More

    ‘ಸುಗಮ ಮತದಾನಕ್ಕೆ ಸಕಲ ವ್ಯವಸ್ಥೆ’

    ಮಡಿಕೇರಿ:

    ಏ.೨೬(ಶುಕ್ರವಾರ) ನಡೆಯುವ ಮತದಾನ ಪ್ರಜಾಪ್ರಭುತ್ವದ ದೊಡ್ಡ ಹಬ್ಬವಾಗಿದ್ದು, ಎಲ್ಲಾ ಅರ್ಹ ಮತದಾರರೂ ಸಕ್ರಿವಾಗಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಕರೆ ನೀಡಿದ್ದಾರೆ. ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ತಲಾ ೨೭೩ರಂತೆ ಒಟ್ಟು ೫೪೬ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಮಹಿಳಾ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿ ಅಂದರೆ ೨,೪೦,೧೮೨ ಇದ್ದಾರೆ. ಪುರುಷ ಮತದಾರರ ಸಂಖ್ಯೆ ೨,೩೦,೫೬೮ ಆಗಿದ್ದು, ೧೬ ಇತರ ಮತದಾರರು ಸೇರಿದಂತೆ ಒಟ್ಟು ೪,೭೦,೭೬೬ ಮತದಾರರು ಜಿಲ್ಲೆಯಲ್ಲಿ ಇದ್ದಾರೆ ಎಂದು ಬುಧವಾರ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಸುಸೂತ್ರ ಮತದಾನಕ್ಕಾಗಿ ೬೦೪ ಪಿಆರ್‌ಒ, ೬೦೪ ಎಪಿಆರ್‌ಒ ಹಾಘೂ ೧೨೦೮ ಪಿ.ಒ. ಸೇರಿದಂತೆ ಒಟ್ಟು ೨೪೧೬ ಸಿಬ್ಬಂದಿ ನಿಯೋಜಿಸಲಾಗಿದೆ. ೨೮ ಸಿಎಪಿಎಫ್, ೧೦೮ ಮೈಕ್ರೋ ವೀಕ್ಷಕರು, ೪ ವೀಡಿಯೋ ಕ್ಯಾಮೆರಾ, ೧೦೮ ವೆಬ್ ಕ್ಯಾಸ್ಟಿಂಗ್ ಹಾಗೂ ೪೩೮ ಹೋಮ್‌ಗಾರ್ಡ್ಗಳ ವ್ಯವಸ್ಥೆ ಮಾಡಲಾಗಿದೆ.

    ಜಿಲ್ಲೆಯಲ್ಲಿ ೧೦ ಸಖಿ ಬೂತ್‌ಗಳು, ೬ ಸಾಂಪ್ರದಾಯಿಕ ಮತಗಟ್ಟೆಗಳು, ೨ ದಿವ್ಯಾಂಗ ಮತಗಟ್ಟೆಗಳು, ೨ ಯುವ ಮತದಾರರ ಬೂತ್‌ಗಳು ಹಾಗೂ ಥೀಮ್ ಆಧಾರಿತ ೩ ಬೂತ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಮತಗಟ್ಟೆ ಅಧಿಕಾರಿಗಳಿಗೆ ಮಗಟ್ಟೆಗಳಿಗೆ ತೆರಳಲು ೮೦ ಕೆಎಸ್‌ಆರ್‌ಟಿಸಿ ಬಸ್‌ಗಳು, ೪೭ ಮಿನಿ ಬಸ್‌ಗಳು, ೭೪ ಜೀಪ್‌ಗಳು ಹಾಗೂ ೧೩ ಮ್ಯಾಕ್ಸಿಕ್ಯಾಬ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

    ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬAಧಿಸಿದAತೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ೩೨ ಪ್ರಕರಣಗಳಿಗೆ ಎಫ್‌ಐಆರ್ ದಾಖಲಾಗಿದೆ. ಒಟ್ಟು ೧೬,೫೪,೨೨೦ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ೧,೨೭,೫೧,೯೮೬ ರೂ. ಮೌಲ್ಯದ ೪೨,೩೧೮.೮೦೫ ಲೀ. ಮದ್ಯ ವಶ ಪಡಿಸಿಕೊಳ್ಳಲಾಗಿದೆ. ೯೮ ಸಾವಿರ ರೂ. ಮೌಲ್ಯದ ಮಾದಕ ವಸ್ತುಗಳೂ ಸಿಕ್ಕಿವೆ ಎಂದರು.

    ಬುಧವಾರ ಸಂಜೆಯಿAದಲೇ ಸಾರ್ವಜನಿಕ ಸಭೆ, ಬಹಿರಂಗ ಸಭೆ ನಡೆಸುವಂತಿಲ್ಲ. ಮತಗಟ್ಟೆಯ ೨೦೦ ಮೀಟರ್ ವ್ಯಾಪ್ತಿಯ ಒಳಗೆ ಪ್ರಚಾರ ಮಾಡುವಂತಿಲ್ಲ. ಮತಗಟ್ಟೆ ಬಳಿ ರಾಜಕೀಯ ಪಕ್ಷಗಳು ಕೇವಲ ೨ ಕುರ್ಚಿ, ಒಂದು ಟೇಬಲ್ ಮಾತ್ರ ಹಾಕಿಕೊಳ್ಳಬೇಕು. ಬ್ಯಾನರ್ ಗಾತ್ರ ೩*೪ ಅಡಿ ಮೀರುವ ಹಾಗಿಲ್ಲ. ಬೆಳಗ್ಗೆ ೭ರಿಂದ ಸಂಜೆ ೬ ಗಂಟೆಗೆ ತನಕ ಮತದಾನಕ್ಕೆ ಅವಕಾಶವಿದೆ. ಮತಗಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ಗಾಂಜಾ ಮಾರಾಟ, ಮತೀಯ ಗಲಭೆ ಮತ್ತಿತರ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದ ೧೨ ಜನರನ್ನು ಗಡಿಪಾರು ಮಾಡಲಾಗಿದೆ. ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದರು.
    ಅಪರ ಜಿಲ್ಲಾಧಿಕಾರಿ ವೀಣಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts