More

    ಭೂಮಿಯ ಫಲವತ್ತತೆ ಕಾಪಾಡಲು ಹೆಚ್ಚಿನ ದ್ವಿದಳ ಧಾನ್ಯಗಳನ್ನು ಬೆಳೆಯುವುದು ಅಗತ್ಯ

    ಚಿತ್ರದುರ್ಗ: ಭೂಮಿಯ ಲವತ್ತತೆ ಕಾಪಾಡಲು ಹೆಚ್ಚಿನ ದ್ವಿದಳ ಧಾನ್ಯಗಳನ್ನು ಬೆಳೆಯುವುದು ಅಗತ್ಯವಿದೆ ಎಂದು ಹಿರಿಯೂರು ತಾಲೂಕು ಬ ಬ್ಬೂರು ಕಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಒ.ಕುಮಾರ ರೈತರಿಗೆ ಸಲಹೆ ನೀಡಿದರು.

    ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,ಬಬ್ಬೂರು ಾರಂ ಕಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಚಿತ್ರದುರ್ಗ ತಾಲೂಕು ಹಳವು ದರದ ಪ್ರಗತಿಪರ ರೈತ ನಿಂಗನಾಯ್ಕ ಅವರ ಹೊಲದಲ್ಲಿ ಸೋಮವಾರ ಏರ್ಪಡಿಸಿದ್ದ ಅವರೆ ಬೆಳೆ ಕ್ಷೇತ್ರೋತ್ಸವದಲ್ಲಿ ಮಾತನಾಡಿ ದರು.

    ದ್ವಿ ದಳ ಧಾನ್ಯ ಅವರೆಯನ್ನು ಹಿಂದೆಲ್ಲ ಚಳಿಗಾಲದಲ್ಲಿ ಮಾತ್ರ ಬೆಳೆಯಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಪರಿಚಯಿಸಿರುವ ಹೆಬ್ಬಾಳ್-4 ತಳಿ ವರ್ಷ ಪೂರ್ತಿ ಬೆಳೆಯ ಬಹುದಾಗಿದೆ. ಆದ್ದರಿಂದ ಕೆವಿಕೆ,ಕಷಿ ಇಲಾಖೆಯಿಂದ ಜಾಗೃತಿ ಮೂಡಿಸಲಾಗುತ್ತಿದೆ. 3 ತಿಂ ಗಳ ಅವಧಿ ಈ ಬೆಳೆ ಮುಖ್ಯಬೆಳೆಯಾಗಿ ಅಥವಾ ಮೆಕ್ಕೆಜೋಳ,ರಾಗಿ,ಶೇಂಗಾ ಸೇರಿದಂತೆ ಮತ್ತಿತರ ಬೆಳೆಗಳ ಜತೆ ಅಂತರ ಬೆಳೆಯನ್ನಾಗಿ ಬೆಳೆಯ ಬಹುದು.

    ಉತ್ಕೃಷ್ಟ ಗುಣಮಟ್ಟದ ಈ ತಳಿ ಎಕರೆಗೆ 18-20 ಕ್ವಿಂಟಾಲ್ ಇಳುವರಿ ಬರುತ್ತದೆ. ಇದಕ್ಕೆ ಹೆಚ್ಚು ಗೊಬ್ಬರ ಬಳಸುವ ಅವಶ್ಯಕತೆ ಇಲ್ಲ, ಖರ್ಚು ಕಡಿಮೆ. ಹಸಿ ಕಾಯಿ ಮಾರಾಟ ಮಾಡಬಹುದು ಅಥವಾ ಬೀಜ ಸಂರಕ್ಷಿಸಿ ಮಾರಬಹುದು. ರೈತರ ಆರ್ಥಿಕ ವದ್ಧಿಗೆ ಈ ತಳಿ ಸಹಕಾರಿಯಾಗಿದೆ ಎಂದರು.

    ಹೆಬ್ಬಾಳ್-3 ತಳಿ ರೈತರಿಗೆ ಪರಿಚಯವಿದೆ. ಹೆಬ್ಬಾಳ್-4ನ್ನು ಇತ್ತೀಚಿನ ವರ್ಷಗಳಲ್ಲಿ ಪರಿಚಯಿಸಲಾಗಿದೆ. ಮುಂದಿನ ವರ್ಷ ಇನ್ನು ಉತ್ಕೃಷ್ಟ ಗುಣಮಟ್ಟದ ಹೆಬ್ಬಾಳ್-5ನ್ನು ಪರಿಚಯಿಸಲಾಗುತ್ತದೆ ಎಂದರು. ರೈತ ಮುಖಂಡ ಎಚ್.ಎಸ್.ರುದ್ರಪ್ಪ ಮಾತನಾಡಿ,ದೇಶದ ಹಸಿವನ್ನು ನೀಗಿಸುತ್ತಿರುವುದು ರೈತ. ದೇಶದ ಜನಸಂಖ್ಯೆಗೆ ಅನುಗುಣವಾಗಿ ಇಂದು ಆಹಾರ ಉತ್ಪಾದನೆ ಆಗುತ್ತಿದೆ ಎಂದರೆ ಅದಕ್ಕೆ ಕಷಿ ವಿಜ್ಞಾನಿಗಳು ಕಾರಣವೆಂದರು.

    ಹಳವುದರದ ಪ್ರಗತಿಪರ ರೈತ ಟಿ.ನಿಂಗನಾಯ್ಕ ಮಾತನಾಡಿ,ಎಚ್-4 ಅವರೆ ತಳಿ ಎರಡೂವರೆ ತಿಂಗಳಿಗೆ ಉತ್ತಮ ಇಳುವರಿ ಬಂದಿ ದೆ. ಮೊದಲ ಬೀಡಿನಲ್ಲಿ ಅಂದಾಜು 4 ಕ್ವಿಂಟಾಲ್ ಬಂದಿದೆ. ಇನ್ನೂ 2-3 ಕಟಾವು ಮಾಡಬಹುದು. ದಾವಣಗೆರೆ ಮಾರುಕಟ್ಟೆಗೆ ಕೆ.ಜಿ.ಗೆ 45 ರೂ.ನಂತೆ ನೀಡಲಾಗಿದ್ದು,ಉತ್ತಮ ಬೆಲೆ ಸಿಕ್ಕಿದೆ ಎಂದರು. ರೈತ ಮುಖಂಡ ರಂಗನಗೌಡ ಮಾತನಾಡಿದರು.

    ಹಳಗವಾಡಿ ಗ್ರಾಪಂ ಅಧ್ಯಕ್ಷ ಇ.ರಾಜನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಕಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ.ಎಸ್.ಓಂಕಾರಪ್ಪ,ರೈತ ಮುಖಂಡ ಎಚ್.ಈ.ಸಿದ್ದಲಿಂಗಪ್ಪ, ಮಂಜುಳಾಬಾಯಿ ಸೇರಿದಂತೆ ರೈತ ಮುಖಂಡರು ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts