More

    ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಗೊಂಡ ಅಹಮದಾಬಾದ್ ತಂಡದ ಹೆಸರು ಅನಾವರಣ

    ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಅಹಮದಾಬಾದ್ ನಗರದ ತಂಡಕ್ಕೆ ‘ಗುಜರಾತ್ ಟೈಟಾನ್ಸ್’ ಎಂದು ಬುಧವಾರ ಅಧಿಕೃತವಾಗಿ ಹೆಸರಿಡಲಾಗಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸಲಿರುವ ಗುಜರಾತ್ ತಂಡಕ್ಕೆ, 15ನೇ ಆವೃತ್ತಿಯ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಗೆ ಕೇವಲ 3 ದಿನ ಬಾಕಿ ಇರುವಾಗ ಹೆಸರು ಅಂತಿಮಗೊಳಿಸಲಾಗಿದೆ. ಈ ಮುನ್ನ ತಂಡಕ್ಕೆ ಅಹಮದಾಬಾದ್ ಟೈಟಾನ್ಸ್ ಎಂದು ನಾಮಕರಣ ಮಾಡಲಾಗಿದೆ ಎಂದು ವರದಿಯಾಗಿತ್ತು.

    ಸಿವಿಸಿ ಕಂಪನಿ ಕಳೆದ ವರ್ಷ ಬರೋಬ್ಬರಿ 5,625 ಕೋಟಿ ರೂ. ಮೊತ್ತಕ್ಕೆ ಅಹಮದಾಬಾದ್ ತಂಡವನ್ನು ಬಿಸಿಸಿಐನಿಂದ ಖರೀದಿಸಿತ್ತು. ಬಳಿಕ ಹರಾಜಿಗೆ ಮುನ್ನವೇ ಡ್ರ್‌ಟಾನಲ್ಲಿ ಮೂವರು ಆಟಗಾರರಾದ ಹಾರ್ದಿಕ್ ಪಾಂಡ್ಯ (₹15 ಕೋಟಿ), ರಶೀದ್ ಖಾನ್ (₹15 ಕೋಟಿ) ಮತ್ತು ಶುಭಮಾನ್ ಗಿಲ್ (₹8 ಕೋಟಿ) ಅವರನ್ನು ಸೇರ್ಪಡೆಗೊಳಿಸಿತ್ತು.

    ‘ಹಲವಾರು ಅಂತಾರಾಷ್ಟ್ರೀಯ ಕ್ರಿಕೆಟ್ ದಿಗ್ಗಜರ ಕೊಡುಗೆ ನೀಡಿರುವ ರಾಜ್ಯದ ಶ್ರೀಮಂತ ಕ್ರಿಕೆಟ್ ಪರಂಪರೆಯ ಗೌರವಾರ್ಥ ಗುಜರಾತ್ ಟೈಟಾನ್ಸ್ ಎಂದು ಹೆಸರಿಡಲಾಗಿದೆ. ನಾವೂ ಅದೇ ಪರಂಪರೆಯನ್ನು ಮುಂದುವರಿಸಲಿದ್ದೇವೆ ಮತ್ತು ಬಲಿಷ್ಠ ತಂಡವನ್ನು ಕಟ್ಟುವೆವು’ ಎಂದು ಫ್ರಾಂಚೈಸಿ ತಿಳಿಸಿದೆ.

    ಗುಜರಾತ್​ ಟೈಟಾನ್ಸ್‌ಗೆ ಈಗಾಗಲೆ ಮಾಜಿ ವೇಗಿ ಆಶಿಶ್ ನೆಹ್ರಾ ಮುಖ್ಯ ಕೋಚ್ ಮತ್ತು ಟೀಮ್ ಇಂಡಿಯಾದ ಮಾಜಿ ಕೋಚ್ ಗ್ಯಾರಿ ಕರ್ಸ್ಟನ್ ಮೆಂಟರ್ ಆಗಿ ನೇಮಕಗೊಂಡಿದ್ದಾರೆ. ಹರಾಜಿನಲ್ಲಿ ಇತರ ಆಟಗಾರರನ್ನು ಖರೀದಿಸಲು ಅಹಮದಾಬಾದ್ ಫ್ರಾಂಚೈಸಿ 52 ಕೋಟಿ ರೂ. ಬಜೆಟ್ ಉಳಿಸಿಕೊಂಡಿದೆ.

    ಕಿರಿಯರ ವಿಶ್ವಕಪ್ ವಿಜೇತ ತಂಡದ 8 ಆಟಗಾರರು ಐಪಿಎಲ್ ಹರಾಜಿಗೆ ಅರ್ಹರಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts