More

    ಹವ್ಯಕ ಸಮಾಜ ಆದರ್ಶಗಳನ್ನು ನೆಚ್ಚಿಕೊಂಡಿದೆ: ಡಾ.ಗಿರಿಧರ ಕಜೆ ಅಭಿಮತ

    ಬೆಂಗಳೂರು: ಹವ್ಯಕ ಸಮಾಜ ಆದರ್ಶಗಳನ್ನು ನೆಚ್ಚಿಕೊಂಡಿದ್ದು, ನಾಡನ್ನು ಉತ್ತಮ ಪಥದಲ್ಲಿ ಕೊಂಡೊಯ್ಯಲು ತನ್ನನ್ನು ಸಮರ್ಪಿಸಿಕೊಂಡಿದೆ ಎಂದು ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಹೇಳಿದ್ದಾರೆ.

    ಅಖಿಲ ಹವ್ಯಕ ಮಹಾಸಭಾ ಮಲ್ಲೇಶ್ವರದ ಹವ್ಯಕ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಂಸ್ಥಾಪನೋತ್ಸವ, ಹವ್ಯಕ ವಿಶೇಷ ಪ್ರಶಸ್ತಿ ಹಾಗೂ ಪಲ್ಲವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಹವ್ಯಕರು ಸುಶಿತರಾಗಿದ್ದು, ಸ್ವಾಭಿಮಾನಿಗಳಾಗಿದ್ದಾರೆ. ಹೀಗಾಗಿ ಹವ್ಯಕ ಮಹಾಸಭೆ ಸಮಗ್ರ ಸಮಾಜವನ್ನು ತಲುಪಲು ಸಾಧ್ಯವಾಗುತ್ತಿದೆ. ಇದು ತನ್ನತನದ ಬೇರಿನೊಂದಿಗೆ ನೆರಳು ಕೊಡಬೇಕಿದೆ. ಡಿ.27, 28, 29ರಂದು ಅರಮನೆ ಮೈದಾನದಲ್ಲಿ 3ನೇ ವಿಶ್ವ ಹವ್ಯಕ ಸಮ್ಮೇಳನ ಆಯೋಜಿಸಲಾಗುತ್ತಿದೆ. ಹವ್ಯಕರನ್ನು ಪರಿಚಯಿಸುತ್ತಾ, ಎಲ್ಲಾ ಸಮುದಾಯದವರನ್ನು ಒಂದುಗೂಡಿಸಿ ಸಮಾವೇಶ ಮಾಡಲಾಗುತ್ತದೆ ಎಂದು ತಿಳಿಸಿದರು.

    ಹಿರಿಯ ವಿದ್ವಾಂಸ ಡಾ.ಪಾದೇಕಲ್ಲು ವಿಷ್ಣು ಭಟ್​ ಮಾತನಾಡಿ, ಸಾಧನೆಯ ಜತೆಗೆ ನಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಜ್ಞಾನವನ್ನು ಹಂಚಬೇಕು. ಸನ್ಮಾನದಿಂದ ಸಾಧಕರ ಪರಿಚಯವಾಗುತ್ತದೆ, ಜತೆಗೆ ಅವರ ಕಾರ್ಯಗಳು ದಾಖಲಾಗುತ್ತವೆ ಎಂದು ಹೇಳಿದರು.

    ಸಿಐಡಿ ಎಸ್​ಪಿ ಕೆ. ರಾವೇಂದ್ರ ಹೆಗಡೆ ಮಾತನಾಡಿ, ಪ್ರಶಸ್ತಿ ಪುರಸ್ಕಾರದಿಂದ ಸಾಧಕರಿಗೆ ಗೌರವ ಲಭಿಸಿದರೆ, ಇತರರಿಗೆ ಪ್ರೇರಣೆಯಾಗುತ್ತದೆ. ಹವ್ಯಕ ಮಹಾಸಭೆ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಸಮಾಜದ ಉನ್ನತಿ ಇನ್ನಷ್ಟು ಹೆಚ್ಚಲಿ ಎಂದರು.

    ಪ್ರಶಸ್ತಿ ಪುರಸ್ಕೃತ ಪರಿಸರ ತಜ್ಞ ಶಿವಾನಂದ ಕಳವೆ ಮಾತನಾಡಿ, ಪರಿಸರದ ಸೂಕ್ಷ$್ಮತೆಗಳನ್ನು ಗಮನಿಸಿ, ಅಲ್ಲಿ ಕೃಷಿ ಚಟುವಟಿಕೆ ನಡೆಸಿದ ಹೆಮ್ಮೆ ಹವ್ಯಕ ಸಮಾಜಕ್ಕೆ ಸಲ್ಲುತ್ತದೆ. ನಮ್ಮ ಹಿರಿಯರು ಕಾಡು ಹಾಗೂ ಕಾಡಿನ ಉತ್ಪನ್ನಗಳ ಕುರಿತಾಗಿ ಆಂತರಿಕ ಜ್ಞಾನ ಹೊಂದಿದ್ದ ಕೃಷಿವಿಜ್ಞಾನಿಗಳು ಎಂದು ತಿಳಿಸಿದರು.

    ಹವ್ಯಕ ಸಮಾಜದ ಜನಸಂಖ್ಯೆ ದಿನದಿಂದ ದಿನಕ್ಕೆ ಣಿಸುತ್ತಿದ್ದು, ಹಳ್ಳಿ ಜನರ ಸಮಸ್ಯೆ ಹೆಚ್ಚುತ್ತಿದೆ. ಕಾಲ ಸರಿಯುತ್ತಿದ್ದಂತೆ ನಮ್ಮತನದಿಂದಲೂ ದೂರವಾಗುತ್ತಿದ್ದೇವೆ. ಹಳೆಯದನ್ನು ಉಳಿಸಿಕೊಂಡು, ಹೊಸತನವನ್ನು ಬಳಸಿಕೊಂಡು ಮುಂದುವರಿಯಬೇಕು.
    -ಎಚ್​.ಎಂ. ತಿಮ್ಮಪ್ಪ ಕಲಸಿ, ಹವ್ಯಕ ವಿಭೂಷಣ ಪ್ರಶಸ್ತಿ ಪುರಸ್ಕೃತ

    ಪ್ರಶಸ್ತಿ ಪುರಸ್ಕೃತರು 

    • ಹವ್ಯಕ ವಿಭೂಷಣ: ಎಚ್​.ಎಂ. ತಿಮ್ಮಪ್ಪ ಕಲಸಿ (ಸಾಹಿತ್ಯ)
    • ಹವ್ಯಕ ಭೂಷಣ: ಎಲ್​.ಗಣೇಶ್​ ಭಟ್​ (ಶಿಲ್ಪಶಾಸ್ತ್ರ), ಶಿವಾನಂದ ಕಳವೆ (ಪರಿಸರ), ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ (ಯೋಗ),
    • ಹವ್ಯಕಶ್ರೀ: ಗಿರಿಧರ್​ ದಿವಾನ್​ (ಛಾಯಾಗ್ರಹಣ, ಸಂಗೀತ ನಿರ್ದೇಶನ), ಗಣೇಶ್​ ದೇಸಾಯಿ (ಸಂಗೀತ), ಮಂಗಳ ಬಾಲಚಂದ್ರ (ಕಥಾಕೀರ್ತನ)
    • ಹವ್ಯಕ ಸೇವಾಶ್ರೀ: ಶ್ರೀಕಾಂತ ಹೆಗಡೆ ಅಂತ್ರವಳ್ಳಿ, (ಹವ್ಯಕ ಪತ್ರಿಕೆ ಮಾಜಿ ಸಂಪಾದಕ)
    • ಪಲ್ಲವ ಪ್ರಶಸ್ತಿ: ಅಕ್ಷಯ ಕೃಷ್ಣ ದಂಬೆಮೂಲೆ, ಡಾ.ಸಿರಿ ಪಾರ್ವತಿ ಬೀಡುಬೈಲು, ಎಂ.ಧನುಷ್​ ರಾಮ್​, ಸುಮಂತ್​ ಹೆಗಡೆ, ಬಿ.ಎಂ. ಗುರುದತ್​, ಅನಿಕೇತ್​ ಭಟ್​ ಅರ್ನಾಡಿ, ಎಂ.ರಜತ್​ ಹೆಗಡೆ, ಪವನ್​, ಕೆ.ಆರ್​. ಅಭಿಜಿತ್​, ಪ್ರಣವ್​ ಕಾಡೂರು, ಸಿಂಚನಾ ತಿಮ್ಮಣ್ಣ ಭಟ್​, ಜಿ.ಅನೀಶ್​.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts