More

    ಕರೊನಾ ಸೇನಾನಿಗಳ ಕಾರ್ಯ ಶ್ಲಾಘನೀಯ

    ಆಲಮೇಲ: ಕರೊನಾ ಮಹಾಮಾರಿ ಅಟ್ಟಹಾಸದಲ್ಲಿ ತಮ್ಮ ಜೀವನವೇ ಜನರ ಆರೋಗ್ಯಕ್ಕಾಗಿ ಮುಡಿಪಿಟ್ಟು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ ಎಂದು ಪಟ್ಟಣದ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದಪ್ಪ ಹಾವಳಗಿ ಹೇಳಿದರು.

    ಪಟ್ಟಣದ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಸಂಘದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕರೊನಾ ಸೇನಾನಿಗಳಿಗೆ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು.

    ಕಳೆದ ಎರಡು ವರ್ಷಗಳಿಂದ ಆಶಾ ಕಾರ್ಯಕರ್ತೆಯರು ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಸರ್ಕಾರಕ್ಕೆ ತುಂಬಾ ಸಹಾಯವಾಗಿದೆ. ಇವರ ವೃತ್ತಿ ಚಿಕ್ಕದಾಗಿದ್ದರೂ ಜನರ ಆರೋಗ್ಯ ಸೇವೆ ಮಾಡವಲ್ಲಿ ದೊಡ್ಡ ಪಾತ್ರ ಇವರದಾಗಿದೆ ಎಂದರಲ್ಲದೆ, ಇವರ ಸೇವೆ ಪರಿಗಣಿಸಿ ನಮ್ಮ ಸಹಕಾರಿ ಸಂಘದ ಸರ್ವ ಸದಸ್ಯರ ವತಿಯಿಂದ ಅವರಿಗೆ ಆಹಾರ ಕಿಟ್ ವಿತ್ತರಿಸುತ್ತಿದ್ದೇವೆ ಎಂದರು.
    ಆಲಮೇಲ ಪಟ್ಟಣದ ಅಂದಾಜು 20 ಜನ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಿಸಲಾಯಿತು.

    ಸಂಘದ ಉಪಾಧ್ಯಕ್ಷ ಚಿದಾನಂದ ಜುಗತಿ, ನಿರ್ದೇಶಕರಾದ ಸಿದ್ದರಾಮ ಕೊಳಾರಿ, ಮಹಿಬೂಬ ಮಸಳಿ, ಬಸವರಾಜ ಮಳ್ಳಿಗೇರಿ, ಅಬ್ದುಲ್‌ವಾಹಬ ಸುಂಬಡ, ಪಂಚಯ್ಯ ರಾಂಪೂರಮಠ, ಜೆಟ್ಟೆಪ್ಪ ಬೂರುಡ, ಸುರೇಶ ಅಝಲಪುರ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾಗಣ್ಣ ಗುರಕಾರ, ಸಿಬ್ಬಂದಿ ಎಸ್. ಬಿ. ಬಿರಾದಾರ, ಚನ್ನು ಗುರಕಾರ, ಕರೆಪ್ಪ ಕೋಳಿ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts