More

    ಎರಡು ವರ್ಷ ವಿಚಾರಣೆ ಬಳಿಕ ‘ಇದು ನಮ್ಮ ವ್ಯಾಪ್ತಿಗೆ ಬರಲ್ಲ’ ಎಂದ ಕೋರ್ಟ್!

    ನವದೆಹಲಿ: ಮಿಟೂ ವಿವಾದ ಉತ್ತುಂಗದಲ್ಲಿದ್ದಾಗ ದಾಖಲಾಗಿದ್ದ ಹೈಪ್ರೊಫೈಲ್ ವ್ಯಕ್ತಿಯೊಬ್ಬರ ಮಾನಹಾನಿ ಖಟ್ಲೆಯೊಂದನ್ನು ಕಳೆದ ಎರಡು ವರ್ಷಗಳಿಂದ ವಿಚಾರಣೆ ನಡೆಸಿದ ದೆಹಲಿಯ ಕೋರ್ಟ್‌ನ ನ್ಯಾಯಾಧೀಶರ ಇದೀಗ ‘‘ಈ ಪ್ರಕರಣವನ್ನು ನಾವು ವಿಚಾರಣೆ ನಡೆಸಬೇಕಾಗಿಯೇ ಇರಲಿಲ್ಲ’’ ಎಂದು ಹೇಳಿರುವುದು ಎಲ್ಲರನ್ನೂ ಅಚ್ಚರಿಗೆ ಈಡು ಮಾಡಿದೆ.

    ಕೇಂದ್ರದಲ್ಲಿ ಸಚಿವರಾಗಿದ್ದ ಹಿರಿಯ ಪತ್ರಕರ್ತ ಎಂ.ಜೆ. ಅಕ್ಬರ್ ಇಪ್ಪತ್ತಕ್ಕೂ ಹೆಚ್ಚು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದರೆನ್ನಲಾದ ಪ್ರಕರಣ ಇದು. ಪತ್ರಕರ್ತೆ ಪ್ರಿಯಾ ರಮಣಿ ಸೇರಿದಂತೆ ಹಲವು ಮಹಿಳೆಯರು ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಕ್ಬರ್ ದೆಹಲಿ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಬಹುತೇಕ ವಿಚಾರಣೆ ಮುಗಿದಿದೆ. ಅಂತಿಮ ವಾದಮಂಡನೆಯೂ ಆಗಿದೆ. ಪ್ರಿಯಾ ರಮಣಿ ಪರ ವಕೀಲರ ವಾದಕ್ಕೆ ಅಕ್ಬರ್ ಪರ ವಕೀಲರು ಅಂತಿಮ ಪ್ರತಿವಾದ ಮಂಡಿಸುವ ಈ ಹಂತದಲ್ಲಿ ಮಂಗಳವಾರ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹೀಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಮುನಿರತ್ನಗೆ ಕೊನೆಗೂ ಘೋಷಣೆಯಾಯ್ತು ಬಿಜೆಪಿ ಟಿಕೆಟ್!

    ‘‘ಸುಪ್ರೀಂ ಕೋರ್ಟ್‌ನ ನಿರ್ದೇಶನದ ಪ್ರಕಾರ, ಈ ನ್ಯಾಯಾಲಯ ಕೇವಲ ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾದ ಪ್ರಕರಣಗಳನ್ನಷ್ಟೇ ವಿಚಾರಣೆ ನಡೆಸಬೇಕು, ಅವರು ದಾಖಲಿಸಿದ ಪ್ರಕರಣಗಳನ್ನಲ್ಲ. ಹಾಗಾಗಿ ಈ ಕೇಸನ್ನು ಇನ್ನೊಂದು ಕೋರ್ಟಿಗೆ ವರ್ಗಾಯಿಸಲಾಗುವುದು’’ ಎಂದಿದ್ದಾರೆ. ನಂತರ ಪ್ರಕರಣವನ್ನು ಸೂಕ್ತ ಆದೇಶಕ್ಕಾಗಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟಿಗೆ ವರ್ಗಾಯಿಸಿದ್ದಾರೆ. ಈಗ ಈ ಕೇಸನ್ನು ಬೇರೆ ಯಾವ ಕೋರ್ಟು ವಿಚಾರಣೆ ನಡೆಸಬೇಕೆಂಬುದನ್ನು ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನಿರ್ಧರಿಸಲಿದೆ. ಇದುವರೆಗೆ ವಿಚಾರಣೆ ನಡೆಸಿದ ನ್ಯಾಯಾಧೀಶರೇ ಮುಂದುವರಿಸಬೇಕೆಂಬ ಆದೇಶವನ್ನೂ ನೀಡಬಹುದಾಗಿದೆ. ಬೇರೆ ಕೋರ್ಟಿಗೆ ವರ್ಗಾಯಿಸಿದರೆ ಅಂತಿಮ ವಾದ-ಪ್ರತಿವಾದಗಳನ್ನು ಮತ್ತೆ ಹೊಸದಾಗಿ ಮಂಡಿಸಬೇಕಾಗುತ್ತದೆ. ಇದನ್ನೂ ಓದಿ:  ಕದ್ದ ಕಲಾಕೃತಿಗಳನ್ನೆಲ್ಲ 15ವರ್ಷಗಳ ಬಳಿಕ ಹಿಂದಿರುಗಿಸಿದ ಮಹಿಳೆ; ದುರದೃಷ್ಟವೇ ಕಾರಣ  

    ಬಿಜೆಪಿ ಸಂಸದರೂ ಆಗಿರುವ ಅಕ್ಬರ್ ಈ ಕೇಸನ್ನು 2018ರ ಅಕ್ಟೋಬರ್‌ನಲ್ಲಿ ಹೂಡಿದ್ದರು. 20 ವರ್ಷಗಳ ಹಿಂದೆ ಅಕ್ಬರ್ ತಮ್ಮೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದರೆಂದು ಪ್ರಿಯಾ ರಮಣಿ ಮಿಟೂ ಆಂದೋಲನದ ವೇಳೆ ಆರೋಪಿಸಿದ್ದರು. ನಂತರ ಹಲವು ಮಹಿಳೆಯರು ತಮಗೂ ಅಕ್ಬರ್‌ರಿಂದ ಇದೇ ರೀತಿಯ ಅನುಭವವಾಗಿತ್ತು ಎಂದು ಆರೋಪಿಸಿದ್ದರು. ಅಕ್ಬರ್ ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದಿದ್ದರು.

    ಕಪ್ಪು ಬಣ್ಣದ ಭೀತಿಯಲ್ಲಿ ಪಾಕ್​ ಗಡಗಡ: 21ನೇ ತಾರೀಖು ಮುಹೂರ್ತ ಫಿಕ್ಸ್​? ವಿನಾಶದಿಂದ ಹೊರಬರಲು ಸರ್ಕಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts