More

    ಆಲೂರಮ್ಮ, ಮಸಣಕಮ್ಮ ದೇವಸ್ಥಾನ ವಿಗ್ರಹ ಪ್ರತಿಷ್ಠಾಪನೆಗೆ ಚಾಲನೆ

    ಮದ್ದೂರು: ತಾಲೂಕಿನ ಆಲೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಆಲೂರಮ್ಮ ಮತ್ತು ಮಸಣಕಮ್ಮ ದೇವಸ್ಥಾನದ ವಿಗ್ರಹ ಪ್ರತಿಷ್ಠಾಪನಾ ಸಮಾರಂಭ ಆರಂಭಗೊಂಡಿದ್ದು ಫೆ.22ರವರೆಗೂ ನಡೆಯಲಿದೆ ಎಂದು ದೇವಸ್ಥಾನ ಅಭಿವೃದ್ಧಿ ಸೇವಾ ಟ್ರಸ್ಟ್ ಅಧ್ಯಕ್ಷ ಎ.ಎಲ್.ರಾಮಚಂದ್ರು ತಿಳಿಸಿದರು.

    ಸೋಮವಾರ ಮುಂಜಾನೆಯಿಂದಲೇ ವೇದಪಾರಾಯಣ, ಗಣಪತಿ ಪ್ರಾರ್ಥನೆ, ಅಮ್ಮನವರ ಅನುಜ್ಞೆ, ಮಹಾಗಣಪತಿ ಪೂಜೆ, ಪುಣ್ಯಾಹ, ಯಜಮಾನ ಸಂಕಲ್ಪ, ಪಂಚಗವ್ಯ, ಗಣಪತಿ ನವಗ್ರಹ, ಮಹಾಲಕ್ಷ್ಮೀ ಕಳಶಾರಾಧನೆ ಹಾಗೂ ಮಹಾಗಣಪತಿ ಅದಿತಾದಿ ನವಗ್ರಹ ಸಹಿತ ಲಕ್ಷ್ಮೀ ಹೋಮ, ದ್ರವ್ಯಹುತಿ, ಪೂರ್ಣಾಹುತಿ, ಮಹಾ ಮಂಗಳಾರತಿ ಬಳಿಕ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಸಂಜೆ ಆಲೂರಮ್ಮನವರಿಗೆ ಪೂಜೆ ನೆರವೇರಿಸಲಾಯಿತು ಎಂದು ತಿಳಿಸಿದರು.

    ಫೆ.20ರಂದು ಬೆಳಗ್ಗೆ 8 ಗಂಟೆಗೆ ಮಂಗಳವಾದ್ಯದೊಂದಿಗೆ ಗುರು ಗಣಪತಿ ಪಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ಮಹಾ ಸಂಕಲ್ಪ, ಮೃತ್ಯುಂಗ್ರಹಣ ಅಂಕುರಾರ್ಪಣೆ, ರಕ್ಷಾ ಬಂಧನ, ಮೊದಲನೇ ಯಾಗಾಶಾಲಾ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ. ಸಂಜೆ 5 ಗಂಟೆಗೆ ಶ್ರೀ ಸುಬ್ಬರಾವ್‌ದಾಸರು, ವಿಠಲಸೇವಾ ಟ್ರಸ್ಟ್ ವತಿಯಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 9 ಗಂಟೆಗೆ ನವರತ್ನ ಸಹಿತ ಯಂತ್ರ ಸ್ಥಾಪನೆ, ಅಷ್ಟಬಂಧನ ಅಮರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದರು.

    21ರಂದು ಬೆಳಗ್ಗೆ 6 ಗಂಟೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಮಹಾ ಕುಂಭಾಭಿಷೇಕ, ಪುಷ್ಪಾಲಂಕಾರ, ಗೋಪೂಜೆ, ಧಾನ್ಯ, ಧೇನು, ದೀಪ ದರ್ಶನ ನಡೆಸಿ ತೀರ್ಥ ಪ್ರಸಾದ ವಿತರಣೆ ಮಾಡಲಾಗುವುದು. ಸಮಾಜ ಸೇವಕರಾದ ದೀಪಿಕಾ ಎಂ.ಯಶವಂತ್ ಸ್ವಂತ ಹಣದಲ್ಲಿ ನಿರ್ಮಿಸಿರುವ ಅಶ್ವತ್ಥಕಟ್ಟೆ ಉದ್ಘಾಟನೆ ಮತ್ತು ನಾಗರಕಲ್ಲನ್ನು ಪ್ರತಿಷ್ಠಾಪನೆ ಮಾಡಲಾಗುವುದು. ಮಧ್ಯಾಹ್ನ 12.30 ಗಂಟೆಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ ಎಂದರು.

    22ರಂದು ಬೆಳಗ್ಗೆ 7.30 ಕ್ಕೆ ಹುಲಿ ಪ್ರದರ್ಶನ, ಕತ್ತಿ ಪವಾಡ, ಚಂಡಿಕಾಯಾಗ, 8 ಗಂಟೆಗೆ ಮಂಗಳವಾದ್ಯ ಗಣಪತಿ ಪೂಜೆ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಯಲಿದೆ ಎಂದರು. ಟ್ರಸ್ಟ್ ಉಪಾಧ್ಯಕ್ಷ ಎಲ್.ಶಿವಲಿಂಗಯ್ಯ, ಕಾರ್ಯದರ್ಶಿ ಸಣ್ಣಯ್ಯ, ಕಾರ್ಯಾಧ್ಯಕ್ಷ ಎ.ಎಲ್.ಶಿವರಾಮು, ಖಜಾಂಚಿ ಆರ್.ರಾಮಲಿಂಗಯ್ಯ, ನಿರ್ದೇಶಕರಾದ ಎ.ದಿನೇಶ್, ಎ.ಆರ್.ನಾಗೇಂದ್ರ, ಕೆ.ಸುಪ್ರೀತ್, ಸಿ.ಶೇಖರ್, ಕೋಟಿ ಲಿಂಗಯ್ಯ, ಎ.ಟಿ.ರಘು, ಬಿ.ಸಿದ್ದರಾಮು, ಕೆ.ಪ್ರಶಾಂತ, ಎ.ಎಲ್.ರಾಜಕುಮಾರ್, ಜಗದೀಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts