More

    ಸಂವಿಧಾನಶಿಲ್ಪಿಯ ದಾದರ್​ ಮನೆಯನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು

    ನವದೆಹಲಿ: ಮುಂಬೈನ ದಾದರ್​ನಲ್ಲಿರುವ ಸಂವಿಧಾನಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ್​ ಅವರ ರಾಜಗೃಹವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
    ಐತಿಹಾಸಿಕ ಮಹತ್ವವುಳ್ಳ ಈ ಕಟ್ಟಡಕ್ಕೆ ಮಂಗಳವಾರ ಸಂಜೆ ನುಗ್ಗಿದ್ದ ಇಬ್ಬರು ಅಪರಿಚಿತರು ಮೂರು ಮಹಡಿಗಳ ಕಟ್ಟಡದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳು, ಕಿಟಕಿ ಗಾಜುಗಳು ಮತ್ತು ಹೂಕುಂಡಗಳನ್ನು ಧ್ವಂಸಗೊಳಿಸಿ ಪರಾರಿಯಾದರು ಎಂದು ಪೊಲೀಸರು ತಿಳಿಸಿದ್ದಾರೆ.

    ವಿಷಯ ತಿಳಿಯುತ್ತಲೇ ಮಂಗಳವಾರ ರಾತ್ರಿಯೇ ನೂರಾರು ಜನ ದಲಿತರು ಅಂಬೇಡ್ಕರ್​ ಅವರ ಮನೆಯ ಹೊರಗೆ ಜಮಾಯಿಸಿದ್ದರು. ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆಯನ್ನು ಅರಿತ ರಾಜಕೀಯ ಮತ್ತು ದಲಿತ ಸಂಘಟನೆಗಳ ಹಿರಿಯ ಮುಖಂಡರು ಸ್ಥಳಕ್ಕೆ ಧಾವಿಸಿ, ಎಲ್ಲರನ್ನೂ ಸಮಾಧಾನಪಡಿಸಿದ್ದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ಚೀನಾ ಸಂಪೂರ್ಣ ಹಿಂದೆಗೆಯುವವರೆಗೂ ಭಾರತ ಸೇನೆ ಹಿಂದೆಗೆಯಲ್ಲ

    ಘಟನೆಯನ್ನು ಖಂಡಿಸಿರುವ ಮಹಾರಾಷ್ಟ್ರದ ಗೃಹ ಸಚಿವ ಅನಿಲ್​ ದೇಶಮುಖ್​ ಘಟನೆಯ ಕುರಿತು ತನಿಖೆ ನಡೆಸಿ, ಆ ಇಬ್ಬರು ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

    ಡಾ. ಬಿ.ಆರ್​. ಅಂಬೇಡ್ಕರ್​ ಅವರು ರಾಜಗೃಹವನ್ನು ಪುಸ್ತಕಭಂಡಾರವಾಗಿ ಬಳಸುತ್ತಿದ್ದರು. ಸದ್ಯ ಇದನ್ನು ಅಂಬೇಡ್ಕರ್​ ಅವರ ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ. ಜತೆಗೆ ಇದು ಅಂಬೇಡ್ಕರ್​ ಅವರ ಕುರಿತ ಸಂಶೋಧನಾ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ.

    ಭಾರತವನ್ನು ಅಲ್ಲಾಡಿಸಲು ನೇಪಾಳವನ್ನು ಛೂಬಿಟ್ಟ ಚೀನಾ! ಏನಿದು ಹೊಸ ಕುತಂತ್ರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts