More

    VIDEO | ಪ್ರಧಾನಿ ಮೋದಿಯವರ ಹೆಲಿಕಾಪ್ಟರ್‌ನಿಂದ ತೆಗೆದ ರಾಮಮಂದಿರದ ವೈಮಾನಿಕ ನೋಟ

    ಅಯೋಧ್ಯೆ: ಜನವರಿ 22, 2024 ಭಾರತೀಯರಿಗೆ ಅತ್ಯಂತ ಮಹತ್ವದ ದಿನವಾಗಿದೆ. ಏಕೆಂದರೆ ಇಂದು ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಸದ್ಯ ಎಲ್ಲರ ದೃಷ್ಟಿ ರಾಮಮಂದಿರದತ್ತ ನೆಟ್ಟಿದೆ. ಎಲ್ಲಾ ರಾಮ ಭಕ್ತರು ತಮ್ಮ ರಾಮಲಲ್ಲಾನನ್ನು ರಾಮಮಂದಿರದಲ್ಲಿ ನೋಡಲು ಬಯಸುತ್ತಾರೆ. ಏತನ್ಮಧ್ಯೆ, ರಾಮಮಂದಿರದ ವೈಮಾನಿಕ ನೋಟವು ರಿವೀಲ್ ಆಗಿದ್ದು, ಅದು ನಿಮ್ಮ ಸಂಪೂರ್ಣ ಗಮನವನ್ನು ಸೆಳೆಯುತ್ತದೆ. ಇನ್ನು ರಾಮಮಂದಿರ ಆಕಾಶದಿಂದ ಕೆಳಗೆ ನೋಡಿದರೆ ಹೇಗೆ ಕಾಣುತ್ತದೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ನೋಟವನ್ನು ಪ್ರಧಾನಿ ನರೇಂದ್ರ ಮೋದಿಯವರ ಹೆಲಿಕಾಪ್ಟರ್‌ನಿಂದ ತೆಗೆದುಕೊಳ್ಳಲಾಗಿದೆ.

    ಭವ್ಯವಾದ ರಾಮಮಂದಿರದ ವೈಮಾನಿಕ ನೋಟ 
    ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೆಲಿಕಾಪ್ಟರ್‌ನಿಂದ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ, ಇದರಲ್ಲಿ ಭವ್ಯವಾದ ರಾಮಮಂದಿರವನ್ನು ಮೇಲಿನಿಂದ ನೋಡಬಹುದಾಗಿದೆ. ನಾವು ಆಕಾಶದಿಂದ ರಾಮಮಂದಿರವನ್ನು ನೋಡಿದರೆ ಅದು ಹೇಗೆ ಕಾಣುತ್ತದೆ ಎಂಬುದನ್ನು ಈ ವಿಡಿಯೋದ ಮೂಲಕ ನೀವು ನೋಡಬಹುದು. ಇಂದು ರಾಮಮಂದಿರದ ಉತ್ಸಾಹವು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಅನೇಕ ದೇಶಗಳಲ್ಲಿ ಕಂಡುಬರುತ್ತಿದೆ. ಸುಮಾರು 55 ದೇಶಗಳ ಜನರು ಟಿವಿ, ಸಾಮಾಜಿಕ ಮಾಧ್ಯಮ ಮುಂತಾದ ವಿವಿಧ ಮಾಧ್ಯಮಗಳ ಮೂಲಕ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ.

    ಇಡೀ ರಾಮಮಂದಿರವನ್ನು ಅಲಂಕರಿಸಲಾಗಿದೆ
    ರಾಮಮಂದಿರದ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಇದರೊಂದಿಗೆ ಇಂದು ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ನಾಳೆಯಿಂದ ಸಾಮಾನ್ಯ ಜನರಿಗೆ ದೇವಾಲಯವನ್ನು ತೆರೆಯಲಾಗುತ್ತದೆ. ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನ ಇಡೀ ದೇವಸ್ಥಾನವನ್ನು ಹೂವಿನಿಂದ ಅಲಂಕರಿಸಲಾಗಿದೆ. ಇದರ ಫೋಟೋಗಳು ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ವೈರಲ್ ಆಗುತ್ತಿವೆ. ಇಡೀ ದೇವಾಲಯದ ಸಂಕೀರ್ಣವನ್ನು ಹೂವುಗಳು ಮತ್ತು ದೀಪಗಳಿಂದ ಅಲಂಕರಿಸಲಾಗಿದ್ದು ಅದು ತುಂಬಾ ಆಕರ್ಷಕವಾಗಿ ಕಾಣುತ್ತದೆ.

    ಮೂರು ಮಹಡಿಗಳನ್ನು ಹೊಂದಿರುವ ಅಯೋಧ್ಯೆ ರಾಮ ಮಂದಿರ ವಿನ್ಯಾಸದ A to Z ವಿವರ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts