More

    ಮಂಗಳೂರು ವಿಮಾನ ನಿಲ್ದಾಣ ಚೇತರಿಕೆ: ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.60ರಷ್ಟು ಏರಿಕೆ

    ಮಂಗಳೂರು: ಎರಡು ತಿಂಗಳ ಹಿಂದೆ ದಿನಕ್ಕೆ ಒಂದೇ ವಿಮಾನ ಹಾರಾಟದಂತಹ ದಯನೀಯ ಸ್ಥಿತಿಗೆ ತಲುಪಿದ್ದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೀಗ ಮತ್ತೆ ಪ್ರಗತಿಯ ಹಾದಿಗೆ ಮರಳುತ್ತಿದೆ. ದೇಶೀಯ ವಿಮಾನಗಳಲ್ಲಿ ಆಗಮಿಸುವ ಹಾಗೂ ನಿರ್ಗಮಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ.

    ಆಗಸ್ಟ್ ಮೊದಲ ಪಾಕ್ಷಿಕ ಅವಧಿಯನ್ನು ಜುಲೈ ಹಾಗೂ ಜೂನ್‌ಗೆ ಹೋಲಿಸಿದರೆ ಉತ್ತಮ ಪ್ರಗತಿಯಾಗಿದೆ. ಜುಲೈ ಮೊದಲ 15 ದಿನಗಳ ಅವಧಿಗೆ ಹೋಲಿಸಿದರೆ ಆಗಸ್ಟ್ ತಿಂಗಳಲ್ಲಿ ಮಂಗಳೂರಿನಿಂದ ತೆರಳಿರುವ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.63ರಷ್ಟು ಏರಿಕೆ ದಾಖಲಾಗಿದೆ ಎಂದು ವಿಮಾನ ನಿಲ್ದಾಣದ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ. ಎಲ್ಲ ಕ್ಷೇತ್ರಗಳೂ ಕೋವಿಡ್ ಲಾಕ್‌ಡೌನ್‌ನಿಂದ ತೆರೆದುಕೊಳ್ಳುತ್ತಿದ್ದು, ಸಂಚಾರ ಸಂಖ್ಯೆಯಲ್ಲಿ ಏರಿಕೆಗೆ ಕಾರಣ.

    ಮಂಗಳೂರು ವಿಮಾನ ನಿಲ್ದಾಣ ಪ್ರಸ್ತುತ ರ‌್ಯಾಪಿಡ್ ಆರ್‌ಟಿ-ಪಿಸಿಆರ್ ಪರೀಕ್ಷೆ ಶುರು ಮಾಡಿದ್ದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬುಧವಾರದಿಂದ ಕಾರ್ಯಾರಂಭಿಸಿದೆ. ಕೆಲ ತಿಂಗಳಿಂದ ಮಂಗಳೂರು ವಿಮಾನ ನಿಲ್ದಾಣ ಹಲವು ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆ. ಆ ಮೂಲಕ ಪ್ರಯಾಣಿಕರ ಹಿತ ಕಾಪಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ. ಜೂನ್ ಮೊದಲ ವಾರದಲ್ಲಿ ಒಂದೆರಡು ದಿನಗಳ ಕಾಲ ಮಂಗಳೂರು ವಿಮಾನ ನಿಲ್ದಾಣದಿಂದ ಕೇವಲ ಒಂದು ವಿಮಾನ ಮಾತ್ರ ಹಾರಾಟ ನಡೆಸಿತ್ತು.

    ಬಂದುಹೋದ ಪ್ರಯಾಣಿಕರ ಲೆಕ್ಕ:
    ಅವಧಿ ನಿರ್ಗಮನ ಆಗಮನ

    ಆ.1ರಿಂದ 15 12,717 13,294
    ಜು.1ರಿಂದ 15 7,784 8,495
    ಜೂ.1ರಿಂದ 15 4,989 3,818

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts