More

    ಕೃಷಿ ಆದಾಯದಲ್ಲಿ ಶೇ.30ರಷ್ಟು ಹೈನುಗಾರಿಕೆ ಪಾಲು

    ಚಿತ್ರದುರ್ಗ: ಕೃಷಿಯೊಂದಿಗೆ ಹೈನುಗಾರಿಕೆ ಕೈಗೊಂಡರೆ ರೈತರ ಆದಾಯ ವೃದ್ಧಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್.ದಿವಾಕರ್ ಹೇಳಿದರು.

    ಸಮಗ್ರ ಮಾದರಿ ಸಮೀಕ್ಷೆ ಯೋಜನೆಯ ಇ-ಲಿಸ್ ತಂತ್ರಾಂಶ ಮತ್ತು ಜಾನುವಾರುಗಳ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಕುರಿತು ಜಿಲ್ಲಾ ಕ್ರೀಡಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ರೈತರ ಆದಾಯದಲ್ಲಿ ಕೃಷಿ ಜತೆ ಹೈನುಗಾರಿಕೆಯ ಪಾಲು ಶೇ.30 ರಷ್ಟಿದೆ. ತೋಟಗಾರಿಕೆ, ಮೀನು ಸಾಕಣೆ ಸೇರಿ ಇತರೆ ಪಶು ಸಂಗೋಪನೆಗಳಿಂದ ಬರುವ ಹಣದಿಂದ ಜಿಡಿಪಿ ವೃದ್ಧಿಸುತ್ತದೆ ಎಂದು ತಿಳಿಸಿದರು.

    2030ಕ್ಕೆ ರೇಬಿಸ್ ಮುಕ್ತ ರಾಜ್ಯ:

    ಜಿಲ್ಲೆಯ 28 ಸಾವಿರ ನಾಯಿಗಳಿಗೆ ರೇಬಿಸ್ ಲಸಿಕೆ ನೀಡಲಾಗಿದೆ. 2030ರ ವೇಳೆಗೆ ಕರ್ನಾಟಕ ರೇಬಿಸ್ ಮುಕ್ತ ಆಗಲಿದೆ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವೆಯ ಉಪ ನಿರ್ದೇಶಕ ಡಾ.ಕಲ್ಲಪ್ಪ ತಿಳಿಸಿದರು.
    ಜಿಲ್ಲೆಯಲ್ಲಿ ಪಶು ಇಲಾಖೆಯ 156 ಸಂಸ್ಥೆಗಳಿವೆ. 18 ಪಶು ಆಸ್ಪತ್ರೆ, 69 ಪ್ರಾಥಮಿಕ ಪಶು ಆರೋಗ್ಯ ಚಿಕಿತ್ಸಾ ಕೇಂದ್ರಗಳು. 68 ಪಶು ಚಿಕಿತ್ಸಾಲಯಗಳು, 6 ಸಂಚಾರಿ ಯುನಿಟ್‌ಗಳಿವೆ. ಜಿಲ್ಲೆಗೆ 10 ಪಶು ಸಂಜೀವಿನಿ ವಾಹನಗಳು ಮಂಜೂರಾಗಿವೆ. 609 ಹುದ್ದೆಗಳಿದ್ದು 303 ಜನರು ಸೇವೆಯಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

    ಜಿಲ್ಲೆಯಲ್ಲಿ 4ನೇ ಹಂತದ ಕೃತಕ ಗರ್ಭಧಾರಣಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೇಂದ್ರದ ನ್ಯಾಷನಲ್ ಲೈವ್ ಸ್ಟಾಕ್ ಮಿಷನ್ ಅಡಿ ಜಿಲ್ಲೆಯಲ್ಲಿ ಕುರಿ ಸಾಕಣಿಕೆ ಘಟಕದ ನಿರ್ಮಾಣಕ್ಕೆ ಶೇ.50ರಷ್ಟು ರಿಯಾಯಿತಿ ನೀಡಲಾಗುತ್ತಿದೆ. 3 ಘಟಕಗಳಿಗೆ ಮಂಜೂರಾತಿ ದೊರೆತಿದೆ ಎಂದರು.

    ಜಿಲ್ಲಾ ಕುರಿ ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ತಿಪ್ಪೇಸ್ವಾಮಿ, ಪಶು ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಕುಮಾರ್, ಡಾ.ರಂಗಪ್ಪ, ಡಾ.ರೇವಣ್ಣ, ವೀರೇಶ್ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ದಾವಣಗೆರೆ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಶಂಕರಪ್ಪ, ಡಾ.ರಕ್ಷಿತ್ ಇದ್ದರು.
    ಜಿಲ್ಲಾಡಳಿತ, ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಪಶು ವೈದ್ಯಕೀಯ ಪರೀಕ್ಷಕರ ಸಂಘ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts