More

    ಡೊನಾಲ್ಡ್​ ಟ್ರಂಪ್​ ಭೇಟಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತಾಜ್​ಮಹಲ್​ ವೀಕ್ಷಣೆ ರದ್ದು

    ಆಗ್ರಾ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಭೇಟಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ವಿಶ್ವ ವಿಖ್ಯಾತ ಸ್ಮಾರಕ ತಾಜ್​ಮಹಲ್​ ವೀಕ್ಷಣೆಯನ್ನು ನಿಷೇಧಿಸಲಾಗಿದೆ.

    ಟ್ರಂಪ್​ ಅವರು ಪತ್ನಿ ಸಮೇತ ತಾಜ್​ಮಹಲ್​ ಕಟ್ಟಡ ಸಂಕೀರ್ಣಕ್ಕೆ ಸಂಜೆ 5.15ಕ್ಕೆ ಭೇಟಿ ನೀಡುತ್ತಿರುವ  ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ರದ್ದುಪಡಿಸಲಾಗಿದೆ ಎಂದು ಆಗ್ರಾ ಜಿಲ್ಲಾಧಿಕಾರಿ ಪ್ರಭು ಎನ್​ ಸಿಂಗ್​ ತಿಳಿಸಿದ್ದಾರೆ.

    ಅಧ್ಯಕ್ಷ ಟ್ರಂಪ್​, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ತಾಜ್​ ಮಹಲ್​ ಸ್ಮಾರಕಕ್ಕೆ ಆಗಮಿಸುವ ಅವರು ಒಂದು ತಾಸು ಅಲ್ಲಿ ಕಳೆಯಲಿದ್ದಾರೆ.

    ಸಾರ್ವಜನಿಕರಿಗೆ ಸೋಮವಾರ ಬೆಳಗ್ಗೆ 11 ಗಂಟೆವರೆಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿ ನಂತರ ಪ್ರವೇಶವನ್ನು ರದ್ದು ಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

    ಷಹಜಹಾನ್​ 1631ರಲ್ಲಿ ಪತ್ನಿ ಮುಮತಾಜ್​ ಮಹಲ್​ ನೆನಪಿಗಾಗಿ ಯಮುನಾ ನದಿ ದಡದಲ್ಲಿ ನಿರ್ಮಿಸಿದ ಸ್ಮಾರಕ. ಮಾಲಿನ್ಯದಿಂದ ಕಪ್ಪು ಕಲೆಯಾಗಿರುವ ಸ್ಮಾರಕವನ್ನು ಟ್ರಂಪ್​ ಆಗಮನದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸ್ವಚ್ಛಗೊಳಿಸಿದೆ. ಅಲ್ಲದೆ ಉದ್ಯಾನವನ್ನು ಉತ್ತಮವಾಗಿ ನಿರ್ವಹಣೆ ಮಾಡಿ ಹಸಿರು ಕಾಪಾಡಿಕೊಳ್ಳಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts