More

    ಮತ್ತೆ ಹೆಚ್ಚಾಯ್ತು ಅಕ್ಷಯ್​ ಸಂಭಾವನೆ … ಈ ಬಾರಿ ಎಷ್ಟು ಹೇಳಿ?

    ಮುಂಬೈ: ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಹೀರೋ ಯಾರು? ನಿಸ್ಸಂಶಯವಾಗಿ ಅಕ್ಷಯ್​ ಕುಮಾರ್​. ಈಗಾಗಲೇ ಅಕ್ಷಯ್​ ಕುಮಾರ್​ ಚಿತ್ರವೊಂದಕ್ಕೆ 100 ಕೋಟಿಯವರೆಗೂ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಇತ್ತು. ಅದೀಗ ಇನ್ನಷ್ಟು ಹೆಚ್ಚಾಗಿದೆ.

    ಇದನ್ನೂ ಓದಿ: PHOTO GALLERY: ರಮೇಶ್​ ಅರವಿಂದ್​ ಮಗಳ ಮದುವೆ …

    ಅಕ್ಷಯ್​ ಕುಮಾರ್​ ಕೈಯಲ್ಲಿ ಅದೆಷ್ಟು ಚಿತ್ರಗಳಿವೆ ಎಂದರೆ, ಮುಂದಿನ ವರ್ಷದ ಪೂರಾ ಅವರು ಬುಕ್​ ಆಗಿದ್ದಾರೆ. ಈಗಾಗಲೇ ಅಕ್ಷಯ್​ ಅಭಿನಯದ ‘ಸೂರ್ಯವಂಶಿ’ ಮತ್ತು ‘ಬೆಲ್​ಬಾಟಮ್​’ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಇದಲ್ಲದೆ ‘ಅತರಂಗಿ ರೇ’, ‘ಪೃಥ್ವಿರಾಜ್​’, ‘ರಾಮ್​ಸೇತು’, ‘ಮಿಷನ್​ ಲಯನ್​’, ‘ಬಚ್ಚನ್​ ಪಾಂಡೆ’ ಮತ್ತು ‘ರಕ್ಷಾಬಂಧನ್​’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳೆಲ್ಲಾ 2021 ಮುಗಿಯುವ ಹೊತ್ತಿಗೆ ಮುಗಿಯಲಿವೆ.

    ಇನ್ನು 2022ರಲ್ಲಿ ಪ್ರಾರಂಭವಾಗುವ ಚಿತ್ರಗಳಿಗೂ ಈಗಲೇ ಕಥೆ ಕೇಳುತ್ತಿದ್ದಾರಂತೆ ಅಕ್ಷಯ್​. ಈಗಾಗಲೇ ಕೆಲವು ಕಥೆಗಳನ್ನು ಅವರು ಇಷ್ಟಪಟ್ಟಿದ್ದು, ಆ ಚಿತ್ರಗಳಿಗೆ 2022ರಲ್ಲಿ ಡೇಟ್ಸ್​ ಕೊಟ್ಟಿದ್ದಾರೆ. ಇನ್ನು ಪಟ್ಟಿಯಲ್ಲಿರುವ ಒಂದಿಷ್ಟು ಚಿತ್ರಗಳು ಬಿಡುಗಡೆಯಾದ ಮೇಲೆ, ಒಂದೊಂದೇ ಚಿತ್ರದ ಬಗ್ಗೆ ಅವರು ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ.

    2021ರಲ್ಲಿ ಚಿತ್ರೀಕರಣ ಮತ್ತು ಬಿಡುಗಡೆಯಾಗಲಿರುವ ಚಿತ್ರಗಳಿಗೆ ನೂರು ಕೋಟಿ ಸಂಭಾವನೆ ಪಡೆಯುತ್ತಿದ್ದ ಅಕ್ಷಯ್​, 2022ರಲ್ಲಿ ಒಪ್ಪಿಕೊಳ್ಳಲಿರುವ ಚಿತ್ರಗಳಿಗೆ ಸಂಭಾವನೆ ಹೆಚ್ಚಿಸಿದ್ದಾರಂತೆ. ಮುಂದಿನ ದಿನಗಳಲ್ಲಿ ಅವರು ಒಂದು ಚಿತ್ರಕ್ಕೆ 135 ಕೋಟಿ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ರಾಯರ ಸನ್ನಿಧಿಯಲ್ಲಿ ಸೆಟ್ಟೇರಿತು ಜಗ್ಗೇಶ್​- ಗುರುಪ್ರಸಾದ್​ ಜೋಡಿಯ​ ‘ರಂಗನಾಯಕ’

    ಒಂದು ಚಿತ್ರಕ್ಕೆ ಅಷ್ಟು ಪಡೆದರೆ ವರ್ಕೌಟ್​ ಆಗುತ್ತದಾ? ಎಂಬ ಪ್ರಶ್ನೆ ಬರಬಹುದು. ಅದನ್ನೆಲ್ಲಾ ಲೆಕ್ಕ ಹಾಕಿಯೇ ಅವರು ಅಷ್ಟೊಂದು ಸಂಭಾವನೆ ಕೇಳುತ್ತಿದ್ದಾರಂತೆ. ಅಷ್ಟೇ ಅಲ್ಲ, ಅಕ್ಷಯ್​ ಕೇಳಿದರೆ ಕೊಡುವುದಕ್ಕೆ ಅಡ್ಡಿಯಿಲ್ಲ ಎಂದು ನಿರ್ಮಾಪಕರು ಸಹ ಕೊಡುವುದಕ್ಕೆ ಮುಂದಾಗಿದ್ದಾರಂತೆ.

    ಎ.ಆರ್​. ರೆಹಮಾನ್​ ತಾಯಿ ಕರೀಮಾ ಬೇಗಮ್​ ಇನ್ನಿಲ್ಲ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts