More

    ಕೇಂದ್ರದ ಒಂದೇ ನಿರ್ಧಾರಕ್ಕೆ ದೇಶದ 22 ರಾಜ್ಯಗಳಲ್ಲಿ ಪೆಟ್ರೋಲ್‌-ಡೀಸೆಲ್‌ ದರ ಇಳಿಕೆ: ಜಾಸ್ತಿ ಇಳಿಕೆ ಎಲ್ಲಿ ಗೊತ್ತೇ?

    ನವದೆಹಲಿ: ಕೇಂದ್ರ ಸರ್ಕಾರ ಮೊನ್ನೆ ಕೈಗೊಂಡ ಒಂದೇ ಒಂದು ನಿರ್ಧಾರಕ್ಕೆ ದೇಶದ 22 ರಾಜ್ಯಗಳು ಸ್ಪಂದಿಸಿದ್ದು ಮಾತ್ರವಲ್ಲದೆ, ಅವು ತಂತಮ್ಮ ರಾಜ್ಯಗಳಲ್ಲಿ ಪೆಟ್ರೋಲ್-ಡೀಸೆಲ್‌ ಬೆಲೆಯನ್ನು ಇಳಿಸಿವೆ.

    ಪೆಟ್ರೋಲ್‌-ಡೀಸೆಲ್‌ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ನೂರರ ಗಡಿಯನ್ನೂ ದಾಟಿ ಮಾರಾಟವಾಗುತ್ತಿತ್ತು. ಇದರ ಬಗ್ಗೆ ಸಾರ್ವಜನಿಕರು ತೀವ್ರ ಬೇಸರವನ್ನು ಹೊಂದಿದ್ದರು. ಮಾತ್ರವಲ್ಲದೆ, ತೈಲ ಬೆಲೆ ಏರಿಕೆಯಿಂದ ಸರಕು-ಸಾಗಣಿಕೆ ವೆಚ್ಚ ಹೆಚ್ಚಾಗಿ ಇತರ ದಿನಬಳಕೆ ವಸ್ತುಗಳ ಬೆಲೆ ಕೂಡ ಏರಿಕೆ ಕಂಡಿದ್ದವು.

    ಈ ಎಲ್ಲದರ ಹಿನ್ನೆಲೆಯಲ್ಲಿ ಮೊನ್ನೆ ಕೇಂದ್ರ ಸರ್ಕಾರವು ಪೆಟ್ರೋಲ್‌-ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಸಿತ್ತು. ಪೆಟ್ರೋಲ್‌ ಮೇಲೆ 5 ಹಾಗೂ ಡೀಸೆಲ್‌ ಮೇಲೆ 10 ರೂಪಾಯಿ ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಇಳಿಸಿತ್ತು.

    ಇದನ್ನೂ ಓದಿ: ಈಜು ಬರದೆ ಮೋಜಿಗಳಿದು ಪ್ರಾಣ ಕಳೆದುಕೊಂಡ; ಹಬ್ಬಕ್ಕೆಂದು ಊರಿಗೆ ಬಂದಿದ್ದವನ ಸಾವು..

    ಅದರ ಬೆನ್ನಿಗೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಪೆಟ್ರೋಲ್-ಡೀಸೆಲ್‌ ಮೇಲಿನ ತೆರಿಗೆ ಇಳಿಸುವ ಮೂಲಕ ಕೇಂದ್ರದ ಜತೆಗೆ ರಾಜ್ಯವೂ ತೈಲ ಬೆಲೆಯನ್ನು ಇಳಿಸಲಿದೆ ಎಂದು ಪ್ರಕಟಿಸಿದ್ದರು. ಮಾತ್ರವಲ್ಲ ಅದು ನಿನ್ನೆಯಿಂದಲೇ ಜಾರಿಗೂ ಬಂದಿದೆ.

    ಇದನ್ನೂ ಓದಿ: ಅಪ್ಪು ಮೇಲಿನ ಅಭಿಮಾನ, ಅಪ್ಪ-ಮಗನ ಕೇಶಮುಂಡನ; ಸಾರ್ವಜನಿಕರಿಗೆ ಅನ್ನಸಂತರ್ಪಣೆ

    ಇನ್ನುಕೇಂದ್ರ ಪೆಟ್ರೋಲ್-ಡೀಸೆಲ್‌ ಮೇಲಿನ ಅಬಕಾರಿ ಸುಂಕ ಇಳಿಸಿದ ಬಳಿಕ ಎರಡು ದಿನಗಳಲ್ಲಿ ದೇಶದ ಕೇಂದ್ರಾಡಳಿತ ಪ್ರದೇಶಗಳೂ ಸೇರಿ ಒಟ್ಟು 22 ರಾಜ್ಯಗಳಲ್ಲಿ ಅಲ್ಲಿನ ವ್ಯಾಟ್‌ ಇಳಿಸುವ ಮೂಲಕ ಪೆಟ್ರೋಲ್‌-ಡೀಸೆಲ್‌ ಬೆಲೆಯನ್ನು ಇಳಿಸಿವೆ.

    ಇದನ್ನೂ ಓದಿ: ಜೊತೆಗಿದ್ದ ಗೆಳೆಯರೇ ಒಟ್ಟಿಗೇ ಉಂಡು, ಕೊಂದರು; ಡ್ರಗ್ಸ್‌ ನಶೆ, ಹಣದ ಆಸೆಗೆ ಬಿದ್ದು ಅಪಹರಿಸಿ ಕೊಲೆ ಮಾಡಿದ್ರು..

    ಆ 22 ರಾಜ್ಯಗಳ ಪೈಕಿ ಪೆಟ್ರೋಲ್-ಡೀಸೆಲ್‌ ಬೆಲೆಯನ್ನು ಅತ್ಯಧಿಕ ಎಂಬಂತೆ ಇಳಿಸಿದ ರಾಜ್ಯವೆಂದರೆ ಅದು ಕರ್ನಾಟಕ. ಪೆಟ್ರೋಲ್‌ ಬೆಲೆಯನ್ನು ಲೀಟರ್‌ಗೆ 13.35 ರೂ. ಇಳಿಸುವ ಮೂಲಕ ಕರ್ನಾಟಕ ಮುಂಚೂಣಿಯಲ್ಲಿದ್ದರೆ, ಆ ನಂತರದ ಎರಡು ಸ್ಥಾನದಲ್ಲಿ ಪುದುಚೇರಿ ಮತ್ತು ಮಿಜೋರಾಮ್‌ಗಳಿವೆ.

    ಇದನ್ನೂ ಓದಿ: ದೇಶದ ಜನತೆಗೆ ಮತ್ತೊಂದು ಸಂತಸದ ಸುದ್ದಿ; ಆ ತೈಲದ್ದಾಯ್ತು, ಈಗ ಈ ಎಣ್ಣೆ ಬೆಲೆಯೂ ಇಳಿಕೆ..

    ಇನ್ನು ಡೀಸೆಲ್‌ ವಿಚಾರದಲ್ಲೂ ಕರ್ನಾಟಕವೇ ಮೊದಲ ಸ್ಥಾನದಲ್ಲಿದೆ. ಡೀಸೆಲ್‌ ದರವನ್ನು ಲೀಟರ್‌ಗೆ 19.49 ರೂ. ಇಳಿಸುವ ಮೂಲಕ ಅತಿ ಹೆಚ್ಚು ದರ ಇಳಿಕೆ ಪ್ರಕಟಿಸಿದ ರಾಜ್ಯಗಳ ಪೈಕಿ ಕರ್ನಾಟಕ ಟಾಪ್‌-1 ಸ್ಥಾನದಲ್ಲಿದೆ. ಇಲ್ಲೂ ಪುದುಚೇರಿ ಮತ್ತು ಮಿಜೋರಾಮ್‌ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

    ಪುನೀತ್ ರಾಜಕುಮಾರ್ ಸಾವಿನ ಕುರಿತು ಮತ್ತೊಂದು ಅನುಮಾನ!?; ತನಿಖೆಗೆ ಆಗ್ರಹಿಸಿ ಪೊಲೀಸ್ ಠಾಣೆಗೂ ದೂರು…

    ಭಾನುವಾರ ಸಂಜೆ ರಾಜ್ಯಾದ್ಯಂತ ಏಕಕಾಲಕ್ಕೆ ಪುನೀತ್ ರಾಜಕುಮಾರ್‌ಗೆ ಬೃಹತ್ ಶ್ರದ್ಧಾಂಜಲಿ: ಎಲ್ಲೆಲ್ಲಿ, ಹೇಗೆ? ಇಲ್ಲಿದೆ ಮಾಹಿತಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts