More

    ಅದ್ವೈತ-ಬಸವತತ್ವ ಅವಶ್ಯ

    ಹುಬ್ಬಳ್ಳಿ: ಅದ್ವೈತ ಹಾಗೂ ಬಸವತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮನುಷ್ಯ ಮನುಷ್ಯನಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಬೈಲೂರು-ಮುಂಡರಗಿ ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು.

    ಹುಬ್ಬಳ್ಳಿಯ ರುದ್ರಾಕ್ಷಿ ಮಠದಲ್ಲಿ ಆಯೋಜಿಸಿರುವ ಶ್ರೀ ನಿಜಗುಣ ಶಿವಯೋಗಿಗಳವರ 75ನೇ ವಾರ್ಷಿಕ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಅದ್ವೈತ ಹಾಗೂ ಬಸವತತ್ವಗಳನ್ನು ತಿಳಿಸುವಲ್ಲಿ ಮಠಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.

    ನಿಜಗುಣ ಶಿವಯೋಗಿಗಳು 15ನೇ ಶತಮಾನದಲ್ಲಿ ಮೈಸೂರು ಜಿಲ್ಲೆ ಕೊಳ್ಳೆಗಾಲದ ರಾಜರಾಗಿದ್ದರು. ಅತ್ಯಂತ ಪ್ರಭಾವಿ ರಾಜಮನೆತನದ ನಿಜಗುಣರು ರಾಜಭೋಗ ಹಾಗೂ ಸಂಸಾರವನ್ನು ತ್ಯಜಿಸಿ ಶಿವಯೋಗಿಗಳಾದರು. ಅದ್ವೈತ ಸಿದ್ಧಾಂತದ ಯತಿಗಳಾಗಿ ಆರು ಅದ್ಭುತ ಗ್ರಂಥಗಳನ್ನು ಬರೆದಿದ್ದರು. ಅದರಲ್ಲಿ ಕೈವಲ್ಯ ಪದ್ಧತಿ ವಿಶೇಷವಾಗಿತ್ತು. ಇಂತಹ ನಿಜಗುಣ ಶಿವಯೋಗಿಗಳವರ ಜಯಂತೋತ್ಸವ ಉತ್ತರ ಕರ್ನಾಟಕದಲ್ಲಿ ವಿಶೇಷವಾಗಿ ವಿರಕ್ತ ಮಠಗಳಲ್ಲಿ ಆಚರಣೆ ಮಾಡತಕ್ಕದ್ದು. ರುದ್ರಾಕ್ಷಿ ಮಠ ಮಾತ್ರ ನಿಜಗುಣ ಶಿವಯೋಗಿಗಳ ಜಯಂತಿ, ಆಚರಣೆ ಮಾಡುತ್ತ ಬಂದು ಇಂದಿಗೆ 75 ವರ್ಷಗಳಾಗಿವೆ ಎಂದು ಪ್ರಶಂಸಿಸಿದರು.

    ಧಾರವಾಡ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಹಂದಿಗುಂದದ ಶ್ರೀ ಶಿವಾನಂದ ಸ್ವಾಮೀಜಿ, ಗುಳೇದಗುಡ್ಡದ ಶ್ರೀ ಒಪ್ಪತೇಶ್ವರ ಸ್ವಾಮೀಜಿ, ರುದ್ರಾಕ್ಷಿ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಪಾಲ್ಗೊಂಡಿದ್ದರು.

    ಜಯಂತಿ ಉತ್ಸವದ ಕಾರ್ಯದರ್ಶಿ ಮಲ್ಲಿಕಾರ್ಜುನ ಸಾವಕಾರ ಸ್ವಾಗತಿಸಿದರ. ಬಸವರಾಜ ಮುಳ್ಳೊಳ್ಳಿ, ಮಹಾಲಿಂಗೇಶ ಜಗಳೂರು, ಪ್ರಭುಲಿಂಗ ಶಿವಶಿಂಪಿ, ಅನಿಲ್ ಕವಿಶೆಟ್ಟಿ, ಮಹಾಂತೇಶ ಗಿರಿಮಠ, ಶಂಭು ಲಕ್ಷ್ಮೇಶ್ವರಮಠ, ಇತರರು ಇದ್ದರು. ಶ್ರೀ ಪರಂಜ್ಯೋತಿ ಮಹಿಳಾ ಮಂಡಳದವರು ಪ್ರಾರ್ಥನೆ ಹಾಡಿದರು. ಮೂರುಸಾವಿರ ಮಠದ ಸಂಗೀತ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ಲಕ್ಷ್ಮಿ ಇವರಿಂದ ವಚನ ಗಾಯನ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts