More

    ಕಪ್ಪು ಪಟ್ಟಿ ಧರಿಸಿ ಹೋರಾಟ: ಮಹಾಂತೇಶ ಗಾಣಿಗ

    ರಾಯಚೂರು: ಕೃಷಿ ತಾಂತ್ರಿಕ ನಿರ್ದೇಶನಾಲಯ ಸ್ಥಾಪನೆ ಹಾಗೂ ನೇಮಕಾತಿಯಲ್ಲಿ ಶೇ.15 ಮೀಸಲಾತಿ ನೀಡಲು ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಹೋರಾಟವನ್ನು ಬದಲಾವಣೆ ಮಾಡಿಕೊಂಡು ಕಪ್ಪು ಪಟ್ಟಿ ಧರಿಸಿ ತರಗತಿಗೆ ಹಾಜರಾಗಲು ನಿರ್ಧರಿಸಲಾಗಿದೆ ಎಂದು ಕೃಷಿ ತಾಂತ್ರಿಕ ನಿರ್ದೇಶನಾಲಯ ಸ್ಥಾಪನೆ ಹೋರಾಟ ಸಮಿತಿ ಸಂಚಾಲಕ ಮಹಾಂತೇಶ ಗಾಣಿಗ ಹೇಳಿದರು.


    ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಇತ್ತೀಚಿಗೆ ವಿಧಾನಸಭೆಯಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್ ಧ್ವನಿಯೆತ್ತಿದ್ದರಿಂದ ಕೃಷಿ ಸಚಿವರು ತಾಂತ್ರಿಕ ಸಮಿತಿ ರಚಿಸುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭರವಸೆ ನಂಬಿ ಹೋರಾಟ ಕೈಬಿಟ್ಟು, ನಿರ್ದೇಶನಾಲಯ ಸ್ಥಾಪನೆ ಮಾಡುವವರೆಗೆ ಕೈಗೆ ಕಪ್ಪುಪಟ್ಟಿ ಕಟ್ಟಿಕೊಂಡು ಕಾಲೇಜಿಗೆ ಹಾಜರಾಗಲು ತೀರ್ಮಾನ ಕೈಗೊಳ್ಳಲಾಗಿದೆ. ತ್ವರಿತವಾಗಿ ಸಮಿತಿ ರಚಿಸಿ ತಾಂತ್ರಿಕ ನಿರ್ದೇಶನಾಲಯ ಸ್ಥಾಪಿಸಬೇಕು. ಬೇರೆಬೇರೆ ರಾಜ್ಯಗಳಲ್ಲಿ ಕೃಷಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಶೇ.15 ಮೀಸಲು ಇದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲೂ ನೇಮಕಾತಿಯಲ್ಲಿ ಅವಕಾಶ ನೀಡಬೇಕು. ಈ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ಶೀಘ್ರದಲ್ಲಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


    ಹೋರಾಟಕ್ಕೆ ಶಾಸಕರಾದ ಬಸನಗೌಡ ದದ್ದಲ್, ವೆಂಕಟರಾವ್ ನಾಡಗೌಡ, ರಾಜಾ ವೆಂಕಟಪ್ಪ ನಾಯಕ, ಹೋರಾಟಗಾರ ಡಾ.ರಜಾಕ್ ಉಸ್ತಾದ್, ಟಿ.ನರಸಿಪುರ ಶಾಸಕ ಅಶ್ವಿನ್ ಕುಮಾರ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಪುರ ಸೇರಿ ಕೃಷಿ ವಿದ್ಯಾಲಯದ ಕುಲಪತಿಗಳು, ಕುಲಸಚಿವರು, ಡೀನ್ ಸೇರಿ ಅನೇಕರು ಸಹಕರಿಸಿದ್ದಾರೆ. ಅವರಿಗೆ ಋಣಿಯಾಗಿರುತ್ತೇವೆ ಎಂದರು. ವಿದ್ಯಾರ್ಥಿಗಳಾದ ಪೂಜಾ, ಸತೀಶ, ನವೀನ, ಮಲ್ಲೇಶ, ರಮೇಶ, ಅನುಷಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts