More

    ಆಳಂದ: ಜನರಿಗೆ ಮೂಲ ಸೌಕರ್ಯ ಒದಗಿಸಲು ಶ್ರಮ; ಬಿ.ಆರ್​.ಪಾಟೀಲ್​

    ಆಳಂದ: ಚಳವಳಿ ಹಾಗೂ ಹೋರಾಟಗಳಿಂದ ಸಾರ್ವಜನಿಕರ ಕೆಲ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯ. ಹೀಗಾಗಿಯೇ 1978ರಿಂದ ಪರಿವರ್ತನೆ ಪಾದಯಾತ್ರೆ ಮೂಲಕ ಕ್ಷೇತ್ರದ ಪ್ರತಿ ಹಳ್ಳಿ, ತಾಂಡಾಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸುತ್ತಿz್ದೆÃನೆ ಎಂದು ಶಾಸಕ ಬಿ.ಆರ್.ಪಾಟೀಲ್ ಹೇಳಿದರು.

    ಪಡಸಾವಳಗಿಯಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಕಲಬುರಗಿ, ಯಾದಗಿರಿ ಮತ್ತು ಬೀದರ್ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್ ನೇತೃತ್ವದಲ್ಲಿ ನಡೆದ ಪರಿವರ್ತನೆ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ, ಆರೋಗ್ಯ, ವಿದ್ಯುತ್, ರಸ್ತೆ, ಶೌಚಗೃಹ, ಚರಂಡಿ ವ್ಯವಸ್ಥೆ, ಶುದ್ಧ ಕುಡಿವ ನೀರು ಸೇರಿ ಜನತೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಶ್ರಮಿಸುತ್ತಿz್ದÉÃನೆ ಎಂದರು.

    ಇAದು ಉನ್ನತ ಶಿಕ್ಷಣದ ಜತೆಗೆ ಉದ್ಯೋಗ ಆಧಾರಿತ ತರಬೇತಿ ಅವಶ್ಯಕವಾಗಿವೆ. ಮಳೆಯಿಲ್ಲದೆ ತಾಲೂಕಿನಲ್ಲಿ ತೀವ್ರ ಬರ ಆವರಿಸದೆ. ನರೇಗಾದಲ್ಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವುದು ಹಾಗೂ ರೈತರಿಗೆ ಸಮರ್ಪಕ ಬೆಳೆ ಹಾನಿ ಪರಿಹಾರ ದೊರಕಿಸಿಕೊಡಲು ಸರ್ಕಾರದ ಮಟ್ಟದಲ್ಲಿ ಶ್ರಮಿಸುತ್ತಿz್ದÉÃನೆ. ಯುವ ಸಮೂಹ ದುಶ್ಚಟಗಳಿಂದ ದೂರವಿದ್ದು, ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ವ್ಯಕ್ತಿಗಳಾಗಿ ಬದುಕಬೇಕು ಎಂದು ಹೇಳಿದರು.

    ಪ್ರಗತಿಪರ ಚಿಂತಕ ಪ್ರೊ. ಆರ್.ಕೆ.ಹುಡುಗಿ ಮಾತನಾಡಿ, ಬಿ.ಆರ್.ಪಾಟೀಲ್ ಅಕ್ಷರಶಃ ಜನನಾಯಕ. ಅಧಿಕಾರದಲ್ಲಿ ಇರಲಿ, ಬಿಡಲಿ ಸಾರ್ವಜನಿಕರ ಕಷ್ಟಗಳಿಗೆ ಸದಾ ಧ್ವನಿಯಾಗುತ್ತಾರೆ. ಜನರ ಸಮಸ್ಯೆಗೆ ಸ್ಪಂದಿಸುವುದಕ್ಕಾಗಿಯೇ ಹಳ್ಳಿ-ಹಳ್ಳಿಗಳಲ್ಲಿ ಪಾದಯಾತ್ರೆ ನಡೆಸುವುದು ಮಾದರಿ ಕಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ನಡಿಗೆ ಹೀಗೆ ಮುಂದುವರಿಯಲಿ ಎಂದು ಆಶಯ ವ್ಯಕ್ತಪಡಿಸಿದರು.

    ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ್, ಜಿಪಂ ಮಾಜಿ ಸದಸ್ಯ ಸಿದ್ದರಾಮ ಪ್ಯಾಟಿ, ಮುಖಂಡರಾದ ಸಲಾಂ ಸಗರಿ, ಶಿವಲಿಂಗಪ್ಪ ಚಾರೆ ಮಾತನಾಡಿದರು. ಚಿನ್ಮಯಗಿರಿಯ ಶ್ರೀ ವೀರಮಹಾಂತ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಮಲ್ಲಿನಾಥ ಪಾಟೀಲ್, ಶಂಕರರಾವ ದೇಶಮುಖ, ಅಶೋಕ ಸಾವಳೇಶ್ವರ, ಈರಣ್ಣ ಝಳಕಿ, ಗುರುಲಿಂಗಜAಗಮ ಪಾಟೀಲ್, ವೈಜನಾಥ ಪಾಟೀಲ್, ಶಿವಕಿರಣ ಪಾಟೀಲ್, ವೀರಣ್ಣ ಹೊನ್ನಶೆಟ್ಟಿ, ಅನಂತರಾಜ ಸಾಹು, ಶಿವರಾಜ ಪಾಟೀಲ್, ಬಾಬುಗೌಡ ಪಾಟೀಲ್, ಗುರುಶಾಂತ ಪಾಟೀಲ್, ರಾಜಶೇಖರ ಪಾಟೀಲ್, ಶರಣಗೌಡ ಪಾಟೀಲ್, ಮೋಹನಗೌಡ ಪಾಟೀಲ್, ದತ್ತರಾಜ ಗುತ್ತೇದಾರ್, ಶರಣಬಸಪ್ಪ ವಾಗೆ, ಪ್ರತಾಪ ಕುಲಕರ್ಣಿ, ಲಿಂಗರಾಜ ಪಾಟೀಲ್ ಇತರರಿದ್ದರು.

    ವಿಶ್ವರಂಗ ಕಲಾ ಬಳಗದ ವಿಶ್ವನಾಥ ಭಕರೆ ನಿರ್ದೇಶನದಲ್ಲಿ ಬೀದಿ ನಾಟಕ ಪ್ರದರ್ಶನವಾಯಿತು. ಮಲ್ಲಿನಾಥ ಬಿರಾದಾರ ಸ್ವಾಗತಿಸಿದರು. ಭೋಜರಾಜ ನಿಂಬರ್ಗಿ ನಿರೂಪಣೆ ಮಾಡಿದರು. ವಿದ್ಯಾಧರ ಶೇರಿಕಾರ ವಂದಿಸಿದರು. ಪಾದಯಾತ್ರೆ ಸಂಚರಿಸಿದ ಗ್ರಾಮ, ತಾಂಡಾಗಳ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts