More

    ಕೃಷಿ ಪ್ರಧಾನ ದೇಶದಲ್ಲಿ ಪಶುಸಂಗೋಪನೆ ರೈತನ ಬೆನ್ನೆಲುಬು

    ಗೋಕಾಕ: ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಹಸುಗಳು ರೈತನ ಕುಟುಂಬದ ಬೆನ್ನೆಲುಬು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

    ನಗರದ ಗೃಹ ಕಚೇರಿ ಆವರಣದಲ್ಲಿ ಪಶು ಸಖಿಯರಿಗೆ ಮಂಗಳವಾರ ಪ್ರಥಮ ಚಿಕಿತ್ಸಾ ಕಿಟ್ ವಿತರಣೆ ಹಾಗೂ ಜಾನುವಾರುಗಳಿಗೆ ಕಾಲು ಬಾಯಿ ರೋಗ ಲಸಿಕೆ ವಿತರಣೆ ಅಭಿಯಾನಕ್ಕೆ ಹಸುವಿಗೆ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಕೃಷಿಯ ಬೆನ್ನೆಲುಬು ಪಶುಸಂಗೋಪನೆ. ಪಶು ಸಂಪತ್ತಿಗೆ ಪ್ರಾಚೀನ ಕಾಲದಿಂದಲೂ ಮಹತ್ವದ ಸ್ಥಾನ ದೊರೆತಿದೆ. ಪಶುಸಂಗೋಪನೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ, ಲಸಿಕೆ ನೀಡಿ ಅವುಗಳ ರಕ್ಷಣೆ ಮಾಡಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಕರೆ ನೀಡಿದರು.

    ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು. ಇಲಾಖೆ ಸಹಾಯಕ ನಿರ್ದೇಶಕ ಡಾ.ಮೋಹನ ಕಮತ, ಮಾಜಿ ಶಾಸಕ ಎಂ.ಎಲ್.ಮುತ್ತೆನ್ನವರ, ಶಾಸಕರ ಆಪ್ತ ಸಹಾಯಕ ಭೀಮಗೌಡ ಪೊಲೀಸಗೌಡರ, ಸುರೇಶ ಸನದಿ, ನಗರಸಭೆ ಸದಸ್ಯರಾದ ಅಬ್ಬಾಸ್ ದೇಸಾಯಿ, ಜಯಾನಂದ ಹುಣಚ್ಯಾಳಿ, ಬಸವರಾಜ ಆರೆನ್ನವರ, ಪ್ರಕಾಶ ಮುರಾರಿ, ವಿಜಯ ಜತ್ತಿ ಇತರರು ಇದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts