More

    ಚೀನಾದಲ್ಲಿದ್ದ ಭಾರತೀಯರನ್ನು ವಿಶೇಷ ವಿಮಾನಗಳಲ್ಲಿ ಕರೆತಂದ ಏರ್​ ಇಂಡಿಯಾ ಸಿಬ್ಬಂದಿಗಳಿಗೆ ಮೋದಿಯಿಂದ ಅಭಿನಂದನಾ ಪತ್ರ

    ನವದೆಹಲಿ: ಕೊರೊನಾ ವೈರಸ್​ ದಾಳಿಗೆ ತುತ್ತಾಗಿರುವ ಚೀನಾದಿಂದ ಎರಡು ವಿಶೇಷ ವಿಮಾನಗಳಲ್ಲಿ ಭಾರತೀಯರನ್ನು ಕರೆತಂದ ಏರ್​ ಇಂಡಿಯಾ ಸಿಬ್ಬಂದಿಯ ಸ್ನೇಹ ಮಿಲನ ಕಾರ್ಯಕ್ರಮವು ಇಂದು ಸಂಪನ್ನಗೊಂಡಿದೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಾಗರಿಕ ವಿಮಾನಯಾನ ರಾಜ್ಯ ಸಚಿವ ಹರ್​ದೀಪ್ ಸಿಂಘ್ ಪುರಿ ಪ್ರಧಾನಿ ಮೋದಿಯವರಿಂದ ಸಹಿಯಾಗಿರುವ ವಿಶೇಷ ಅಭಿನಂದನಾ ಪತ್ರಗಳನ್ನು ಸಿಬ್ಬಂದಿಗಳಿಗೆ ಹಸ್ತಾಂತರಿಸಿದ್ದಾರೆ.

    ಜನವರಿ 31ರಂದು ಮೊದಲ ವಿಶೇಷ ವಿಮಾನವು ದೆಹಲಿಯಿಂದ ವುಹಾನ್​ಗೆ ತೆರಳಿದ್ದು 324 ಭಾರತೀಯರನ್ನು ಸ್ವದೇಶಕ್ಕೆ ಕರೆತಂದಿತ್ತು. ಫೆ.1ರಂದು ಎರಡನೇ ವಿಶೇಷ ವಿಮಾನ ತೆರಳಿದ್ದು 323 ಭಾರತೀಯರನ್ನು ವಾಪಾಸು ಕರೆತಂದಿತ್ತು. ಈ ಎರಡೂ ವಿಮಾನಗಳಲ್ಲಿ ಒಟ್ಟು 68 ಸಿಬ್ಬಂದಿಗಳು ಕಾರ್ಯ ನಿರ್ವಹಿಸಿದ್ದು ಅವರೆಲ್ಲರಿಗೂ ಪ್ರತ್ಯೇಕವಾಗಿ ಪ್ರಧಾನಿ ಮೋದಿಯವರ ಸಹಿಯಿರುವ ಅಭಿನಂದನಾ ಪತ್ರವನ್ನು ಹಸ್ತಾಂತರಿಸಲಾಗಿದೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಹರ್ದೀಪ್​ ಸಿಂಗ್​, “ಏರ್​ ಇಂಡಿಯಾವು ಭಾರತದ ಆಸ್ತಿಯಾಗಿದೆ. 48 ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳು ಮತ್ತು 82 ಪ್ರಾದೇಶಿಕ ವಿಮಾನ ನಿಲ್ದಾಣಗಳಿಗೆ ತೆರಳುವ ಈ ಏರ್​ಲೈನ್​ ತನ್ನ ಅದ್ಭುತ ಸಾಮರ್ಥ್ಯವನ್ನು ತೋರಿಸಿದೆ. ಚೀನಾದಿಂದ ಭಾರತೀಯರನ್ನು ವಾಪಾಸು ಕರೆ ತರುವಲ್ಲಿ ಏರ್​ ಇಂಡಿಯಾ ಮಾಡಿದ್ದು ಶ್ಲಾಘನೀಯ ಕೆಲಸ. ಈ ವಿಚಾರವಾಗಿ ನಾನು ತಂಡದ ನೇತೃತ್ವವನ್ನು ವಹಿಸಿಕೊಂಡಿದ್ದ ಕ್ಯಾಪ್ಟನ್​ ಅಮಿತಾಬ್​ ಸಿಂಗ್​ ಅವರಿಗೆ ಪ್ರಶಂಶಿಸುತ್ತೇನೆ,” ಎಂದು ಹೇಳಿದರು.

    ಈಗಾಗಲೇ ಎರಡು ವಿಮಾನಗಳಲ್ಲಿ ಚೀನಾದಲ್ಲಿದ್ದ 647 ಭಾರತೀಯರನ್ನು ಕರೆತರಲಾಗಿದ್ದು ಮುಂದಿನ ವಾರದಲ್ಲಿ ಇನ್ನೊಂದು ವಿಶೇಷ ವಿಮಾನದಲ್ಲಿ ಭಾರತೀಯರನ್ನು ಸ್ವದೇಶಕ್ಕೆ ಕರೆತರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts