More

    ಅಕ್ಕಮಹಾದೇವಿ ಮಹಿಳೆಯರ ಅಸ್ಮಿತೆಯ ಪ್ರತೀಕ

    ರಾಯಚೂರು: ಶರಣೆ ಅಕ್ಕಮಹಾದೇವಿ ಮಹಿಳೆಯರ ಅಸ್ಮಿತೆ ಮತ್ತು ಸ್ವಾಭಿಮಾನದ ಪ್ರತೀಕವಾಗಿದ್ದು, ಅವರ ಜೀವನ, ಆಧ್ಯಾತ್ಮಿಕತೆ, ಧೈರ್ಯ, ಕೆಚ್ಚು ಇಂದಿಗೂ ಸಹ ಸಮಾಜದ ಪ್ರತಿಯೊಬ್ಬ ಮಹಿಳೆಯರಿಗೆ ಆದರ್ಶಪ್ರಾಯವಾಗಿದೆ ಎಂದು ಹಟ್ಟಿಯ ಕೇಂದ್ರೀಯ ವಿದ್ಯಾಲಯದ ಶಿಕ್ಷಕಿ ಶಿಲ್ಪಾ ನಾಗರಾಳ ಹೇಳಿದರು.
    ಸ್ಥಳೀಯ ಬಸವ ಕೇಂದ್ರದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಅಕ್ಕಮಹಾದೇವಿ ಜಯಂತೋತ್ಸವ ಹಾಗೂ ಚಿಂತನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸುಮಾರು 900 ವರ್ಷಗಳ ಹಿಂದೆ ಆಗಿಹೋದ ಅಕ್ಕಮಹಾದೇವಿಯ ಜೀವನದಿಂದ ಪ್ರಭಾವಿತರಾಗಿ ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು ಎಂದರು.
    ಅಕ್ಕಮಹಾದೇವಿಯ ವಚನಗಳನ್ನು ಅರ್ಥೈಸಿಕೊಂಡು ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಅಳವಡಿಸಿಕೊಳ್ಳಬೇಕು. ಹೆಣ್ಣಿಗೂ ಪ್ರತ್ಯೇಕ ಸ್ಥಾನ, ಆತ್ಮಸಾಕ್ಷಿ, ಚಿಂತನೆ ಮಾಡುವ ಅಕಾರ ಇದೆ. ಅಕ್ಕಮಹಾದೇವಿಯಿಂದಾಗಿ ಹೆಣ್ಣನ್ನು ನೋಡುವ ದೃಷ್ಠಿಕೋನ ಬದಲಾಗಿದೆ ಎಂದು ತಿಳಿಸಿದರು.
    ಈ ಸಂದರ್ಭದಲ್ಲಿ ಬಸವ ಕೇಂದ್ರ ಮತ್ತು ಅಕ್ಕನ ಬಳಗದಿಂದ ಸಾಮಾಜಿಕ, ಆರೋಗ್ಯ ಮತ್ತು ಜಾನಪದ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಬುರ‌್ರಕಥಾ ಕಮಲಮ್ಮಗೆ ನಿಸ್ವಾರ್ಥ ಸೇವಾ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
    ಕಾರ್ಯಕ್ರಮದಲ್ಲಿ ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೊಳೂರು, ಪದಾಕಾರಿಗಳಾದ ಪೂರ್ಣಿಮಾ ಕಿರಣ್, ಪಾರ್ವತಿ ಪಾಟೀಲ್, ಸುಮಂಗಲ ಸಕ್ರಿ, ಸುಮಂಗಲ ಹಿರೇಮಠ, ಮುಕ್ತಾಯಕ್ಕ ನರಕಲದನ್ನಿ, ಅಶ್ವಿನಿ ಮಾಟೂರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts