More

    ಅಮರನಾಥ ಯಾತ್ರಿಗಳು ಸುರಕ್ಷಿತ

    ಗದಗ: ಅಮರನಾಥ ಯಾತ್ರೆಗೆ ಗದಗ ಜಿಲ್ಲೆ ಹಾಗೂ ರಾಜ್ಯದಿಂದ ತೆರಳಿದ್ದ ಎಲ್ಲ ಯಾತ್ರಾರ್ಥಿಗಳು ಸುರಕ್ಷಿತ ಇದ್ದಾರೆ. ಅವರನ್ನು ಆದಷ್ಟು ಬೇಗ ಕರೆ ತರುವ ವ್ಯವಸ್ಥೆ ಮಾಡಲಾಗುವುದು  ಎಂದು  ಸಚಿವ ಎಚ್.ಕೆ.ಪಾಟೀಲ ಮತ್ತು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲ ಹೇಳಿದರು. 

    ಗದಗ ನಗರದಲ್ಲಿ ಪ್ರತ್ಯೇಕವಾಗಿ ಸುದ್ದಿಗೋಷ್ಟಿ ನಡೆಸಿ ಯಾತ್ರಿಗಳ ಕುರಿತು ವಿಷಯ ಹಂಚಿಕೊಂಡರು.

    ಎಚ್. ಕೆ. ಪಾಟೀಲ ಮಾತನಾಡಿ, ಹವಾಮಾನ ವೈಪರೀತ್ಯ ಹಾಗೂ ಗುಡ್ಡ ಕುಸಿತದಿಂದಾಗಿ ಪಂಚತರಣಿ ಬೇಸ್  ಕ್ಯಾಂಪ್ ಕಳೆದರಡು ದಿನಗಳಿಂದ ರಕ್ಷಣೆ ಪಡೆಯುತ್ತಿದ್ದಾರೆ. ಕೆಲವರ ಜತೆ ನಾನು ಮಾತನಾಡಿದ್ದೇನೆ. ಭಾನುವಾರ ಬೆಳಗ್ಗೆ  ತೊಂದರೆಯಲ್ಲಿದ್ದ ಪಂಚತರಣಿ ಕ್ಯಾಂಪ್ ನಿಂದ  ನೀಲ್ ಗ್ರಥ ಕ್ಯಾಂಪ್ ಕರೆ ತರಲಾಗಿದೆ. ನೀಲ್ ಗ್ರಥ ನಿಂದ ಶ್ರೀನಗರ ಬರಲು 3 ಗಂಟೆಗೂ ಅಧಿಕ ಪ್ರಯಾಣ ಮಾಡಬೇಕಿದ್ದು ವಾತಾವರಣ ವೈಪರೀತ್ಯ ಅನುಗುಣವಾಗಿ ಶ್ರೀನಗರಕ್ಕೆ ಕರೆತರಲಾಗುವುದು. ಗದಗ ಜಿಲ್ಲೆಯ ಎಲ್ಲ 23 ಜನರು ಸಂಜೆಯ ವೇಳೆಗೆ ಶ್ರೀನಗರಕ್ಕೆ ತಲುಪುವ ಸಾಧ್ಯತೆ ಇದು ಎಂದರು.

    ಹವಾಮಾನ ವೈಪರೀತ್ಯ ಹಾಗೂ ಅತಿಯಾದ ಚಳಿಯಿಂದಾಗಿ ಸಮಸ್ಯೆಯಾಗಿತ್ತು. ಅಮರನಾಥ ಆಡಳಿತ ಮಂಡಳಿ, ಮಿಲಿಟರಿ ಅಧಿಕಾರಿಗಳು ಎಲ್ಲರಿಗೂ ಅಗತ್ಯ ನೆರವನ್ನು ನೀಡಿದ್ದು ಅವರನ್ನು ನಾನು ಅಭಿನಂದಿಸುತ್ತೇನೆ ಎಂದರು. 

    ಅಲ್ಲಿರುವ ಯಾರಿಗೂ ಯಾವುದೇ ತೊಂದರೆ ಇಲ್ಲ. ಹಾಗಾಗಿ ಯಾರೂ ಭಯ ಪಡುವಂತ ಅವಶ್ಯಕತೆ ಇಲ್ಲ. ಯಾತ್ರಾರ್ಥಿಗಳಿಗೆ ಮೆಡಿಕಲ್ ಹಾಗೂ ಹಾಸಿಗೆ ಹೊದಿಕೆ ನೀಡಿ ವಿಶೇಷ ಕಾಳಜಿ ವಹಿಸಲಾಗಿದೆ. ಭಾನುವಾರ ಬೆಳಗ್ಗೆ ನಾನು

    ತೊಂದರೆಯಲ್ಲಿದ್ದ ವಿನೋದ ಅನ್ನುವವರ ಜತೆ ನಾನು ಮಾತನಾಡಿದ್ದೇನೆ. ರಾಜ್ಯ ಸರ್ಕಾರದ ಹಿರಿಯ ಅಧಿಕಾರಿ ರೇಶ್ಮಿ ಮಹೇಶ ಈ ಪ್ರಕರಣ ನಿರ್ವಹಿಸುತ್ತಿದ್ದಾರೆ. ಇನ್ನೋರ್ವ ಹಿರಿಯ ಅಧಿಕಾರಿ ಸುನೀಲಕುಮಾರ ಶ್ರೀನಗರ ತಲುಪಿದ್ದಾರೆ. ನಾಲ್ಕೈದು ದಿನಗಳಲ್ಲಿ ಅವರೆಲ್ಲರೂ ಸೇಫ್ ಆಗಿ  ಮರಳಿ ಬರುತ್ತಾರೆ‌ ಎಂದು ಎಚ್.ಕೆ.ಪಾಟೀಲ ಹೇಳಿದರು.

    ಅಮರನಾಥ ಯಾತ್ರಾರ್ಥಿಗಳ ಕುರಿತು ಸಿ.ಸಿ. ಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೊಂದಿಗೆ ಮಾತನಾಡಿದ್ದಾಗಿ ತಿಳಿಸಿದರು. ಕೇಂದ್ರ ಸರ್ಕಾರ ಯಾತ್ರಿಗಳನ್ನು ಕರೆತರಲು ಸಕಲ ಸಿದ್ದತೆ ನಡೆಸಿದೆ. ದೆಹಲಿಯಿಂದ ಅಧಿಕಾರಿಗಳು ನೇರ ಸಂಪರ್ಕದಲ್ಲಿ ಇದ್ದಾರೆ. ಅವರ ಕುಟುಂಬದವರು ಆತಂಕ ಪಡುವ ಅಗತ್ಯವಿಲ್ಲ. ಸುರಕ್ಷಿತರಾಗಿ ಮರಳರಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts