More

    ಯುದ್ಧ ಗೆದ್ದು ರಾಮ ಮಂದಿರ ನಿರ್ಮಾಣ

    ಚಿಕ್ಕಮಗಳೂರು: ಆದರ್ಶ ಪುರುಷ ಶ್ರೀರಾಮನ ಮಂದಿರ ನಿರ್ವಣಕ್ಕಾಗಿ 77ಕ್ಕೂ ಹೆಚ್ಚು ವಿವಿಧ ರೀತಿಯ ಯುದ್ಧಗಳು ನಡೆದಿದ್ದು ಸಾಧು, ಸಂತರು, ಮಹಿಳೆಯರಾದಿಯಾಗಿ ಎಲ್ಲರ ಹೋರಾಟಕ್ಕೆ ಈಗ ಫಲ ಸಿಕ್ಕಿದೆ ಎಂದು ಅಖಿಲ ಭಾರತ ಬೌದ್ದಿಕ್ ಟೋಳಿ ಸದಸ್ಯ ನಾ.ನಾಗರಾಜ್ ಹೇಳಿದರು.

    ಶ್ರೀರಾಮ ಮಂದಿರ ನಿಧಿ ಸಮರ್ಪಣ ಅಭಿಯಾನದ ಅಂಗವಾಗಿ ಡಿಎಸಿಜಿ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಭಾನುವಾರ ಹಮ್ಮಿಕೊಂಡಿದ್ದ ಶ್ರೀರಾಮ್ ಮಹಾ ಸಾಂಘಿಕ್ ಕಾರ್ಯಕ್ರಮದಲ್ಲಿ ಮಾತನಾಡಿ, ಆ ಎಲ್ಲ ಯುದ್ಧಗಳಿಗೂ 80ರ ನಂತರ ನ್ಯಾಯಾಲಯಗಳ ತೀರ್ಪು ಬಂದು ಈಗಲೂ ಮಂದಿರ ಕೆಲಸ ನಡೆಯುತ್ತಿದೆ. ರಾಮಶಿಲಾ, ರಾಮಜ್ಯೋತಿ, ಚಿತಾಭಸ್ಮದ ಯಾತ್ರೆ, ರಥಯಾತ್ರೆ ನಡೆದ ನಂತರ ವಿವಾದಿತ ಸ್ಥಳ ರಾಮನಸ್ಥಳ ಎಂದು ತೀರ್ಪು ಪ್ರಕಟವಾಯಿತು ಎಂದರು.

    ರಾಮ ಮಂದಿರ ನಿರ್ವಣಕ್ಕಾಗಿ ಓಡಾಡಬೇಕಿದೆ. ಕನಿಷ್ಠ ಒಂದು ಸಾವಿರ ವರ್ಷ ಅಲ್ಲಿಗೆ ಬರುವ ಭಕ್ತರಿಗೆ ನಮ್ಮ ಧರ್ಮ, ಸಂಸ್ಕೃತಿ, ನಡವಳಿಕೆ, ಆದರ್ಶಗಳೇನು ಎಂಬುದು ಪ್ರತ್ಯಕ್ಷ ದರ್ಶನವಾಗಬೇಕು. ಹಿಂದು ಧರ್ಮವನ್ನು ತಿಳಿದುಕೊಳ್ಳಬೇಕೆಂದರೆ ಶ್ರೀರಾಮಮಂದಿರಕ್ಕೆ ಹೋಗಬೇಕು. ವೇದ, ಪುರಾಣ, ರಾಮಾಯಣ, ಮಹಾಭಾರತ, ಯೋಗ, ಆಯುರ್ವೆದ ಎಲ್ಲದರ ಅಧ್ಯಯನ ಕೇಂದ್ರವಾಗಿ ಜಗತ್ತಿನ ಜನ ಅಯೋಧ್ಯೆಯನ್ನು ಹುಡುಕಿಕೊಂಡು ಬರುವಂತಾಗಬೇಕು ಎಂದು ಹೇಳಿದರು.

    ರಾಮ ಯಾವುದೇ ಭೇದ ಇಲ್ಲದೆ ಪ್ರಾಣಿ, ಪಕ್ಷಿಗಳಿಗೂ ಬೆಲೆಕೊಟ್ಟ ಮರ್ಯಾದ ಪುರುಷೋತ್ತಮ. ಅವನ ತತ್ವ, ಜೀವನ ಶ್ರೇಷ್ಠವಾದುದು. ರಾಮ ರಾಜ್ಯವಾಗಬೇಕೆಂದು ಮಹಾತ್ಮ ಗಾಂಧೀ ಹೇಳಿದ್ದರು. ಎಂದಿಗೂ ಸೋಲರಿಯದ ಶ್ರೇಷ್ಠ ಪಂಥ ನಮ್ಮ ದಾಗಿರುವುದರಿಂದ ಹಿಂದು ಧರ್ಮ ಮತ್ತು ಮೃತ್ಯುಂಜಯ ಸಂಸ್ಕೃತಿಯನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

    ಕಾರ್ಯಕ್ರಮದಲ್ಲಿ ಧ್ವಜಾರೋಹಣ, ಅಮೃತವಚನ ನಂತರ ಸಂಘದ ಪ್ರಾರ್ಥನೆ ಮಾಡಲಾಯಿತು. ನಗರ ಸಂಘಚಾಲಕ ಸ.ಗಿರಿಜಾಶಂಕರ, ವಿಭಾಗ ಸಹ ವ್ಯವಸ್ಥಾ ಪ್ರಮುಖ್ ಬಿ.ಮಲ್ಲಿಕಾರ್ಜುನ ರಾವ್, ಜಿಲ್ಲಾ ಬೌದ್ದಿಕ್ ಪ್ರಮುಖ್ ಪ್ರವೀಣ್​ಕುಮಾರ್, ಶಾರೀರಿಕ್ ಪ್ರಮುಖ್ ಪ್ರಕಾಶ್, ಪ್ರಚಾರ ಪ್ರಮುಖ್ ಸುಮಂತ್ ನೆಮ್ಮಾರ್, 400 ಕ್ಕೂ ಹೆಚ್ಚು ಸ್ವಯಂಸೇವಕರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts