More

    ಸುಖಕ್ಕೆ ತಕ್ಕ ಕರ್ತವ್ಯದಿಂದ ಸೂಕ್ತ ಪ್ರತಿಫಲ, ಮುಂಡರಗಿಯ ನಾಡೋಜ ಡಾ. ಅನ್ನದಾನೇಶ್ವರ ಶ್ರೀ ಅಭಿಮತ

    ಅಳವಂಡಿ: ಮಾನವ ದೊರೆತ ಸುಖಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸೂಕ್ತ ಪ್ರತಿಫಲ ದೊರೆಯಲಿದೆ ಎಂದು ಮುಂಡರಗಿಯ ನಾಡೋಜ ಡಾ. ಅನ್ನದಾನೇಶ್ವರ ಶ್ರೀಗಳು ಹೇಳಿದರು. ಸಮೀಪದ ಮುರ್ಲಾಪುರದಲ್ಲಿ 132ನೇ ವರ್ಷದ ಆದಿಶಕ್ತಿ ಪುರಾಣ ಪ್ರವಚನ ಮುಕ್ತಾಯದ ಅಂಗವಾಗಿ ಏರ್ಪಡಿಸಿದ್ದ ಶ್ರೀದೇವಿಯ ಹಾಗೂ ನಾಡೋಜ ಡಾ.ಅನ್ನದಾನೇಶ್ವರ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧಾರ್ಮಿಕ ಸಭೆ ಉದ್ದೇಶಿಸಿ ಬುಧವಾರ ಮಾತನಾಡಿದರು.

    ನರಸಾಪುರದ ಶ್ರೀವಿರೇಶ್ವರ ದೇವರು ಮಾತನಾಡಿ, ಮನುಷ್ಯ ಸದಾ ಕಾಲ ಕಾಯಕದಲ್ಲಿ ನಿರತವಾಗಿರಬೇಕು. ಶರಣರ ಆದರ್ಶ ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮುರ್ಲಾಪುರ ಗ್ರಾಮ 132 ವರ್ಷಗಳಿಂದ ಶ್ರೀದೇವಿ ಪುರಾಣ ನಡೆಸಿಕೊಂಡು ಬರುತ್ತಿರುವುದು ಶ್ಲಾಘನಾರ್ಹ ಎಂದರು.

    ಬೆಳಗ್ಗೆ ಅನ್ನದಾನೇಶ್ವರ ಶ್ರೀಗಳಿಂದ ಷಟಸ್ಥಲ ಧ್ವಜಾರೋಹಣ, ಶ್ರೀಗಳ ಪಾದಪೂಜೆ ಕಾರ್ಯಕ್ರಮ ನಡೆಯಿತು. ನಂತರ ಹೂ ಹಾಗೂ ತಳಿರು ತೋರಣದಿಂದ ಸಿಂಗರಿಸಿದ್ದ ಅಡ್ಡಪಲ್ಲಕ್ಕಿಯಲ್ಲಿ ಶ್ರೀದೇವಿಯ ಉತ್ಸವ ಮೂರ್ತಿ ಕುಳ್ಳಿರಿಸಿ ಮಹಿಳೆಯರ ಕಳಶ, ಕುಂಭ, ಡೊಳ್ಳು, ಭಜನೆ, ನಂದಿಕೋಲು ಮುಂತಾದ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿಬಂದ ಮೆರವಣಿಗೆ ಕೊನೆಗೆ ದೇವಸ್ಥಾನ ತಲುಪಿತು. ಮುಂಡರಗಿ ಶ್ರೀಗಳು ಭಾಗಿಯಾಗಿದ್ದರು.

    ಪ್ರಮುಖರಾದ ಉಮೇಶ ಹಿರೇಮಠ, ಸುರೇಶ ಚನ್ನಳ್ಳಿ, ಅಂದಾನಗೌಡ ಪೋಲಿಸ್ ಪಾಟೀಲ, ಬಸವರಾಜ ಹಾರೋಗೇರಿ, ಕೊಟ್ರೇಶ ಮೇಗಳಮನಿ, ಗವಿಸಿದ್ದಯ್ಯ, ದೇವಪ್ಪ ಮೇಗಳಮನಿ, ಶಿವರಡ್ಡಿ, ಅಂದಪ್ಪ ಮೇಗಳಮನಿ, ಉಮೇಶಗೌಡ ಹಾಗೂ ಗ್ರಾಮದ ಸದ್ಭಕ್ತರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts