ ಮತ್ತು ನೆರೆಯ ದೇಶಗಳಲ್ಲಿ 23,000 ಕಿ.ಮೀ.ಗೂ ಹೆಚ್ಚು ದೂರವನ್ನು ಏಕಾಂಗಿಯಾಗಿ ಬೈಕ್ ಸವಾರಿ ಮಾಡುವ ಮೂಲಕ ಮಹಿಳಾ ಸುರಕ್ಷತೆ, ಪರಿಸರ ಸಂರಕ್ಷಣೆ ಮತ್ತು ರಸ್ತೆ ಸುರಕ್ಷತೆಯಂತಹ ವಿಷಯಗಳ ಬಗ್ಗೆ ಗಮನ ಸೆಳೆದಿದ್ದಾರೆ. ಅತ್ಯಂತ ಕಿರಿಯ ಏಕವ್ಯಕ್ತಿ ರೈಡರ್ ಎನ್ನುವ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಲ್ಲಿ ದಾಖಲೆ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವ ಕೊಂಕಣಿ ಕೇಂದ್ರವು ಅವರ ಸಾಧನೆ ಗುರುತಿಸಿ ಈ ಪುರಸ್ಕಾರ ನೀಡಿದೆ.

    ವಿಶ್ವ ಕೊಂಕಣಿ ಕೇಂದ್ರ ಮತ್ತು ಅಮೃತಾ ಜೋಶಿ ನಡುವಿನ ತಿಳುವಳಿಕಾ ಒಡಂಬಡಿಕೆಗೆ ಇಂದು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಸಹಿ ಹಾಕಲಾಯಿತು. ಕೊಂಕಣಿ ಭಾಷಾ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ನಂದಗೋಪಾಲ್ ಶೆಣೈ, ಕೊಂಕಣಿ ಭಾಷಾ ಸಂಸ್ಕೃತಿ ಪ್ರತಿಷ್ಠಾನದ ಕಾರ್ಯದರ್ಶಿ ಗಿರಿಧರ್ ಕಾಮತ್ ಮತ್ತು ಅಮೃತಾ ಅವರ ತಾಯಿ ಅನ್ನಪೂರ್ಣ ಜೋಶಿ, ಸಿಇಓ ಗುರುದತ್ ಬಂಟ್ವಾಳ್ಕರ್, ವಿಶ್ವ ಕೊಂಕಣಿ ಕೇಂದ್ರದ ವಿದ್ಯಾರ್ಥಿವೇತನ ಸಂಯೋಜಕಿ ಸಹನಾ ಕಿಣಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts