More

    ಮಹಿಳೆ ಸಮಾನತೆ ಪಡೆಯಲು ಅಂಬೇಡ್ಕರ್ ಕಾರಣ

    • ಎಚ್.ಡಿ.ಕೋಟೆ : ಜಗತ್ತಿನಲ್ಲಿ ಯಾರಾದರೂ ಮಹಿಳಾವಾದಿ ಇದ್ದರೆ ಅದು ಡಾ.ಬಿ.ಆರ್.ಅಂಬೇಡ್ಕರ್ ಮಾತ್ರ. ಮಹಿಳೆಯರು ಪುರುಷರಂತೆ ಸಮಾನ ಹಕ್ಕು ಪಡೆಯಲು ಅಂಬೇಡ್ಕರ್ ಕಾರಣ ಎಂದು ಶಿಕ್ಷಣ ಇಲಾಖೆಯ ಬಿಆರ್‌ಸಿ ಕೃಷ್ಣಯ್ಯ ತಿಳಿಸಿದರು.

    • ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ಪಟ್ಟಣದ ಬಾಬು ಜಗಜೀವನರಾಮ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಮಹಿಳಾ ರತ್ನ ಪ್ರಶಸ್ತಿ ಪುರಸ್ಕಾರ ಸಮಾರಂಭ ಉದ್ದೇಶಿಸಿ ಮಾತನಾಡಿದರು.
    • ಮಹಿಳೆಯರಿಗೆ ವಿಮೋಚನೆ ನೀಡಿದವರು ಡಾ.ಬಿ.ಆರ್.ಅಂಬೇಡ್ಕರ್. ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು ಎಂದು ಹೋರಾಟ ಮಾಡಿದರು.
    • ಮಹಿಳೆಯರ ಶೋಷಣೆಗೆ ಯಾರು ಕಾರಣ ಎಂಬುದನ್ನು ವಿಮರ್ಶೆ ಮಾಡಬೇಕಾದ ಅಗತ್ಯ ಇದೆ. ಮಹಿಳೆಯರು ಹೋರಾಟದ ಮನೋಭಾವ ಬೆಳೆಸಿಕೊಳ್ಳದೆ ಇದ್ದರೆ ಸಮಾಜದಲ್ಲಿ ಉತ್ತಮ ಅವಕಾಶ ಪಡೆಯಲು ಸಾಧ್ಯವಿಲ್ಲ. ಮಹಿಳೆಯರ ಶೋಷಣೆಗೆ ಗಂಡೇ ಕಾರಣವೇ ಎಂಬುದನ್ನು ಪರಾಮರ್ಶೆ ಮಾಡಬೇಕಾದ ಸನ್ನಿವೇಶ ಇಂದು ಬಂದೊದಗಿದೆ ಎಂದರು.

    • ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಮಾತನಾಡಿ, ಸಂಸಾರದಲ್ಲಿ ಹೆಣ್ಣು ಪ್ರಧಾನ ಸ್ಥಾನವನ್ನು ಹೊಂದಿದ್ದಾಳೆ. ಅಲ್ಲದೆ ಮನೆಯ ಆಗು, ಹೋಗುಗಳನ್ನು ಸರಿದೂಗಿಸಿಕೊಂಡು ಹೋಗುತ್ತಾರೆ. ಇಂದಿನ ದಿನಗಳಲ್ಲಿ ಎಲ್ಲ ರಂಗದಲ್ಲೂ ಸಹ ಮಹಿಳೆಯರು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಪುರುಷರಿಗಿಂತ ತಾವೇನು ಕಡಿಮೆ ಇಲ್ಲ ಎಂದು ಸಾಧಿಸಿ ತೋರಿಸಿದ್ದಾಳೆ ಎಂದರು.

    • ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಆದಿವಾಸಿ ಹೋರಾಟಗಾರ ಮೊತ್ತ ಸೋಮಣ್ಣ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕಿಯರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.
      • ತಾಲೂಕು ನೌಕರರ ಸಂಘದ ಅಧ್ಯಕ್ಷ ಮಹದೇವು, ಶಿಕ್ಷಕರ ಸಹಕಾರ ಸಂಘದ ಅಧ್ಯಕ್ಷ ವಸಂತಕುಮಾರ್, ಯಶವಂತ್ ಕುಮಾರ್, ಪುಟ್ಟರಾಜು, ಪ್ರಕಾಶ್, ನಿರ್ಮಲಾ, ಗಿರೀಶ್ ಮೂರ್ತಿ, ಶಿವಕುಮಾರ್, ರೇಖಾ, ಎನ್.ವಿ.ಸುರೇಶ್, ಪ್ರಮೋದ್, ಶಂಭು, ಪ್ರಕಾಶ್, ಭೀಮಪ್ಪ, ಪಿ.ಪ್ರತಿಭಾ, ಸುಂದರಮ್ಮ, ರೂಪಾ ಪ್ರಮೋದ್, ಶಶಿಕಲಾ, ಲೇಪಾಕ್ಷಿ, ವಸಂತಾ, ಸುಧಾರಾಣಿ, ಅನಿತಾ, ಮಂಗಳಮ್ಮ, ಜಗದಾಂಬ, ನೀಲಾಂಬಿಕೆ, ಪದ್ಮಾ, ಪ್ರಭಾವತಿ, ಜ್ಯೋತಿ, ಸುಜಾತಾ, ಬಬಿತಾರಾಣಿ, ಕೃಷ್ಣವೇಣಿ ಇತರರು ಇದ್ದರು.

    ಪೋಟೋ ಇದೆ
    09ಊಆಏ02
    ಎಚ್.ಡಿ.ಕೋಟೆ ಪಟ್ಟಣದ ಬಾಬು ಜಗಜೀವನ್‌ರಾಮ್ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts