More

    ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಒತ್ತು

    ಅಳವಂಡಿ: ಜೀವನದಲ್ಲಿ ಸಾಧನೆ ಮಾಡಲು ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ ಎಂದು ಹಟ್ಟಿ ಐಸಿರಿ ನಿಸ್ವಾರ್ಥ ಶಿಕ್ಷಣ ಸೇವಾ ಬಳಗದ ಸಂಚಾಲಕ ದ್ಯಾಮಣ್ಣ ಕರಿಗಾರ ಹೇಳಿದರು.

    ಸಾಧನೆಗೆ ಶಿಕ್ಷಣ ಪ್ರಮುಖ ಅಸ್ತ್ರ

    ಸಮೀಪದ ಹಟ್ಟಿ ಗ್ರಾಮದಲ್ಲಿ ಶ್ರೀದುರ್ಗಾಂಬೆ ಲಕ್ಕಾಂಬೆ ಜಾತ್ರೆಯ ಅಂಗವಾಗಿ ಹಟ್ಟಿ ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಐಸಿರಿ ನಿಸ್ವಾರ್ಥ ಶಿಕ್ಷಣ ಸೇವಾ ಬಳಗ ಹಾಗೂ ವಿವಿಧ ಸಂಘಟನೆ ಹಮ್ಮಿಕೊಂಡಿದ್ದ ಪುಸ್ತಕ ಜೋಳಿಗೆ, ಅಕ್ಷರ ಅಭಿಯಾನ, ಸ್ವಚ್ಛತೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಕಲಿಕೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಇದನ್ನು ಹೋಗಲಾಡಿಸಲು ದಾನಿಗಳಿಂದ ಸೌಲಭ್ಯ ಒದಗಿಸಲು ಶ್ರಮಿಸಲಾಗುವುದು ಎಂದು ಹೇಳಿದರು.

    ಇದನ್ನೂ ಓದಿ: ಆರ್‌ಸಿಬಿಗೆ ಹಾಂಗ್ಯೋ ಐಸ್‌ಕ್ರೀಮ್ ಪಾಲುದಾರ

    ಮಕ್ಕಳನ್ನು ಸ್ಪರ್ದಾತ್ಮಕ ಪರೀಕ್ಷೆ ಎದುರಿಸಲು ಐಸಿರಿ ಸಂಸ್ಥೆಯಿಂದ ಪುಸ್ತಕ ಕುಟೀರ (ಗ್ರಂಥಾಲಯ) ಸ್ಥಾಪನೆ, ಪರೀಕ್ಷೆ ಎದುರಿಸಲು ಪ್ರೋತ್ಸಾಹ, ಕನ್ನಡ ಶಾಲೆಗಳ ಅಭಿವೃದ್ದಿ, ಬಡ ಹೆಣ್ಣು ಮಕ್ಕಳ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ, ಉಚಿತ ಟ್ಯೂಷನ್, ಆರ್ಥಿಕ ಸಹಾಯ ಮಾಡಲಾಗುತ್ತದೆ ಎಂದರು.
    ಪ್ರಮುಖರಾದ ಭರಮಪ್ಪ ನಗರ, ತೋಟಪ್ಪ ಶಿಂಟ್ರ, ಹೊನ್ನಪ್ಪಗೌಡ, ಗುಡದಪ್ಪ, ಶೇಖಪ್ಪ ಮೈನಳ್ಳಿ, ಕರಿಯಪ್ಪ ಹಳ್ಳಿಕೇರಿ, ರಾಮಪ್ಪ ಕರಿಗಾರ, ಭರಮಗೌಡ ಗೌಡ್ರ, ಮುದಕಪ್ಪ ಪೂಜಾರ, ಮುಖ್ಯ ಶಿಕ್ಷಕರಾದ ವೀರಣ್ಣ ಮಟ್ಟಿ, ಹನುಮಂತಪ್ಪ ಗುಡಿ ಇತರರಿದ್ದರು.

    ಜಾತ್ರೆ ಅಂಗವಾಗಿ ಜ.30 ಶ್ರೀದುರ್ಗಾಂಬೆ ಲಕ್ಕಾಂಬೆ ದೇವಸ್ಥಾನದ ಆವರಣದಲ್ಲಿ ಬೀರಲಿಂಗೇಶ್ವರ ಗ್ರಾ, ಶಿಕ್ಷಣ ಸೇವಾ ಸಂಸ್ಥೆ ಕೊಪ್ಪಳ ಹಾಗೂ ವಿವಿಧ ಸಂಘಟನೆ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಶಾಲಾ ವಿದ್ಯಾರ್ಥಿನಿಯರಿಗೆ ಚುಕ್ಕಿ ರಂಗೋಲಿ ಸ್ಪರ್ಧೆ, ಹಟ್ಟಿ ಐಸಿರಿ ದಾನಿಗಳಿಂದ ಗ್ರಂಥಾಲಯ ಉದ್ಘಾಟನೆ, ಸಾಧಕರಿಗೆ ಸನ್ಮಾನ ನಡೆಯಲಿದೆ. ಜಾನಪದ ಕಲಾವಿದರು, ಪ್ರಗತಿಪರ ರೈತರು, ಉತ್ತಮ ಕಾರ್ಮಿಕರು, ಕ್ರೀಡಾಪಟುಗಳು ಹಾಗೂ ಕುರಿಗಾಹಿಗಳು, ಸಾಮಾಜಿಕ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts