More

    ವಿಮಾನ ಪ್ರಯಾಣ ಇನ್ನಷ್ಟು ದುಬಾರಿ

    ನವದೆಹಲಿ: ವಿಮಾನ ಹಾರಾಟಕ್ಕೆ ಬಳಸುವ ಏವಿಯೇಷನ್ ಟರ್ಬೆನ್ ಇಂಧನ (ಎಟಿಎಫ್ ) ಬೆಲೆಯು ಗುರುವಾರ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಶೇ.16ರಷ್ಟು ಹೆಚ್ಚಳವಾಗಿದೆ. ಇದರಿಂದ ವಿಮಾನ ಪ್ರಯಾಣ ದರ ದುಬಾರಿಯಾಗುವ ಸಾಧ್ಯತೆ ಇದೆ. ಇದು ಜೆಟ್ ಇಂಧನದ ಬೆಲೆಯಲ್ಲಿ ಇದುವರೆಗಿನ ಅತಿ ಏರಿಕೆಯಾಗಿದೆ.

    ಪೂರೈಕೆ ನಿರ್ಬಂಧಗಳಿಂದಾಗಿ ಅಂತಾರಾಷ್ಟ್ರೀಯ ತೈಲ ದರಗಳು ಹೆಚ್ಚಾಗುತ್ತಿರುವ ಸಮಯದಲ್ಲೇ ವಿಮಾನ ಇಂಧನ ದರವು ಹೆಚ್ಚಾಗಿದೆ. ಎಟಿಎಫ್ ಬೆಲೆಯು ನವದೆಹಲಿಯಲ್ಲಿ ಪ್ರತಿ ಕಿಲೋಲೀಟರ್​ಗೆ 19,757.13 ರೂ. ಹೆಚ್ಚಳವಾಗಿದೆ. ಮುಂಬೈನಲ್ಲಿ ಎಟಿಎಫ್ ದರ ಕಿಲೋ ಲೀಟರ್​ಗೆ 1,40,092.74ರಷ್ಟಿದೆ. ಎಟಿಎಫ್ ದರವು ರಾಜ್ಯದಿಂದ ರಾಜ್ಯಕ್ಕೆ ಸ್ಥಳೀಯ ತೆರಿಗೆ ಆಧಾರದ ಮೇಲೆ ಬದಲಾಗುತ್ತದೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆ ತಿಳಿಸಿದೆ.

    ಬೆಂಚ್​ವಾರ್ಕ್ ಅಂತಾರಾಷ್ಟ್ರೀಯ ದರಗಳ ಸರಾಸರಿಯನ್ನು ಆಧರಿಸಿ ಎಟಿಎಫ್ ಬೆಲೆಯನ್ನು ಪ್ರತಿತಿಂಗಳ 1 ಮತ್ತು 16ರಂದು ಪರಿಷ್ಕರಿಸಲಾಗುತ್ತದೆ. ಗುರುವಾರ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್ 119.16 ಡಾಲರ್ ದರದಲ್ಲಿ ವಹಿವಾಟು ನಡೆಸುತ್ತಿದೆ. ಇದು ಸುಮಾರು ಒಂದು ದಶಕದಲ್ಲೇ ಅತ್ಯಧಿಕವಾಗಿದೆ. ಬ್ರೆಂಟ್ ವಿಶ್ವದ ಅತ್ಯಂತ ಜನಪ್ರಿಯ ಕಚ್ಚಾ ತೈಲ ಮಾನದಂಡವಾಗಿದೆ.

    ನೋ ಪಾರ್ಕಿಂಗ್​ ಜಾಗದಲ್ಲಿ ವಾಹನ ನಿಲ್ಸಿದ್ದಾರ? ಹಾಗಾದ್ರೆ ಫೋಟೋ ಕಳ್ಸಿ ಬಹುಮಾನ ಗೆಲ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts