More

    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

    ವಿಜಯಪುರ: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್/ ವಸತಿಶಾ ೆ/ಆಶ್ರಮಶಾಲೆ ಹೊರ ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
    ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎಐಯುಟಿಯುಸಿ) ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ ಮಾತನಾಡಿ, ಸಿಎಂ ಘೋಷಣೆ ಮಾಡಿದಂತೆ ಎಲ್ಲ ಹೊರ ಗುತ್ತಿಗೆ (ಮೆಟ್ರಿಕ್ ಪೂರ್ವ/ಮೆಟ್ರಿಕ್ ನಂತರ/ವಸತಿ ಶಾಲೆ/ ಆಶ್ರಮ ಶಾಲೆಗಳ ಕಾರ್ಮಿಕರನ್ನು ಸೇರಿದಂತೆ) ಕಾರ್ಮಿಕರಿಗೆ ಲಾಕ್‌ಡೌನ್ ಅವಧಿಯ ಸಂಪೂರ್ಣ ವೇತನ ಬಿಡುಗಡೆ ಮಾಡಬೇಕು. ಜೂನ್ ತಿಂಗಳಿನಿಂದ ಎಲ್ಲ ಹೊರಗುತ್ತಿಗೆ ಕಾರ್ಮಿಕರ ಮೂಲಕ ಹಾಸ್ಟೆಲ್‌ಗಳಲ್ಲಿ ಸ್ಯಾನಿಟೈಜೇಷನ್ ಕೆಲಸಕ್ಕೆ /ಇನ್ನಿತರ ಪೂರ್ವ ಸಿದ್ಧತಾ ಕೆಲಸಗಳನ್ನು ಪ್ರಾರಂಭಿಸಿ ಎಂದಿನಂತೆ ವೇತನ ನೀಡಬೇಕು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಬಾಕಿ ಇರುವ ಹಲವು ತಿಂಗಳ ವೇತನವನ್ನು ಕೂಡಲೇ ಪಾವತಿಸಬೇಕು. ಕ್ವಾರಂಟೈನ್ ಕೇಂದ್ರಗಳಾಗಿ ಪರಿವರ್ತಿತ ಹಾಸ್ಟೆಲ್ /ವಸತಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿಗೆ ವಿಶೇಷ ಭತ್ಯೆ ನೀಡಬೇಕು. ಹೊರಗುತ್ತಿಗೆ ಕಾರ್ಮಿಕರು ಮತ್ತು ಅವರ ಕುಟುಂಬದವರು ಕರೊನಾ ಕಾಯಿಲೆಯಿಂದ ಬಳಲಿದರೆ ಉಚಿತ ಚಿಕಿತ್ಸೆ ನೀಡಬೇಕು ಮತ್ತು ಆಶಾ/ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ ವಿಶೇಷ ಜೀವ ವಿಮೆ ಸೌಲಭ್ಯವನ್ನು ಇವರಿಗೂ ವಿಸ್ತರಿಸಬೇಕು. ನೇರ ನೇಮಕಾತಿಯಿಂದ ತೊಂದರೆಗೊಳಗಾದ ಗುತ್ತಿಗೆ ಕಾರ್ಮಿಕರನ್ನು ಸೇವಾ ಹಿರಿತನಕ್ಕನುಗುಣವಾಗಿ ಇತರೆ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಿಸಿಕೊಳ್ಳಬೇಕೆಂಬ ಇತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
    ಕಾರ್ಮಿಕ ಸಂಘದ ಅಧ್ಯಕ್ಷೆ ಕಾಶಿಬಾಯಿ ಜನಗೊಂಡ ಹಾಗೂ ಜಿಲ್ಲಾ ಕಾರ್ಯದರ್ಶಿ ಮಹಾದೇವಿ ಧರ್ಮಶೆಟ್ಟಿ ಮಾತನಾಡಿ, ಕಳೆದ ವರ್ಷ ಜೂನ್ ತಿಂಗಳಿಂದ ಹಾಸ್ಟೆಲ್ ಪ್ರಾರಂಭವಾಗುತ್ತಿದ್ದು ಈ ಬಾರಿ ಶಾಲೆ-ಕಾಲೇಜು ಪ್ರಾರಂಭ ಮಾಡದಿರುವುದರಿಂದ ಕಾರ್ಮಿಕರು ಇದನ್ನೆ ನಂಬಿಕೊಂಡಿರುವುದರಿಂದ ಸರ್ಕಾರ ಜೂನ್ ತಿಂಗಳಿಂದ ವೇತನ ಪಾವತಿಸುವುದರ ಜತೆಗೆ ಕರೊನಾ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಅಗತ್ಯ ಉಪಕರಣ ಒದಗಿಸಿ ಅವರ ಆರೋಗ್ಯ ಕಾಪಾಡಬೇಕು ಎಂದರು.
    ಪ್ರತಿಭಟನೆಯಲ್ಲಿ ಅಕಲಕಬಾನು ನಗಾರ್ಚಿ, ಸುಲೊಚನಾ ತಿವಾರಿ, ಬಾಳಾಬಾಯಿ ಹೂಗಾರ, ರಾಮು ರಾಠೋಡ, ಮಹಾನಂದ ವಾಲಿ, ನೀಲಮ್ಮ ಭಜಂತ್ರಿ ಸೇರಿದಂತೆ ವಿವಿಧ ವಸತಿ ಶಾಲೆ ಕಾರ್ಮಿಕರು ಭಾಗವಹಿಸಿದ್ದರು.

    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ
    ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts