More

    ನಿವೇಶನ ಹಂಚಿಕೆಯಲ್ಲಿ ತಾರತಮ್ಯ ಆರೋಪ

    ಮೂಡಿಗೆರೆ: ದಾರದಹಳ್ಳಿ ಗ್ರಾಪಂ ಅಧ್ಯಕ್ಷರು ನಿವೇಶನ ಹಂಚಿಕೆಯಲ್ಲಿ ಕೃಷ್ಣಾಪುರ ಗ್ರಾಮಸ್ಥರಿಗೆ ತಾರತಮ್ಯ ಮಾಡಿದ್ದು, ಈ ಬಗ್ಗೆ ನಾವು ಬಹಿರಂಗ ಚರ್ಚೆಗೆ ಸಿದ್ದ ಎಂದು ಗ್ರಾಮಸ್ಥ ಮಹಮ್ಮದ್ ಶರ್ೀ ಹೇಳಿದರು.
    ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಪಂ ಅಧ್ಯಕ್ಷರು ನಿವೇಶನ ಹಂಚಿಕೆಯನ್ನು ರಾಜೀವ್‌ಗಾಂಧಿ ಹೌಸಿಂಗ್ ಗೈಡ್‌ಲೈನ್‌ನಂತೆ ಕೆಟಗರಿ ಮತ್ತು ಸಿನಿಯಾರಿಟಿ ಪ್ರಕಾರ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಪಾರದರ್ಶಕವಾಗಿ ನಿವೇಶನ ಹಂಚಿಕೆ ಮಾಡಿದ್ದರೆ ಕೃಷ್ಣಾಪುರ ಗ್ರಾಮದ ಕೆಲವರಿಗೆ ನಿವೇಶನ ಸಿಗಬೇಕಿತ್ತು. ನಿವೇಶನ ಆಯ್ಕೆ ಪ್ರಕ್ರಿಯೆಯಲ್ಲಿ ಲೋಪಕಂಡು ಬಂದರೆ ಏಳು ದಿನದೊಳಗೆ ತಕರಾರು ಅರ್ಜಿ ನೀಡಲು ಹಾಕಿದ ನೋಟೀಸನ್ನು ನಾವು ಹರಿದು ಹಾಕಿಲ್ಲ ಎಂದು ತಿಳಿಸಿದರು.
    ನಿವೇಶನ ಹಂಚಿಕೆಯಾಗಿರುವ ಬಗ್ಗೆ ಮೊದಲು ಕೃಷ್ಣಾಪುರ ಸಮುದಾಯ ಭವನದಲ್ಲಿ ಬಹಿರಂಗ ಚರ್ಚೆಯಾಗಬೇಕು. ಅಲ್ಲಿಯವರೆಗೂ ಯಾರಿಗೂ ನಿವೇಶನ ಹಂಚಿಕೆ ಮಾಡಬಾರದು. ಒಂದು ವೇಳೆ ನಿವೇಶನ ಹಂಚಿಕೆ ಮಾಡಿದರೆ ಗ್ರಾಪಂ ಎದುರು ಟೆಂಟ್ ಹಾಕಿ ಗ್ರಾಮಸ್ಥರೊಂದಿಗೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕೆ.ಎಂ.ಮುಸ್ತಾಕ್, ಹರೀಶ್, ರಾಮ್‌ರಾವ್, ಅಲ್ತ್ಾ, ಮುಸ್ತಾಕ್‌ಅಲಿ, ಜೋಸ್ೆ, ಪ್ರಕಾಶ್, ಶರೀಾ, ಸಾಯಿರಾ, ಕುಸುಮಾ, ಜ್ಯೋತಿ, ಕಮಲಾಕ್ಷಿ, ಜುಬೇದಾ, ಮಂಜುಳಾ, ತಸ್ಲೀಮಾ, ಸುಮಯ್ಯ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts