More

    ಸಮಸಮಾಜ ಸಾಕಾರಗೊಳಿಸಿದ ಅಂಬೇಡ್ಕರ್:ಸಚಿವ ಡಾ.ಎಚ್.ಸಿ. ಮಹದೇವಪ್ಪ ಬಣ್ಣನೆ

    ಬೆಂಗಳೂರು: ವ್ಯವಸ್ಥಿತ ಕಾನೂನುಗಳ ಮೂಲಕ ದೇಶದ ಕೋಟ್ಯಂತರ ಜನರಿಗೆ ಬದುಕುವ ಅವಕಾಶ ಕಲ್ಪಿಸಿದವರು ಡಾ.ಬಿ.ಆರ್. ಅಂಬೇಡ್ಕರ್ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.

    ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಕ್ವಿನ್ಸ್ ರಸ್ತೆಯ ಕೃಷಿ ತಂತ್ರಜ್ಞರ ಭವನದಲ್ಲಿ ಆಯೋಜಿಸಲಾಗಿದ್ದ ‘ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವ ಹಾಗೂ ಸಂವಿಧಾನ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಿಶ್ವದಲ್ಲೇ ಅತಿಹೆಚ್ಚು ಶಿಕ್ಷಣ ಪಡೆದವರು ಅಂಬೇಡ್ಕರ್. ಒಂದು ವರ್ಗಕ್ಕೆ ಮಾತ್ರವಲ್ಲದೇ ದೇಶದ ಎಲ್ಲ ಜನರಿಗೂ ಅಗತ್ಯ ಇರುವ ಸಂವಿಧಾನವನ್ನು ರಚಿಸಿದವರು. ನೆಲ್ಸನ್ ಮಂಡೇಲಾ ಸಹ ನಮ್ಮ ದೇಶದ ಸಂವಿಧಾನವನ್ನು ಮೆಚ್ಚಿಕೊಂಡಿದ್ದರು. ಜಗತ್ತಿನಾದ್ಯಂತ ನಮ್ಮ ಸಂವಿಧಾನ ಪ್ರಭಾವ ಬೀರಿದೆ. ಬಾಬಾ ಸಾಹೇಬರನ್ನು ಮೀಸಲಾತಿ ಕೊಟ್ಟ ಕಾರಣಕ್ಕೆ ನಾವಿಂದು ನೆನೆಯಿತ್ತಿಲ್ಲ. ಬದಲಿಗೆ ದೇಶದ ಎಲ್ಲ ಜನರಿಗೆ ಸಮಾನ, ಸುರಕ್ಷಿತ ಬದುಕಿನ ವಾತಾವರಣ ನಿರ್ಮಿಸಿದ್ದಕ್ಕಾಗಿ ನೆನಯುತ್ತೇವೆ ಎಂದರು.

    ತಳ ವರ್ಗಗಳ ಜತೆಗೆ ಎಲ್ಲರೂ ಜ್ಞಾನ ಮಾರ್ಗದ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ದನಿಯಾಗಬೇಕು. ಆಗ ಮಾತ್ರ ಸಮ ಸಮಾಜದ ಕಲ್ಪನೆ ಸಾಕಾರಗೊಳ್ಳುತ್ತದೆ. ನಮ್ಮ ಸರ್ಕಾರ ಸಂವಿಧಾನದ ಪೀಠಿಕೆಯ ಓದನ್ನು ಕಡ್ಡಾಯಗೊಳಿಸಿದ್ದು, ಈ ಕಾರ್ಯವನ್ನು ಹೆಚ್ಚು ಮಾಡಲಾಗುವುದು. ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್, ಅಂಬೇಡ್ಕರ್ ನನ್ನ ಗುರು ಎಂದಿದ್ದಾರೆ.ರೂಪಾಯಿಗೆ ಸಂಬಂಧಪಟ್ಟಂತೆ ಅಂಬೇಡ್ಕರ್ ನಡೆಸಿದ್ದ ಅಧ್ಯಯನವೇ 1935ರ ಏ.1ರಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಗೆ ಕಾರಣವಾಯಿತು ಎಂದು ಸಚಿವರು ತಿಳಿಸಿದರು.

    ಇದನ್ನೂ ಓದಿ:ರಾಜ್ಯದಲ್ಲಿ ಮೂರು ದಿನ ಮಳೆ:ಸೈಕ್ಲೋನ್ ಪರಿಣಾಮ ಥಂಡಿ ವಾತಾವರಣ

    ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ಎಲ್. ನಾರಾಯಣಸ್ವಾಮಿ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಉಜ್ವಲ್‌ಕುಮಾರ್ ಘೋಷ್, ಮಹಾಬೋಧಿ ಸೊಸೈಟಿಯ ಮಹಾಬೋಧಿ ಬಿಕ್ಕು ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts