More

    ಕರ್ನಾಟಕ ಶಾಲೆಗಳಲ್ಲಿ ಕೋಡಿಂಗ್, AI ಮಾಡ್ಯೂಲ್‌ ಪರಿಚಯಿಸುವ Future Engineer ಕಾರ್ಯಕ್ರಮ ವಿಸ್ತರಿಸಿದ ಅಮೆಜಾನ್

    ಬೆಂಗಳೂರು: ʻಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸೊಸೈಟಿʼ(ಕೆಆರ್‌ಇಐಎಸ್) ಶಾಲೆಗಳಲ್ಲಿ ಸುಧಾರಿತ ಕೋಡಿಂಗ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ಮಾಡ್ಯೂಲ್‌ಗಳನ್ನು ಪರಿಚಯಿಸಲು ʻಅಮೇಜಾನ್‌ ಡಾಟ್‌ಇನ್‌ʼ(Amazon.in) ತನ್ನ ʻಅಮೆಜಾನ್ ಫ್ಯೂಚರ್ ಇಂಜಿನಿಯರ್ʼ (ಎಎಫ್ಇ) ಕಾರ್ಯಕ್ರಮವನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಕಂಪನಿಯು 30 ʻಕೆಆರ್‌ಇಐಎಸ್ʼ ಶಾಲೆಗಳಿಗೆ ಡಿಜಿಟಲ್ ಮೂಲಸೌಕರ್ಯ ಸುಧಾರಣೆಯನ್ನು ಸಹ ಒದಗಿಸುತ್ತದೆ. ಈ ವಿಸ್ತರಣೆಯು ಕರ್ನಾಟಕದ 30 ಜಿಲ್ಲೆಗಳಲ್ಲಿ 6 ರಿಂದ 8 ನೇ ತರಗತಿಯ 13,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ.

    ಕಂಪ್ಯೂಟರ್ ವಿಜ್ಞಾನದ ಸಾಧ್ಯತೆಗಳನ್ನು ಅನ್ವೇಷಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದ ಈ ಹಿಂದಿನ ಉಪಕ್ರಮದ ಯಶಸ್ಸನ್ನು ಆಧರಿಸಿ ವಿದ್ಯಾರ್ಥಿಗಳಿಗೆ ನಿಯಂತ್ರಣ ಪರಿಸ್ಥಿತಿಗಳು, ವೇರಿಯಬಲ್‌ಗಳು ಮತ್ತು ಕಾರ್ಯಕಲಾಪಗಳಂತಹ ಸುಧಾರಿತ ಪ್ರೋಗ್ರಾಮಿಂಗ್ ಪರಿಕಲ್ಪನೆಗಳನ್ನು ಒಳಗೊಂಡ ಸಂಕೀರ್ಣ ಕಂಪ್ಯೂಟರ್ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಲು ಈ ವಿಸ್ತೃತ ಮಾಡ್ಯೂಲ್ ಅನುವು ಮಾಡಿಕೊಡುತ್ತದೆ. ಹೆಚ್ಚುವರಿಯಾಗಿ, ಪ್ರಾಜೆಕ್ಟ್ ಆಧಾರಿತ ಕಲಿಕೆಯ ಮೂಲಕ, ವಿದ್ಯಾರ್ಥಿಗಳಿಗೆ ʻಎಐʼನ ಮೂಲಭೂತ ಅಂಶಗಳನ್ನು ಅದರ ಪ್ರಸ್ತುತತೆ, ಭವಿಷ್ಯದ ಸಾಧ್ಯತೆಗಳು ಮತ್ತು ಅವರ ಜೀವನ ಮತ್ತು ಅವರ ಸುತ್ತಲಿನ ಪ್ರಪಂಚದ ಮೇಲೆ ಪರಿಣಾಮದ ಬಗ್ಗೆ ಹೆಚ್ಚಿನ ತಿಳಿವಳಿಕೆಯೊಂದಿಗೆ ಹೇಳಿಕೊಡಲಾಗುತ್ತದೆ.

    ಈ ಕಾರ್ಯಕ್ರಮವು ಅಮೆಜಾನ್ ʻಫ್ಯೂಚರ್ ಇಂಜಿನಿಯರ್ ಕಾರ್ಯಕ್ರಮʼದ ಅಡಿಯಲ್ಲಿ ʻಕೆಆರ್‌ಇಐಎಸ್ʼ ಶಾಲೆಗಳಿಗೆ ನೀಡಲಾಗುವ ಕೋಡಿಂಗ್, ತಾರ್ಕಿಕ ಅನುಕ್ರಮ, ಕಲಿಕೆಯ ಲೂಪ್‌ಗಳು ಮತ್ತು ಬ್ಲಾಕ್ ಪ್ರೋಗ್ರಾಮಿಂಗ್‌ನಲ್ಲಿ ಪ್ರಸ್ತುತ ಕೋರ್ಸ್‌ಗಳಿಗೆ ಪೂರಕವಾಗಿರುತ್ತದೆ. ಕಂಪ್ಯೂಟರ್ ವಿಜ್ಞಾನ ಮತ್ತು ಕೋಡಿಂಗ್‌ಗೆ ವಿದ್ಯಾರ್ಥಿಗಳ ಪ್ರಸ್ತುತ ಪರಿಚಯವನ್ನು ಗಣನೆಗೆ ತೆಗೆದುಕೊಳ್ಳಲು 20 ಗಂಟೆಗಳ ಮಾಡ್ಯೂಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ಆರನೇ ತರಗತಿ ವಿದ್ಯಾರ್ಥಿಗಳಿಗೆ ಬ್ಲಾಕ್ ಪ್ರೋಗ್ರಾಮಿಂಗ್‌ನ ಮೂಲಭೂತ ಅಂಶಗಳನ್ನು ಕಲಿಸಲಾಗುವುದು, ಏಳನೇ ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಸುಧಾರಿತ ಪ್ರೋಗ್ರಾಮಿಂಗ್ ಮತ್ತು ʻಎಐʼನ ಮೂಲಭೂತ ಅಂಶಗಳನ್ನು ಪರಿಚಯಿಸಲಾಗುವುದು.

    Future Engineer Program

    ಈ ಉಪಕ್ರಮವನ್ನು ʻಲರ್ನಿಂಗ್ ಲಿಂಕ್ಸ್ ಫೌಂಡೇಶನ್ʼ(ಎಲ್ಎಲ್ಎಫ್) ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗಿದೆ. ಇದರಡಿ ಪರಿಚಯಾತ್ಮಕ ಕೋಡಿಂಗ್ ಸೆಷನ್‌ಗಳನ್ನು ನಡೆಸಲಾಗುವುದು ಮತ್ತು ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಸೂಕ್ತವಾದ ಕೋಡಿಂಗ್ ಬೂಟ್ ಶಿಬಿರಗಳನ್ನು ನಡೆಸಲಾಗುವುದು. ಇದು ದೂರದ ಪ್ರದೇಶಗಳಲ್ಲಿರುವ ಶಾಲೆಗಳಿಗೆ ಕಂಪ್ಯೂಟರ್ ವಿಜ್ಞಾನದ ಲಭ್ಯತೆಯನ್ನು ಸಾಧ್ಯವಾಗಿಸುತ್ತದೆ. ಇದಲ್ಲದೆ, ದೀರ್ಘಾವಧಿಯಲ್ಲಿ ಪರಿಣಾಮಕಾರಿ ಕಂಪ್ಯೂಟರ್ ವಿಜ್ಞಾನ ಕಲಿಕೆಗೆ ಅನುಕೂಲವಾಗುವಂತೆ ಶಿಕ್ಷಕರಿಗೆ ವೃತ್ತಿಪರ ಅಭಿವೃದ್ಧಿ ಬೆಂಬಲ ಮತ್ತು ಸಂಪನ್ಮೂಲಗಳನ್ನು ಒದಗಿಸಲು ಶಿಕ್ಷಣತಜ್ಞರೊಂದಿಗೆ ʻಎಲ್ಎಲ್ಎಫ್ʼ ಕೈಜೋಡಿಸುತ್ತದೆ. ಈ ಪ್ರಯತ್ನಗಳಿಗೆ ಪೂರಕವಾಗಿ, ʻಅಮೆಜಾನ್ʼ ಉದ್ಯೋಗಿಗಳು ʻಕ್ಲಾಸ್ ಚಾಟ್ʼ ಶಿಬಿರಗಳನ್ನು ನಡೆಸುತ್ತಾರೆ, ಟೆಕ್ ಉದ್ಯಮದೊಳಗಿನ ವೈವಿಧ್ಯಮಯ ವೃತ್ತಿ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಗುರಿಗಳನ್ನು ಸಾಧಿಸುವ ಮಾರ್ಗಗಳ ಬಗ್ಗೆ ಒಳನೋಟಗಳನ್ನು ಒದಗಿಸುತ್ತಾರೆ.

    “ಅಮೆಜಾನ್ ಫ್ಯೂಚರ್ ಇಂಜಿನಿಯರ್ ಕಾರ್ಯಕ್ರಮದ ಸುಧಾರಿತ ಕೋಡಿಂಗ್ ಮತ್ತು ಎಐ ಮಾಡ್ಯೂಲ್‌ಗಳ ಸಂಯೋಜನೆಯು ಹೆಚ್ಚುತ್ತಿರುವ ತಂತ್ರಜ್ಞಾನ ಕೇಂದ್ರಿತ ಜಗತ್ತಿನಲ್ಲಿ ಮುಂದೆ ಸಾಗಲು ಅಗತ್ಯವಾದ ಪ್ರಾವೀಣ್ಯತೆಯೊಂದಿಗೆ ನಮ್ಮ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ನಮ್ಮ ಆಶಯಕ್ಕೆ ಅತ್ಯಂತ ಸೂಕ್ತವಾಗಿ ಹೊಂದಿಕೆಯಾಗುತ್ತದೆ,” ಎಂದು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶ್ರೀ ಮಣಿವಣ್ಣನ್ ಪಿ ಹೇಳಿದರು.

    “100 ಶಾಲೆಗಳಲ್ಲಿ ಸುಧಾರಿತ ಕೋಡಿಂಗ್ ಮತ್ತು ʻಎಐʼ ಮಾಡ್ಯೂಲ್‌ಳನ್ನು ಸೇರಿಸಲು ʻಕೆಆರ್‌ಇಐಎಸ್ʼ ಸಹಭಾಗಿತ್ವದಲ್ಲಿ ಅಮೆಜಾನ್ ತನ್ನ ʻಫ್ಯೂಚರ್ ಇಂಜಿನಿಯರ್ʼ ಕಾರ್ಯಕ್ರಮವನ್ನು ವಿಸ್ತರಿಸುತ್ತಿದೆ. ಇದು ಗುಣಮಟ್ಟದ ಕಂಪ್ಯೂಟರ್ ವಿಜ್ಞಾನ ಶಿಕ್ಷಣಕ್ಕೆ ಸಮಾನ ಪ್ರವೇಶವನ್ನು ಒದಗಿಸುವ ನಮ್ಮ ಬದ್ಧತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ವಿದ್ಯಾರ್ಥಿಗಳ ಸಾಮಾಜಿಕ ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಅವರ ಪ್ರತಿಭೆಯನ್ನು ಪೋಷಿಸಲು ಮತ್ತು ಭವಿಷ್ಯಕ್ಕಾಗಿ ಅವರನ್ನು ಸಜ್ಜುಗೊಳಿಸಲು ನಾವು ಉತ್ಸುಕರಾಗಿದ್ದೇವೆ. ಈ ಪ್ರಾಜೆಕ್ಟ್ ಆಧಾರಿತ ಕಲಿಕಾ ಮಾಡ್ಯೂಲ್, ತಂತ್ರಜ್ಞಾನ ಚಾಲಿತ ಜಗತ್ತಿನಲ್ಲಿ ಉತ್ಕೃಷ್ಟತೆ ಸಾಧಿಸಲು ಅಗತ್ಯವಾದ ಕೌಶಲ್ಯಗಳು ಮತ್ತು ಜ್ಞಾನದೊಂದಿಗೆ ವಿದ್ಯಾರ್ಥಿಗಳನ್ನು ಸಶಕ್ತಗೊಳಿಸುತ್ತದೆ. ಶಿಕ್ಷಣದ ಪರಿವರ್ತಕ ಶಕ್ತಿಯನ್ನು ಗುರುತಿಸಿ, ಉತ್ತಮ ಗುಣಮಟ್ಟದ ಕಂಪ್ಯೂಟರ್ ವಿಜ್ಞಾನ ಶಿಕ್ಷಣಕ್ಕೆ ಪ್ರವೇಶವನ್ನು ಎಲ್ಲರಿಗೂ ಒದಗಿಸಲು ʻಅಮೆಜಾನ್ʼ ಬದ್ಧವಾಗಿದೆ,” ಎಂದು ಅಮೆಜಾನ್ ಜಾಗತಿಕ ಸಾರ್ವಜನಿಕ ನೀತಿಯ ಹಿರಿಯ ಉಪಾಧ್ಯಕ್ಷ ಮತ್ತು ಜನರಲ್ ಕೌನ್ಸೆಲ್ ಡೇವಿಡ್ ಜಪೋಲ್‌ಸ್ಕೈ ಹೇಳಿದರು.

    ಸೆಪ್ಟೆಂಬರ್ 2023ರಲ್ಲಿ, ʻಅಮೆಜಾನ್ ಇಂಡಿಯಾʼ ಸಂಸ್ಥೆಯು ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬುಡಕಟ್ಟು ವಿದ್ಯಾರ್ಥಿಗಳ ರಾಷ್ಟ್ರೀಯ ಶಿಕ್ಷಣ ಸೊಸೈಟಿ (ಎನ್ಇಎಸ್‌ಟಿಎಸ್) ಜೊತೆ ತನ್ನ ಪಾಲುದಾರಿಕೆಯನ್ನು ವಿಸ್ತರಿಸುವುದಾಗಿ ಘೋಷಿಸಿತು. ಆಂಧ್ರಪ್ರದೇಶ, ಗುಜರಾತ್, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳಾದ್ಯಂತ 54 ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ (ಇಎಂಆರ್‌ಎಸ್) ʻಅಮೆಜಾನ್ ಫ್ಯೂಚರ್ ಎಂಜಿನಿಯರ್ʼ ಕಾರ್ಯಕ್ರಮವನ್ನು ಪ್ರಾರಂಭಿಸುವುದು ಇದರ ಉದ್ದೇಶ. ಆರರಿಂದ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳ ಕಲಿಕಾ ವಿಷಯಕ್ಕೆ ʻಕಂಪ್ಯೂಟರ್ ವಿಜ್ಞಾನ ಮೂಲಾಂಶ ಮಾಡ್ಯೂಲ್ʼ ಜೊತೆಗೆ ಸುಧಾರಿತ ಬ್ಲಾಕ್ ಪ್ರೋಗ್ರಾಮಿಂಗ್ ಮತ್ತು ಕೃತಕ ಬುದ್ಧಿಮತ್ತೆ ಸೇರಿಸಲು ಈ ಸಹಭಾಗಿತ್ವವನ್ನು ವಿಸ್ತರಿಸಲಾಯಿತು.

    ಅಮೆಜಾನ್, 2021ರಲ್ಲಿ ಭಾರತದಲ್ಲಿ ʻಎಎಫ್ಇʼ ಅನ್ನು ಪರಿಚಯಿಸಿತು ಮತ್ತು ʻಲೀಡರ್ಶಿಪ್ ಫಾರ್ ಈಕ್ವಿಟಿʼ, ʻಲರ್ನಿಂಗ್ ಲಿಂಕ್ಸ್ ಫೌಂಡೇಶನ್ʼ ಸೇರಿದಂತೆ ಹಲವಾರು ಶಿಕ್ಷಣ-ಕೇಂದ್ರಿತ ಲಾಭರಹಿತ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ. ʻಅಮೆಜಾನ್ ಫ್ಯೂಚರ್ ಇಂಜಿನಿಯರ್ʼ ಎಂಬುದು ಕಂಪ್ಯೂಟರ್ ವಿಜ್ಞಾನ ಶಿಕ್ಷಣ ಕಾರ್ಯಕ್ರಮವಾಗಿದ್ದು, ಇದು ಎಲ್ಲಾ ಯುವಕರಿಗೆ ತಮ್ಮ ಸಾಮರ್ಥ್ಯವನ್ನು ಅನ್ವೇಷಿಸಲು ಮತ್ತು ನಮ್ಮೆಲ್ಲರಿಗೂ ಉತ್ತಮ ಜಗತ್ತನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ. ಬಾಲ್ಯದಿಂದ ವೃತ್ತಿಜೀವನದ ಕಾರ್ಯಕ್ರಮವಾಗಿ, ʻಎಎಫ್ಇʼ ಕೊಡುಗೆಗಳು ಪ್ರಾಥಮಿಕ ಶಾಲಾ ಶಿಕ್ಷಣದಿಂದ ಪ್ರಾರಂಭವಾಗುತ್ತವೆ ಮತ್ತು ಮಾಧ್ಯಮಿಕ ಶಿಕ್ಷಣದವರೆಗೆ ವೃತ್ತಿಜೀವನದವರೆಗೆ ಮುಂದುವರಿಯುತ್ತವೆ. ಈ ಕಾರ್ಯಕ್ರಮದ ಅಡಿಯಲ್ಲಿ, ʻಅಮೆಜಾನ್ʼ, ಟೆಕ್ ಉದ್ಯಮದಲ್ಲಿ ವೃತ್ತಿಜೀವನವನ್ನು ಮಾಡಲು ಆಸಕ್ತಿ ಹೊಂದಿರುವ ಹುಡುಗಿಯರಿಗೆ ವಿದ್ಯಾರ್ಥಿವೇತನ ಮತ್ತು ಇಂಟರ್ನ್‌ಶಿಪ್‌ಗಳುನ್ನು ಸಹ ನೀಡಿದೆ. ʻಅಮೆಜಾನ್ʼ ತನ್ನ ಧ್ಯೇಯವನ್ನು ಹಂಚಿಕೊಳ್ಳುವ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದೆ ಮತ್ತು ಸ್ವಯಂ ಅಭಿವ್ಯಕ್ತಿ, ಸಾಮಾಜಿಕ ನ್ಯಾಯ, ಸುಸ್ಥಿರತೆ ಮುಂತಾದವುಗಳ ಮೂಲಕ ಕಂಪ್ಯೂಟರ್ ವಿಜ್ಞಾನದ ಶ್ರೀಮಂತಿಕೆಯನ್ನು ಕಂಡುಹಿಡಿಯಲು ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ. ಇಲ್ಲಿಯವರೆಗೆ, ʻಅಮೆಜಾನ್ ಫ್ಯೂಚರ್ ಇಂಜಿನಿಯರ್ʼ ಕಾರ್ಯಕ್ರಮವು 1.5 ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿಜ್ಞಾನವನ್ನು ಅನ್ವೇಷಿಸಲು ಮತ್ತು ಕಲಿಯಲು ಬೆಂಬಲ ನೀಡಿದೆ ಮತ್ತು ದೇಶಾದ್ಯಂತ 8,000 ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಿದೆ.

    ಪಿಎಸ್​ಐ ನೇಮಕಾತಿ ಹಗರಣ: 545 PSI ಹುದ್ದೆಗಳ ಮರು ಪರೀಕ್ಷೆ ಜ.23ಕ್ಕೆ ಮುಂದೂಡಿಕೆ

    ಕಾಡಾನೆಯೊಂದಿಗೆ ಕಾದಾಡಿ ಪ್ರಾಣಬಿಟ್ಟ ಅರ್ಜುನ! 8 ಬಾರಿ ಅಂಬಾರಿ ಹೊತ್ತಿದ್ದ ಮಾಜಿ ಕ್ಯಾಪ್ಟನ್​ ಇನ್ನು ನೆನಪು ಮಾತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts