More

    ರಾಜ್ಯದಲ್ಲಿ ಮದ್ಯ ಮಾರಾಟ, ಮದ್ಯಪಾನ ನಿಷೇಧಿಸಬೇಕು: ಸಚಿವ ಸಿ.ಟಿ. ರವಿ ಪ್ರತಿಪಾದನೆ

    ಬೆಂಗಳೂರು: ಮದ್ಯ ಮಾರಾಟ ಹಾಗೂ ಮದ್ಯಪಾನ ನಿಷೇಧಿಸಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಹೇಳಿದ್ದಾರೆ.

    ಗುರುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮದ್ಯಪಾನ ಹಾಗೂ ಮಾರಾಟ ಸಂಪೂರ್ಣ ನಿಷೇಧಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೂ ಸೇರಿದಂತೆ ಹಲವು ಹಿರಿಯರ ಒಲವಿದೆ ಎಂದು ಹೇಳಿದರು.

    ‘‘ಮದ್ಯ ಮಾರಾಟ ನಿಷೇಧದ ಅವಧಿಯಲ್ಲಿನ ವಸ್ತುಸ್ಥಿತಿ ಅಧ್ಯಯನ ನಡೆಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಲ್ಲಿಸಿದ ವರದಿ ಪ್ರಕಾರ 100 ಜನರ ಪೈಕಿ 70 ಜನ ಕುಡಿಯುವುದನ್ನು ಮರೆತಿದ್ದರು. ನನ್ನ ಕೋರಿಕೆಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸ್ಪಂದಿಸಿ ಈ ವರದಿ ತಯಾರಿಸಿದ್ದರು’’ ಎಂದು ವಿವರಿಸಿದರು.

    ಇದನ್ನೂ ಓದಿ ಲಿಂಗ ದೀಕ್ಷೆ ಪಡೆದ ಹುಕ್ಕೇರಿಯ ಮುಸ್ಲಿಂ ಯುವತಿ

    ‘‘ಲಾಕ್‌ಡೌನ್‌ನಿಂದಾಗಿ ಕಡು ಕಷ್ಟದಲ್ಲಿರುವ ಟೂರಿಸ್ಟ್ ಗೈಡ್‌ಗಳು, ಪ್ರವಾಸಿ ಮಿತ್ರರು ಸೇರಿ ಅಸಂಘಟಿತ ವಲಯದ ವರ್ಗಗಳನ್ನು ಪರಿಹಾರ ಪ್ಯಾಕೇಜ್‌ನಲ್ಲಿ ಸೇರಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ’’ ಎಂದು ತಿಳಿಸಿದರು.

    ‘‘ಆರ್ಥಿಕ ಬಿಕ್ಕಟ್ಟಿದ್ದರೂ ಕಡು ಕಷ್ಟದಲ್ಲಿರುವ ಜನರಿಗೆ ನೆರವಾಗಲು 1,610 ಕೋಟಿ ರೂ. ಪರಿಹಾರ ಪ್ಯಾಕೇಜ್ ೋಷಿಸುವ ಮೂಲಕ ಸಿಎಂ ಬಿ.ಎಸ್. ಯಡಿಯೂರಪ್ಪ ದಿಟ್ಟ ನಿರ್ಧಾರ ಕೈಗೊಂಡಿದ್ದು, ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದರ ಜತೆಗೆ ಹೆಚ್ಚುವರಿಯಾಗಿ ಸೇರಿಸಬೇಕಾದ ಶ್ರಮಿಕರ ಪಟ್ಟಿಯನ್ನು ಸಲ್ಲಿಸಲಾಗಿದೆ’’ ಎಂದರು.

    ‘‘ಕಲಾವಿದರ ಬೇಡಿಕೆಗೆ ಸ್ಪಂದಿಸಿ ತಲಾ 2,000 ರೂ. ನೆರವು ನೀಡುವ ಪ್ರಕ್ರಿಯೆ ಶುರುವಾಗಿದೆ. ಇದೀಗ ಕೆಲವು ದುಡಿಯುವ ವರ್ಗಗಳಿಗೆ ೋಷಿಸಿದಂತೆ ತಮಗೂ ತಲಾ 5,000 ರೂ. ಪರಿಹಾರ ನೀಡುವಂತೆ ಕಲಾವಿದರು ಕೋರಿದ್ದು, ಇದನ್ನೂ ಕೂಡ ಸಿಎಂ ಗಮನಕ್ಕೆ ತರಲಾಗಿದೆ’’ ಎಂದು ಸಿ.ಟಿ.ರವಿ ತಿಳಿಸಿದರು.

    ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಕರೊನಾ ಪಾಠ: ಶಿಕ್ಷಣ ಇಲಾಖೆ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts