More

    ಫೆ.17ಕ್ಕೆ ಬಿಡುಗಡೆಯಾಗಲಿದೆ ಅಕ್ಷಿತ್​ – ಅದಿತಿ ಅಭಿನಯದ ‘ಖೆಯೊಸ್​’

    ಬೆಂಗಳೂರು: ಶಶಿಕುಮಾರ್​ ಅವರ ಮಗ ಅಕ್ಷಿತ್​ ಕಳೆದ ವರ್ಷವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆದರೆ, ಅದ್ಯಾಕೋ ನಿರೀಕ್ಷಿತ ಯಶಸ್ಸು ಪಡೆಯಲಿಲ್ಲ. ಅಂದುಕೊಂಡಂತೆ ಬಿಡುಗಡೆಯಾದ ಎರಡೂ ಚಿತ್ರಗಳೂ ಗೆಲ್ಲಲಿಲ್ಲ. ಈಗ ಅಕ್ಷಿತ್​ ಅಭಿನಯದ ಮೂರನೆಯ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದೇ ‘ಖೆಯೊಸ್​’.

    ಇದನ್ನೂ ಓದಿ: ನೋರಾಗೆ ಜಾಕ್​ಲೀನ್​ ಕಂಡರೆ ಹೊಟ್ಟೆಉರಿ … ಹೊಸ ರಹಸ್ಯ ಬಿಚ್ಚಿಟ್ಟ ಸುಕೇಶ್​ ಚಂದ್ರಶೇಖರ್​

    ‘ಖೆಯೊಸ್​’ ಚಿತ್ರವನ್ನು ದಿ ಬ್ಲಾ ಪೆಬ್ಬಲ್​ ಎಂಟರ್​ಟೈನ್​ಮೆಂಟ್​ನಡಿ ಪಾರುಲ್​ ಅಗರವಾಲ್​ ಹಾಗೂ ಹೇಮಚಂದ್ರ ರೆಡ್ಡಿ ಜಂಟಿಯಾಗಿ ನಿರ್ಮಿಸಿದ್ದಾರೆ. ಈಗಾಗಲೇ ಪೋಸ್ಟ್​ ಪ್ರೊಡಕ್ಷನ್​ ಹಂತದಲ್ಲಿರುವ ಈ ಚಿತ್ರವು ಫೆ.17ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

    ವಿಶೇಷವೆಂದರೆ, ಈ ಚಿತ್ರದಲ್ಲಿ ಅಕ್ಷಿತ್​ಗೆ ನಾಯಕಿಯಾಗಿ ನಟಿಸಿದ್ದಾರೆ. ಇನ್ನೂ ಒಂದು ವಿಶೇಷವೆಂದರೆ, ಈ ಚಿತ್ರದಲ್ಲಿ ಶಶಿಕುಮಾರ್​ ಸಹ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ತಂದೆ-ಮಗ ಜತೆಯಾಗಿ ನಟಿಸಿರುವ ಮೊದಲ ಚಿತ್ರ ಇದಾಗಿದೆ. ಜತೆಗೆ ಆರ್ ಕೆ ಚಂದನ್, ಸಿದ್ದು ಮೂಲಿಮನಿ ಮುಂತಾದವರು ನಟಿಸಿದ್ದಾರೆ.

    ಇದನ್ನೂ ಓದಿ: ನಿಮಗೆ ಇಲ್ಲಿ ಸಿನಿಮಾ ಮಾಡೋ ಯೋಚನೆ ಇದ್ರೆ ಹೇಳಿ, ಮಾತಾಡೋಣ: ರಾಜಮೌಳಿಗೆ ಕ್ಯಾಮರಾನ್​ ಆಫರ್​

    ಮೆಡಿಕಲ್ ಕಾಲೇಜಿನಲ್ಲಿ ನಡೆಯುವ ಕಥೆ ಇದಾಗಿದ್ದು, ಆಕ್ಷನ್, ಸಸ್ಪೆನ್ಸ್, ಥ್ರಿಲ್​ ಜತೆಗೆ ಮರ್ಡರ್​ ಮಿಸ್ಟ್ರಿ ಸಹ ಇದ್ದು, ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ ಡಾ.ಜಿ.ವಿ. ಪ್ರಸಾದ್​. ಈ ಚಿತ್ರಕ್ಕೆ ವಿಜಯ್​ ಹರಿತ್ಸ ಅವರ ಸಂಗಿತವಿದ್ದು, ದಿಲೀಪ್ ಕುಮಾರ್ ಮತ್ತು ಸಂದೀಪ್ ವಳ್ಳೂರಿ ಛಾಯಾಗ್ರಹಣವಿದೆ.

    RRR ಚಿತ್ರವನ್ನು ಬಾಲಿವುಡ್​ ಸಿನಿಮಾ ಎಂದು ಕರೆದ ಹಾಲಿವುಡ್​ ನಟಿಗೆ ನೆಟ್ಟಿಗರಿಂದ ಖಡಕ್​ ರಿಪ್ಲೈ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts