More

    ಶಿವ ತತ್ವ ಪಠಿಸುವುದರಿಂದ ನೆಮ್ಮದಿ

    ಐಮಂಗಲ: ನಿತ್ಯ ಶಿವಾನುಭವ, ಶಿವ ತತ್ವ ಪಠಿಸುವುದರಿಂದ ಮನುಷ್ಯನ ದುಃಖ ದೂರಾಗಿ ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಪರಮೇಶ್ವರಪ್ಪ ಹೇಳಿದರು.

    ಶಿವರಾತ್ರಿಯ ಅಂಗವಾಗಿ ಹೋಬಳಿಯ ಕಲ್ಲಹಟ್ಟಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಲಿಂಗದ ಅಭಿಷೇಕ ಹಾಗೂ ಪ್ರೊ.ಜಿ.ಪರಮೇಶ್ವರಪ್ಪ ಅವರ ವದ್ದಿಕೆರೆ ಸಿದ್ದೇಶ ಚರಿತೆ ವಾಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮನುಷ್ಯ ಸ್ವಾರ್ಥ, ಮೋಸ, ವಂಚನೆ ಬಿಟ್ಟು ಶಿವ ಚಿಂತನೆ ರೂಢಿಸಿಕೊಳ್ಳಬೇಕು. ಇದರಿಂದ ಸದಾ ಸುಖಿಯಾಗಿರಬಹುದು. ಆದರೆ, ಆಡಂಬರಕ್ಕೆ ಮಾರುಹೋಗಿ ಆಂತರಿಕ ಸೌಂದರ್ಯ ದೂರ ಮಾಡಿಕೊಳ್ಳುತ್ತಿದ್ದೇವೆ ಎಂದು ಬೇಸರಿಸಿದರು.

    ಜಿಪಂ ಮಾಜಿ ಅಧ್ಯಕ್ಷ ಸಿ.ಮಹಾಲಿಂಗಪ್ಪ, ನಿವೃತ್ತ ಬಿಇಒ ತಿಮ್ಮಣ್ಣ, ಕಸವನಹಳ್ಳಿ ಶಿವಣ್ಣ, ನೆರೆನಹಾಳ್ ಶಿವಲಿಂಗಪ್ಪ, ಕಾಟಪ್ಪನಹಟ್ಟಿ ನಿಜಲಿಂಗಪ್ಪ, ಕೂಡಲಹಳ್ಳಿ ಜಗದೀಶ್, ಸಿ.ತಿಪ್ಪೇಸ್ವಾಮಿ, ಕೆ.ಟಿ.ಕೆಂಚಪ್ಪ, ಯಜಮಾನ ರಂಗಪ್ಪ, ನಾಗಲಿಂಗಪ್ಪ, ಪೂಜಾರ ತಿಮ್ಮಪ್ಪ, ತಾಪಂ ಮಾಜಿ ಅಧ್ಯಕ್ಷ ಆನಂದ್, ತಿಪ್ಪೀರಣ್ಣ, ಪಾತಲಿಂಗಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts